ಮಧ್ಯಪ್ರದೇಶ:(ಸೆ.29) ಒಂದು ಹುಡುಗಿಯನ್ನು ಪ್ರೀತಿಸುತ್ತಿರುವೇ, ಆ ಹುಡುಗಿಯನ್ನು ಮೆಚ್ಚಿಸಲು ಏನು ಮಾಡಬೇಕು, ಯಾವ ರೀತಿ ಆಕೆಗೆ ಸಂದೇಶಗಳನ್ನು ಕಳುಹಿಸಬೇಕು ಎಂದು ಬರೆದ
ಇದನ್ನೂ ಓದಿ: 🎂ಚಪ್ಪರಿಸಿಕೊಂಡು ತಿನ್ನುವ ಕೇಕ್ನಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ!
ಪೋಸ್ಟರ್ ಹಿಡಿದು ಯುವಕನೊಬ್ಬ ನಡುರಸ್ತೆಯಲ್ಲೇ ನಿಂತಿರುವ ಘಟನೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ನಡೆದಿದೆ. ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಮಾಹಿತಿಯ ಪ್ರಕಾರ, ಈ ವಿಡಿಯೋ ಭೋಪಾಲ್ ನ ಎಂಪಿ ನಗರ ಪ್ರದೇಶಕ್ಕೆ ಸಂಬಂಧಿಸಿದ್ದು ಎನ್ನಲಾಗಿದೆ. ಒಡೆದ ಸಿಮೆಂಟ್ ಪೈಪಿನ ಮೇಲೆ ಬೋರ್ಡ್ ಹಿಡಿದು ಮುಖ ಮುಚ್ಚಿಕೊಂಡು ಯುವಕ ಹೇಗೆ ನಿಂತಿದ್ದಾನೆ ಎಂಬುದನ್ನು ವಿಡಿಯೋದಲ್ಲಿ ಕಾಣಬಹುದು.
ಯುವಕನ ಅವತಾರ ಕಂಡು ದಾರಿಯಲ್ಲಿ ಹೋಗುತ್ತಿದ್ದ ಯುವತಿಯರು ಆಶ್ಚರ್ಯಚಕಿತರಾಗಿ ನೋಡುವುದು ಮತ್ತು ನಗಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸದ್ಯ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.