Fri. Apr 11th, 2025

Viral video: ಮಂಗಳಮುಖಿಯಂತೆ ವೇಷ ತೊಟ್ಟು ಬಸ್ ನಲ್ಲಿ ಭಿಕ್ಷಾಟನೆ – ಯುವಕ ತಗ್ಲಾಕೊಂಡಿದ್ದು ಹೇಗೆ ಗೊತ್ತಾ?

Viral video: ಕೆಲ ಸೋಮಾರಿಗಳು ಕೈ ಕಾಲುಗಳು ಸರಿ ಇದ್ರೂ ಕೂಡಾ ದುಡಿಯಲು ಮನಸ್ಸಿಲ್ಲದೆ ಭಿಕ್ಷೆ ಬೇಡುತ್ತಾ ಜೀವನ ಸಾಗಿಸುವ ಕಾಯಕಕ್ಕೆ ಕೈ ಹಾಕುತ್ತಾರೆ.

ಇದನ್ನೂ ಓದಿ; ⭕ಚಿಕ್ಕಮಗಳೂರು : “ಸರ್.. ಗಲಾಟೆ ಬೇಗ ಬನ್ನಿ” ಎಂದು ಪೋಲಿಸರಿಗೆ ಕಾಲ್‌ ಮಾಡಿದ ವ್ಯಕ್ತಿ

ಹೀಗೆ ಮಂಗಳಮುಖಿಯಂತೆ ವೇಷತೊಟ್ಟು, ಅಂಗವಿಕಲನಂತೆ ನಟಿಸಿ ಸುಳ್ಳು ಹೇಳುತ್ತಾ ಭಿಕ್ಷೆ ಬೇಡುವಾಗ ಸಿಕ್ಕಿಬಿದ್ದ ಅನೇಕ ಘಟನೆಗಳು ಕೂಡಾ ನಡೆದಿವೆ. ಅಂತಹದ್ದೇ ಘಟನೆಯೊಂದು ನಡೆದಿದ್ದು, ಯುವಕನೊಬ್ಬ ಮಂಗಳಮುಖಿಯಂತೆ ವೇಷ ತೊಟ್ಟು ಬಸ್ ಒಳಗೆ ಭಿಕ್ಷೆ ಬೇಡಲು ಹೋಗಿ ಸಿಕ್ಕಿಬಿದ್ದಿದ್ದಾನೆ.

ಮೈ ಬಗ್ಗಿಸಿ ದುಡಿಯುವ ಬದಲು ಈ ರೀತಿ ಸುಳ್ಳು ಹೇಳಿ ಭಿಕ್ಷಾಟನೆ ಮಾಡ್ತೀಯಾ ಎಂದು ಬಸ್ಸಿನಲ್ಲಿದ್ದ ಪ್ರಯಾಣಿಕರು ಆತನಿಗೆ ಧರ್ಮದೇಟು ಕೊಟ್ಟು ಬಸ್ಸಿಂದ ಹೊರ ಹಾಕಿದ್ದಾರೆ.

ಈ ಕುರಿತ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, “ಮಂಗಳಮುಖಿಯಂತೆ ವೇಷ ಧರಿಸಿ ಬಸ್ಸಿನೊಳಗೆ ಭಿಕ್ಷೆ ಬೇಡಲು ಬಂದಾಗ ಸಿಕ್ಕಿಬಿದ್ದ ಯುವಕ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಯುವಕನೊಬ್ಬನಿಗೆ ಬಸ್ಸಿನೊಳಗೆ ಪ್ರಯಾಣಿಕರು ಹಿಗ್ಗಾಮುಗ್ಗಾ ಥಳಿಸುತ್ತಿರುವ ದೃಶ್ಯವನ್ನು ಕಾಣಬಹುದು.

ಯುವಕನೊಬ್ಬ ಮಂಗಳಮುಖಿಯಂತೆ ವೇಷ ತೊಟ್ಟು ಬಸ್ಸಿನೊಳಗೆ ಭಿಕ್ಷೆ ಬೇಡಲು ಬಂದ ಸಂದರ್ಭದಲ್ಲಿ ಆತನ ಬಣ್ಣ ಬಯಲಾಗಿದ್ದು, ಮೈ ಬಗ್ಗಿಸಿ ದುಡಿಯುವ ಬದಲು ಈ ರೀತಿ ಸುಳ್ಳು ಹೇಳಿ ಭಿಕ್ಷಾಟನೆ ಮಾಡ್ತೀಯಾ ಎಂದು ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಆತನಿಗೆ ಧರ್ಮದೇಟು ನೀಡಿ ಕೊನೆಗೆ ಬಸ್ಸಿನಿಂದ ಒದ್ದು ಹೊರ ಹಾಕಿದ್ದಾರೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು