ಉಜಿರೆ:(ಸೆ.28) ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಬೆಳ್ತಂಗಡಿ , ಗ್ರಾಮ ಪಂಚಾಯತ್ ಉಜಿರೆ ಇದರ ಆಶ್ರಯದಲ್ಲಿ
ಇದನ್ನೂ ಓದಿ: ⭕ರಾಯಚೂರು : ಮನೆ ಖಾಲಿ ಮಾಡು ಎಂದ ಮಾಲಕಿ
ಸ್ವಚ್ಛತೆಯೇ ಸೇವೆ 2024ರ ಕಾರ್ಯಕ್ರಮವು “ಸ್ವಭಾವ ಸ್ವಚ್ಚತೆ;ಸಂಸ್ಕಾರ ಸ್ವಚ್ಛತೆ” ಎಂಬ ಧ್ಯೇಯ ವಾಕ್ಯದ ಮೂಲಕ ಸ್ವಚ್ಛತೆಯ ಕುರಿತಾದ ಅರಿವು ಬಗ್ಗೆ ಬೀದಿ ನಾಟಕವು ಉಜಿರೆ ಕೆಎಸ್ ಆರ್ ಟಿಸಿ ಬಸ್ ಸ್ಟ್ಯಾಂಡ್ ನ ಮುಂಭಾಗ ಶನಿವಾರ ನಡೆಯಿತು.
ಈ ವೇಳೆ ನಡೆದ ಬೀದಿ ನಾಟಕದಲ್ಲಿ ಸ್ಚಚ್ಛತೆಯ ಬಗ್ಗೆ ಅರಿವು ಮೂಡಿಸಲಾಯಿತು. ಜೊತೆಗೆ ಪ್ಲಾಸ್ಟಿಕ್ ಬಳಕೆಯಿಂದ ಬರುವ ರೋಗಗಳ ಬಗ್ಗೆ ಸಾರ್ವಜನಿಕರಿಗೆ ಹಾಗೂ ವ್ಯಾಪಾರಸ್ಥರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡಲಾಯಿತು.
ಇದೇ ವೇಳೆ ನಡೆದ ಬೀದಿ ನಾಟಕಗಳಲ್ಲಿ ಪಾಲ್ಗೊಂಡ ಮಕ್ಕಳು ಹಾಗೂ ಪೋಷಕರು ಸ್ವಚ್ಛತೆ ಕಾಪಾಡಿ, ಪ್ಲಾಸ್ಟಿಕ್ ಮುಕ್ತ ರಾಷ್ಟ್ರವನ್ನು ಕಟ್ಟೋಣ ಅನ್ನುವ ಮಹಾನ್ ಸಂಕಲ್ಪ ಮಾಡಿದರು.
ಕಾರ್ಯಕ್ರಮದಲ್ಲಿ ಪಂಚಾಯತ್ ನ ಪ್ರಮುಖರು, ಮಕ್ಕಳು ಮತ್ತು ಮಕ್ಕಳ ಪೋಷಕರು ಪಾಲ್ಗೊಂಡಿದ್ದರು.