Tue. Apr 8th, 2025

Bengaluru: ಪ್ರಿಯಕರನ ಮೇಲೆಯೇ ರಾಬರಿ ಮಾಡಿಸಿದ ಪ್ರಿಯತಮೆ! ಕಾರಣ ಏನು ಗೊತ್ತಾ? ಪ್ರಿಯತಮೆ ಹೈಡ್ರಾಮಕ್ಕೆ ದಂಗಾದ ಪೋಲಿಸರು!!

ಬೆಂಗಳೂರು:(ಸೆ.29) ಪ್ರಿಯತಮೆಯೇ ಸಿನಿಮೀಯ ಶೈಲಿಯಲ್ಲಿ ಪ್ರಿಯಕರನ ದರೋಡೆ ನಡೆಸಿ, ಪೊಲೀಸರ ಅತಿಥಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಇದನ್ನೂ ಓದಿ: 🪳ಏರ್‌ ಇಂಡಿಯಾ ವಿಮಾನದಲ್ಲಿ ನೀಡಿದ ಆಮ್ಲೆಟ್‌ನಲ್ಲಿ ಜಿರಳೆ ಪತ್ತೆ!!

ಪ್ರಕರಣಕ್ಕೆ ಸಂಬಂಧಿಸಿ ಟೆಕ್ಕಿ ಶೃತಿ ಸೇರಿ ನಾಲ್ವರನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಸೆ. 20ರಂದು ಪ್ರಿಯಕರ ವಂಶಿಕೃಷ್ಣ ರೆಡ್ಡಿ ಎಂಬಾತ ಶೃತಿ ಭೇಟಿಗೆ ತೆರಳಿದ್ದ.

ಅದರಂತೆ ಭೇಟಿಯಾಗಿ ಆಕೆಯನ್ನು ಕರೆದುಕೊಂಡು ಹೊರಬರುತ್ತಿದ್ದಂತೆ ಸ್ವಿಫ್ಟ್ ಕಾರಿನಲ್ಲಿ ಬಂದವರು, ವಂಶಿಕೃಷ್ಣನ ಬೈಕ್​ಗೆ ಡಿಕ್ಕಿ ಹೊಡೆದಿದ್ದಾರೆ.


ಈ ವೇಳೆ ಜಗಳ ತೆಗೆದು ಆತನ ಬಳಿಯಿದ್ದ ಮೊಬೈಲ್ ಕಸಿದುಕೊಂಡಿದ್ದಾರೆ. ಅಲ್ಲದೇ ವಂಶಿಕೃಷ್ಣನ ಜೊತೆಯಲ್ಲಿಯೇ ಇದ್ದ ಶೃತಿಯ ಮೊಬೈಲ್​ನ್ನು ಸಹ ಕಸಿದು ಕೊಂಡಿದ್ದಾರೆ.

ನಂತರ ದೂರು ಕೊಡುವುದು ಬೇಡ, ಮೊಬೈಲ್ ಹೋದರೆ ಹೋಗಲಿ ಎಂದು ಪ್ರಿಯತಮೆ ಶೃತಿ, ವಂಶಿ ಮುಂದೆ ಡ್ರಾಮ ಮಾಡಿದ್ದಾಳೆ. ಆದರೂ, ವಂಶಿಕೃಷ್ಣ ಬೆಳ್ಳಂದೂರು ಠಾಣೆಗೆ ಕಾರಿನ ನಂಬರ್ ಸಮೇತ ದೂರು ನೀಡಿದ್ದರು.

ಈ ಕುರಿತು ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.


ಪೊಲೀಸರ ವಿಚಾರಣೆ ವೇಳೆ ಶೃತಿಯೇ ಬೈಕ್​ಗೆ ಡಿಕ್ಕಿ ಮಾಡಿ ಮೊಬೈಲ್ ಕಸಿದುಕೊಳ್ಳಲಿಕ್ಕೆ ಹೇಳಿದ್ದಳು ಎಂಬುದನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಹೌದು, ಇತ್ತೀಚೆಗೆ ವಂಶಿಕೃಷ್ಣನಿಂದ ದೂರವಾಗಲು ಶೃತಿ ಯತ್ನಿಸುತ್ತಿದ್ದಳು.

ಆದರೆ, ವಂಶಿಕೃಷ್ಣನ ಮೊಬೈಲ್​ನಲ್ಲಿ ಇಬ್ಬರು ಜೊತೆಗಿದ್ದ ಫೋಟೋಗಳಿದ್ದವು. ಈ ಹಿನ್ನಲೆ ಫೋಟೋಸ್​, ವಿಡಿಯೋಸ್ ಡಿಲೀಟ್ ಮಾಡಿಸಲಿಕ್ಕೆ ಒಂದೂವರೆ ಲಕ್ಷ ಹಣ ಕೊಟ್ಟು ಮೊಬೈಲ್ ರಾಬರಿ ಮಾಡುವ ಖರ್ತನಾಕ್ ಪ್ಲಾನ್ ಮಾಡಿರುವುದು ತನಿಖೆ ಬಳಿಕ ತಿಳಿದಿದೆ.

ಸದ್ಯ ಬೆಳ್ಳಂದೂರು ಪೊಲೀಸರಿಂದ ಟೆಕ್ಕಿ ಶೃತಿ ಸೇರಿ ನಾಲ್ವರನ್ನು ಬಂಧಿಸಲಾಗಿದೆ.

Leave a Reply

Your email address will not be published. Required fields are marked *