Wed. Nov 20th, 2024

Udupi: ಹಗ್ಗ ಹಿಡಿದು ಹೊಳೆ ದಾಟಿ ವಿದ್ಯುತ್ ದುರಸ್ತಿಗೊಳಿಸಿದ ಲೈನ್ ಮ್ಯಾನ್ – ಮೆಸ್ಕಾಂ ಸಿಬ್ಬಂದಿ ಪ್ರಮೋದ್ ರ ಸಾಹಸಕ್ಕೆ ಎಲ್ಲೆಡೆ ಮೆಚ್ಚುಗೆ

ಉಡುಪಿ:(ಸೆ.28) ಮೆಸ್ಕಾಂ ಸಿಬ್ಬಂದಿಯೊಬ್ಬರು ಹೊಳೆಯಲ್ಲಿ ಈಜಾಡುತ್ತಾ ನದಿ ದಾಟಿ ಸಾಹಸ ಮೆರೆದು , ತುಂಡಾದ ವಿದ್ಯುತ್ ತಂತಿಯನ್ನು ದುರಸ್ತಿಗೊಳಿಸಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ನೀಡಿದ ಘಟನೆ ಉಡುಪಿ ಹೆಬ್ರಿಯಲ್ಲಿ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಇದನ್ನೂ ಓದಿ: ⭕Puttur : ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ದಾವಣಗೆರೆ ಚೆನ್ನಗಿರಿ ಮೂಲದ ಹೆಬ್ರಿ ಮೆಸ್ಕಾಂ ಸಿಬ್ಬಂದಿಯಾಗಿರುವ ಪ್ರಮೋದ್ ಅವರ ಈ ಸಾಹಸಕ್ಕೆ ಎಲ್ಲೆಡೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಶಿವಪುರ ಗ್ರಾಮದ ಉಪ್ಪಳ ಮೂರು ಸಾಲು ಹೊಳೆಯ ಮಧ್ಯದಲ್ಲಿ ಹಾದು ಹೋದ ವಿದ್ಯುತ್ ತಂತಿ ತುಂಡಾಗಿ ಹಲವಾರು ದಿನಗಳು ಕಳೆದಿತ್ತು. ವಿಪರೀತ ಮಳೆಯಿಂದಾಗಿ ದುರಸ್ತಿ ಮಾಡಲಾಗದೆ ಹಾಗೆ ಉಳಿದಿತ್ತು.

ಈ ಪರಿಸರದ ಜನ ವಿದ್ಯುತ್ ಮೋಟರ್ ಗಳನ್ನು ಬಳಸಲಾಗದೆ ಸಮಸ್ಯೆಯನ್ನು ಎದುರಿಸುತ್ತಿದ್ದರು. ಈ ವಿಷಯವನ್ನು ತಿಳಿದ ಪ್ರಮೋದ್ ಅವರು ಹಾಗೂ ಅರೆಕಾಲಿಕ ಸಿಬ್ಬಂದಿ ಸುಧೀರ್ ಸಹಾಯದೊಂದಿಗೆ ಕೇವಲ ಇಬ್ಬರೇ ತೆರಳಿ ಸಮಸ್ಯೆ ಬಗೆಹರಿಸಿದ್ದಾರೆ.

ವಿದ್ಯುತ್ ತಂತಿಯ ಒಂದು ತುದಿಗೆ ಹಗ್ಗವನ್ನು ಕಟ್ಟಿ ಸುಮಾರು 70 ಅಡಿ ದೂರಕ್ಕೆ ಈಜಾಡಿಕೊಂಡು ಹೋಗಿ ತುಂಡಾಗಿದ್ದ ವಿದ್ಯುತ್ ತಂತಿಯನ್ನು ದುರಸ್ತಿಪಡಿಸಿ ಪರಿಸರದ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ನೀಡಿದ್ದಾರೆ.

ಪ್ರಮೋದ್ ಅವರು ಕಳೆದ 2 ವರ್ಷದ ಹಿಂದೆ ಹೆಬ್ರಿ ಮೆಸ್ಕಾಂಗೆ ಸಿಬ್ಬಂದಿಯಾಗಿ ನೇಮಕಾತಿಗೊಂಡಿದು, ಮೊದಲಿಂದಲೇ ಈಜನ್ನು ಕರಗತ ಮಾಡಿಕೊಂಡಿದ್ದರು ಅನ್ನುವ ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *