Sat. Apr 19th, 2025

Belthangady : ಹಣ , ದಾಖಲೆಗಳಿದ್ದ ಬ್ಯಾಗ್ ಹಿಂದಿರುಗಿಸಿದ ಗರ್ಡಾಡಿಯ ವರುಣ್ ಪೂಜಾರಿ – ಯುವಕನ ಕಾರ್ಯಕ್ಕೆ ಶಾಸಕ ಹರೀಶ್ ಪೂಂಜರಿಂದ ಅಭಿನಂದನೆ

ಬೆಳ್ತಂಗಡಿ:(ಸೆ.29) ಇತ್ತೀಚೆಗೆ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಸಮೀಪದ ನಯರಾ ಪೆಟ್ರೋಲ್ ಪಂಪ್ ಬಳಿ ಅದೇ ಊರಿನ ಮಹಿಳೆ ಪದ್ಮಾವತಿ ಎಂಬವರ

ಇದನ್ನೂ ಓದಿ: ⭕ಉಡುಪಿಯ ಹಿರಿಯ ಛಾಯಾಗ್ರಾಹಕ ಗುರುದತ್ ಕಾಮತ್ ನಿಧನ

ಒಂದು ಲಕ್ಷ ರೂಪಾಯಿ ಹಣ ಹಾಗೂ ಅನೇಕ ಅಗತ್ಯ ದಾಖಲೆಗಳಿದ್ದ ಬ್ಯಾಗ್ ಬೆಳ್ತಂಗಡಿ ತಾಲೂಕು ಗರ್ಡಾಡಿ ಯುವಕ ವರುಣ್ ಎಂಬವರು ಸಿದ್ದಕ್ಕಟೆ ಬಳಿ ಪ್ರಯಾಣಿಸುವಾಗ ಸಿಕ್ಕಿರುವ ಬಗ್ಗೆ ವರದಿಯಾಗಿದೆ.

ಕೂಡಲೇ ಕಾರ್ಯಪ್ರವೃತ್ತರಾಗಿ ಬ್ಯಾಗ್ ನಲ್ಲಿದ್ದ ದಾಖಲೆ ಪರಿಶೀಲಿಸಿ ತಕ್ಷಣವೇ ದೂರವಾಣಿ ಮೂಲಕ ಸಂಪರ್ಕ ಮಾಡಿ ಬ್ಯಾಗ್ ಕಳೆದುಕೊಂಡ ಮಹಿಳೆಗೆ ದಾಖಲೆ, ಹಣದ ಜೊತೆಗೆ ಬ್ಯಾಗ್ ಹಿಂತಿರುಗಿಸಿ ವರುಣ್ ರವರು ಮಾನವೀಯತೆ ಮೆರೆದಿದ್ದಾರೆ.

ಮಾನವೀಯತೆ ಮೆರೆದ ಗರ್ಡಾಡಿ ಗ್ರಾಮದ ವರುಣ್ ಪೂಜಾರಿಯವರನ್ನು ಮಾನ್ಯ ಶಾಸಕ ಹರೀಶ್ ಪೂಂಜರವರು ಅಭಿನಂದಿಸಿದರು.

Leave a Reply

Your email address will not be published. Required fields are marked *