Wed. Nov 20th, 2024

Dharmasthala: ಧರ್ಮಸ್ಥಳದಲ್ಲಿ 26ನೇ ವರ್ಷದ ಭಜನಾ ತರಬೇತಿ ಕಮ್ಮಟ ಸಮಾರೋಪ ಸಮಾರಂಭ

ಧರ್ಮಸ್ಥಳ :(ಸೆ.29) ಶ್ರೀ ಕ್ಷೇತ್ರ ಧರ್ಮಸ್ಥಳದ 26ನೇ ವರ್ಷದ ಭಜನಾ ತರಬೇತಿ ಕಮ್ಮಟದ ಸಮಾರೋಪ ಸಮಾರಂಭವು ಧರ್ಮಸ್ಥಳದ ಅಮೃತವರ್ಷಿಣಿ ಸಭಾ ಭವನದಲ್ಲಿ ಇಂದು ಸೆ. 29ನೇ ಭಾನುವಾರ ನೆರವೇರಿತು.

ಇದನ್ನೂ ಓದಿ; ⭕ಬೆಂಗಳೂರು: ಪ್ರಿಯಕರನ ಮೇಲೆಯೇ ರಾಬರಿ ಮಾಡಿಸಿದ ಪ್ರಿಯತಮೆ!!

ಶ್ರೀ ಕ್ಷೇತ್ರದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಕ್ತಾಯ ಅನ್ನುವಂತಹ ಭಾವನೆ ಯಾವಾಗಲೂ ಇದ್ದದ್ದೆ ಆದರೆ ಯಾವುದು ಶುಭಾರಂಭ ಕೊಡುತ್ತದೋ ಅದು ಶುಭಾಂತ್ಯ ಆಗಲೇ ಬೇಕು. ಯಾವತ್ತೂ ಕೂಡ ನಮ ಮನಸ್ಸು ಶುದ್ಧವಾಗಿರಬೇಕು. ನೇತ್ರಾವತಿ ನದಿಯಲ್ಲಿ ಬಹಿರಂಗ ಶುದ್ದಿಯನ್ನು ಮಾಡಿ ಮಂಜುನಾಥೇಶ್ವರ ದರ್ಶನ ಪಡೆದು ಅಂತರಂಗವನ್ನು ಶುದ್ದಿಗೊಳಿಸಬೇಕು ಎಂದು ಖಾವಂದರು ತಿಳಿಸಿದರು. ಒಬ್ಬ ಸಮುದ್ರದ ಅಲೆಗಳು ನಿಂತ ಮೇಲೆ ಸ್ನಾನ ಮಾಡುತ್ತೇನೆ ಎಂದು ಕಾದು ಕುಳಿತು ಅಲೆಗಳು ನಿಲ್ಲಲೇ ಇಲ್ಲ ಸ್ನಾನವೂ ಮಾಡಲಿಲ್ಲ ಎನ್ನುವ ಹಾಗೆ ನಮ್ಮ ಸಮಸ್ಯೆಗಳು ಎಂಬ ಅಲೆಗಳ ನೆಪವನ್ನು ಮುಂದಿಟ್ಟು ಕೊಂಡು ನಾಳೆ ನಾಳೆ ಎನ್ನುವ ಬದಲು ಇವತ್ತೇ ಒಳ್ಳೆಯ ಕಾರ್ಯಗಳನ್ನು ಮಾಡಿ ಎಂದು ಪೂಜ್ಯ ಖಾವಂದರು ಹೇಳಿದರು.


ಕುಂದಗೋಳ ಕಲ್ಯಾಣಪುರ ಮಠ ತ್ರಿವಿಧ ದಾಸೋಹಿ ಪರಮಪೂಜ್ಯ ಶ್ರೀ ಬಸವಣ್ಣಜ್ಜನವರು ಸ್ವಾಮೀಜಿ ಪೂಜ್ಯ ಖಾವಂದರ ಅದ್ಭುತ ದೂರದೃಷ್ಟಿಯ ಫಲವಾಗಿ ಈ ಸಮಾಜ ಅಭಿವೃದ್ಧಿ ಹೊಂದಿದೆ. ಪರಿಶುದ್ದ ಸಮಾಜ ಕಾರ್ಯಗಳನ್ನು ಮಾಡುತ್ತಿರುವ ಖಾವಂದರು ಈ ದೇಶದ ಆದರ್ಶ ಎಂದು ಆಶೀರ್ವಚನ ನೀಡಿದರು.ಮುಂದಿನ ದಿನಗಳಲ್ಲಿ ಡಾ.ಹೆಗ್ಗಡೆಯವರಿಗೆ ಭಾರತ ರತ್ನ ಒಲಿದು ಬರಲಿದೆ ಎಂದರು.
ಮಾಣಿಲ ಕ್ಷೇತ್ರದ ಪೂಜ್ಯ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು.

ದ.ಕ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಸಾಮಾನ್ಯ ವ್ಯಕ್ತಿ ಭಗವಂತನನ್ನು ತಲುಪಲು ಸುಲಭವಾದ ಮಾರ್ಗ ಭಜನೆ. ಭಜನೆಯಿಂದ ಸನಾತನ ನಾಗರೀಕತೆಯನ್ನು ಬಲಪಡಿಸುತ್ತಿರುವ ಡಾ.ಹೆಗ್ಗಡೆಯವರಿಗೆ ವಂದನೆಗಳು ಎಂದು ಪ್ರಣಾಮಗಳನ್ನು ಸಲ್ಲಿಸಿದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡುತ್ತಾ, ಭಜನೆಯ ಮೂಲಕ ನಾವೆಲ್ಲರೂ ಒಂದೇ ಎಂಬ ಕಲ್ಪನೆಯನ್ನು ನೀಡಿದ ನಾಡಿನ ಪವಿತ್ರ ಪುಣ್ಯಕ್ಷೇತ್ರ ಧರ್ಮಸ್ಥಳ ಎಂದರು.


ವೇದಿಕೆಯಲ್ಲಿ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರು, ವಿಧಾನ ಪರಿಷತ್‌ ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾ‌ರ್, ಡಿ.ಸುರೇಂದ್ರ ಕುಮಾರ್, ಎಸ್‌.ಡಿ.ಎಂ ಎಜ್ಯುಕೇಶನಲ್ ಸೊಸೈಟಿ ಕಾರ್ಯದರ್ಶಿ ಡಾ.ಸತೀಶ್ಚಂದ್ರ, ಯೋಜನೆಯ ಬಿ.ಸಿ. ಟ್ರಸ್ಟ್ ನ ಟ್ರಸ್ಟಿ ನಾಗೇಶ್ವರ ರಾವ್, ಡಾ.ಎಲ್.ಹೆಚ್ ಮಂಜುನಾಥ ಉಪಸ್ಥಿತರಿದ್ದರು.

ಮಾತೃಶ್ರೀ ಡಾ.ಹೇಮಾವತಿ ಅಮ್ಮನವರ ಪರಿಕಲ್ಪನೆಯಲ್ಲಿ ವಿದುಷಿ ಚೈತ್ರ ಮತ್ತು ತಂಡದಿಂದ ದೃಶ್ಯ ರೂಪಕ ನಡೆಯಿತು.


ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರು ಭಜನಾ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ಪಂಜ ಹಾಗೂ ಹೊಸದಾಗಿ ನೇಮಕಗೊಂಡಿರುವ ಭಜನಾ ಪರಿಷತ್‌ ಅಧ್ಯಕ್ಷ ಚಂದ್ರಶೇಖ‌ರ್ ಸಾಲ್ಯಾನ್,
ಉಪಾಧ್ಯಕ್ಷ ರಾಜೇಂದ್ರ ಕುಮಾ‌ರ್ ಇವರನ್ನು ಸನ್ಮಾನಿಸಿದರು.

ಭಜನಾ ಪರಿಷತ್ತಿನ ಮಾದರಿ ಭಜನಾ ಮಂಡಳಿಗಳಿಗೆ ಸಾಧನಾ ಗೌರವ ನೀಡಿ ಸನ್ಮಾನಿಸಲಾಯಿತು.


ಸಂಪನ್ಮೂಲ ವ್ಯಕ್ತಿಗಳಾದ ರಾಮಕೃಷ್ಣ ಕಾಟುಕುಕ್ಕೆ , ಎಂ.ನಾಗೇಶ್ ಶೆಣೈ, ಸೌಮ್ಯ ಸುಭಾಷ್‌, ಡಾ.ಐ. ಶಶಿಕಾಂತ್ ಜೈನ್, ರವಿರಾಜ್ ಉಜಿರೆ, ಸಂದೇಶ್, ನಾಗೇಶ್, ವಿನ್ಯಾಸ್, ಚೈತ್ರ ಇವರನ್ನು ಗೌರವಿಸಲಾಯಿತು.


ಭಜನಾ ಕಮ್ಮಟದ ಅಧ್ಯಕ್ಷ ಸುಬ್ರಹ್ಮಣ್ಯ ಪ್ರಸಾದ್‌ ಸ್ವಾಗತಿಸಿದರು. ಕಾರ್ಯದರ್ಶಿ ವೀರು ಶೆಟ್ಟಿ ವರದಿ ವಾಚಿಸಿದರು. ಸದಸ್ಯ ಶ್ರೀನಿವಾಸ್‌ ರಾವ್‌ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *