Tue. Jan 13th, 2026

Curacao lisansı, dünya genelinde 160’tan fazla ülke tarafından tanınmakta olup, bahsegel giril bu lisansa sahip güvenilir markalardan biridir.

Yeni üyeler, hızlı ve kolay erişim sağlamak için bahsegel güncel giriş bağlantısını tercih ediyor.

Klasik masa oyunlarından slotlara kadar bahis siteleri çeşitliliği sunuluyor.

Oyuncular hızlıca işlem yapmak için Bahsegel giriş bağlantısını takip ediyor.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಪೂರ್ವಾಫಲ್ಗುಣೀ, ಯೋಗ: ಶುಭ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 21 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:53 ರಿಂದ 09:23, ಯಮಘಂಡ ಕಾಲ ಬೆಳಿಗ್ಗೆ 10:53ರಿಂದ 12:22ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 01:52 ರಿಂದ 03:22 ರವರೆಗೆ.

ಮೇಷ ರಾಶಿ : ಎಲ್ಲವನ್ನೂ ನೀವು ಪ್ರೀತಿಯಿಂದ ವಿಶ್ವಾಸದಿಂದ ಪಡೆಯಲಾಗದು. ಯಾರ ಬೆಂಬಲಕ್ಕೂ ನೀವು ಸುಮ್ಮನೇ ಇರಲಾರಿರಿ. ಇಂದು ನಿಮಗೆ ದೇವತಾರಾಧನೆಯಲ್ಲಿ ಮನಸ್ಸಾಗುವುದು. ಸಿಟ್ಟಾಗಬೇಕಾದ ಸ್ಥಿತಿಯಲ್ಲಿಯೂ ನೀವು ಪ್ರಶಾಂತರಾಗಿರುವುದು‌ ಆಶ್ಚರ್ಯಕರ ಸಂಗತಿಯಾಗಿದೆ. ಮನೆಯ ಕೆಲಸದಲ್ಲಿ ನೀವು ಮಗ್ನರಾಗುವಿರಿ. ಮಕ್ಕಳಿಂದ ನಿಮಗೆ ಉದ್ಯಮಕ್ಕೆ ಅವಕಾಶ ಸಿಗುವುದು. ಉದ್ಯೋಗದ ನಿಮಿತ್ತ ನೌಕರರ ತುರ್ತು ಸಭೆಯನ್ನು ಕರೆಯಲಿದ್ದೀರಿ. ಮನೆ ಮತ್ತು ಕೆಲಸವನ್ನು ಸಮಾನವಾಗಿ ಇಟ್ಟುಕೊಳ್ಳಿ. ಕಟ್ಟಡವನ್ನು ನಿರ್ಮಾಣ ಮಾಡುವವರಿಗೆ ಹೆಚ್ಚು ಕೆಲಸವು ಇರಲಿದೆ. ಹಳೆಯ ಖಾಯಿಲೆಯಿಂದ ಬಳಲಬಹುದು. ಬೇಡವಾದ ವಸ್ತುಗಳನ್ನು ಮಾರಿ ಹಣವನ್ನು ಪಡೆಯುವಿರಿ.

ವೃಷಭ ರಾಶಿ : ಕೆಲವು ಸುದ್ದಿಗಳು ನಿಮ್ಮನ್ನು ಭ್ರಾಂತಗೊಳಿಸಬಹುದು. ಅಪರಿಚಿತ ವ್ಯಕ್ತಿಗಳು ನಿಮಗೆ ಬಹಳ ಆಪ್ತರಾಗುವರು. ಸಂಗಾತಿಯ ಪುನರಾವರ್ತಿತ ಘಟನೆಯಿಂದ ನಿಮಗೆ ಬಹಳ ಬೇಸರವಾಗುವುದು. ಸಂಗಾತಿಯ ಮಾತು ನಿಮಗೆ ಸಿಟ್ಟನ್ನ ತರಿಸೀತು. ನಿಮ್ಮನ್ನು ಕನಿಷ್ಠವಾಗಿಯೂ ಉದ್ಯಮದಲ್ಲಿ ಕಾಣಬಹುದು. ಯಾವುದೇ ಫಲಾಪೇಕ್ಷೆ ಇಲ್ಲದೇ ಸ್ನೇಹಿತರನ್ನು ಮಾಡಿಕೊಳ್ಳುವಿರಿ.

ಮಿಥುನ ರಾಶಿ : ಕಛೇರಿಯಲ್ಲಿ ನಿಮ್ಮ ಸ್ಥಾನವನ್ನು ಉಳಿಸಿಕೊಳ್ಳಲುವಂತೆ ಇರಿ. ಸಂಗಾತಿಯ ಜೊತೆ ಕಲಹದ ಕಾರಣ ಎಲ್ಲವೂ ಅಸ್ತವ್ಯಸ್ತ ಆಗಬಹುದು.‌ ವಿಶ್ವಾಸಘಾತವು ನಿಮಗೆ ದುಃಖವನ್ನು ತರಿಸಬಹುದು. ಆಹಾರದ ಕೊರತೆಯಿಂದ ನಿಮಗೆ ಸಂಕಟವಾಗಲಿದೆ. ದುಡಿಮೆಯ ಬೆನ್ನೇರಿ ಸಂಬಂಧಗಳನ್ನು ಅಗೌರವದಿಂದ ಕಾಣುವ ಸ್ವಭಾವವನ್ನು ಬೆಳೆಸಿಕೊಂಡಿರುವಿರಿ. ಖಾಸಗಿ ಸಂಸ್ಥೆಯು ನಿಮಗೆ ಉನ್ನತ ಸ್ಥಾನವನ್ನು ಕೊಡಲಿದೆ.

ಕರ್ಕಾಟಕ ರಾಶಿ : ಮನೆಗೆ ಬಂದವರನ್ನು ಬರಿದಾಗಿ ಕಳುಹಿಸುವುದು ಬೇಡ. ಇಂದು ನೀವು ಹಣವನ್ನು ಖರ್ಚು ಮಾಡದೇ ಜಿಪುಣರಂತೆ ತೋರುವಿರಿ. ಧನದ‌ ಲಾಭವನ್ನು ನಿರೀಕ್ಷಿಸದೇ ಕೆಲಸವನ್ನು ಆರಂಭಿಸಿ. ನೀವು ಮಿಂಚಿನ‌ ವೇಗದಲ್ಲಿ ಮಾಡುವ ಕೆಲಸವು ಎಲ್ಲರಿಗೂ ಇಷ್ಟವಾಗುವುದು. ಮಕ್ಕಳನ್ನು ತಿದ್ದುವ ಕೆಲಸದಲ್ಲಿ ಸಮಯವು ಹೋಗುವುದು. ನಿಮ್ಮ‌ ಸ್ವಭಾವದ ದುರುಪಯೋಗವಾಗಲಿದೆ. ನಗುಮುಖವು ನಿಮ್ಮ ವ್ಯಾಪಾರಕ್ಕೆ ಪೂರಕ.

ಸಿಂಹ ರಾಶಿ : ಜವಾಬ್ದಾರಿಯ ಸ್ಥಾನದಲ್ಲಿ ಇದ್ದು ನೀವು ವರ್ತಿಸಬೇಕಾಗುವುದು. ವಿದ್ಯಾಭ್ಯಾಸದಲ್ಲಿ ಪ್ರಗತಿಯ ಜೊತೆ ಶತ್ರುಗಳೂ ಉಂಟಾಗುವರು. ಅಪರಿಚಿತರ ಜಾಲಕ್ಕೆ ಸಿಕ್ಕಿ ಮೋಸ ಹೋಗಬಹುದು. ಆರ್ಥಿಕ ಬಲವನ್ನು ನೋಡಿ ಇಂದು ಮುಂದುವರಿಯಿರಿ. ಸ್ನೇಹಿತರು ನಿಮ್ಮ ಬಳಿ ಹಣದ ಸಹಾಯವನ್ನು ಕೇಳಬಹುದು. ವೃತ್ತಿಯಲ್ಲಿ ನೀವು ಹೊಸತನ್ನು ತರಲು ಯೋಚಿಸಬಹುದು.

ಕನ್ಯಾ ರಾಶಿ : ಪ್ರಭಾವೀ ವ್ಯಕ್ತಿಗಳ ಸಂಪರ್ಕವು ಯಾರದೋ ಮೂಲಕ ಸಿಗುವುದು. ಇಂದು ಎಲ್ಲರಿಗೂ ನೀವು ಇಷ್ಟವಾಗುವಿರಿ. ಕಲಾತ್ಮಕ ವಿಚಾರದಲ್ಲಿ ಇಂದು ಹೆಚ್ಚು ಆಸಕ್ತಿಯನ್ನು ಇಟ್ಟುಕೊಳ್ಳುವಿರಿ. ನಿಮ್ಮ ನಿರ್ಧಾರವನ್ನು ಇನ್ನೊಬ್ಬರ ಮೇಲೆ‌ ಹೇರುವುದು ಬೇಡ. ಮನೆಯ ಮೇಲೆ‌‌ ಚೋರರ ಭಯವು ಕಾಡಬಹುದು. ಕೃಷಿಯಲ್ಲಿ ಸ್ವಲ್ಪಮಟ್ಟಿಗೆ ನಷ್ಟವಾಗುವ ಸಾಧ್ಯತೆ ಇದೆ. ಅನುಭವಿಗಳ ಮಸರ್ಗದರ್ಶನವು ನಿಮಗೆ ಸಿಗಲಿದೆ.

ತುಲಾ ರಾಶಿ : ಪರ ಊರು ನಿಮ್ಮ ಆರೋಗ್ಯವನ್ನು ಹಾಳುಮಾಡುವುದು. ಮೇಲಧಿಕಾರಿಗಳ ಕಿರುಕುಳವನ್ನು ಸಹಿಸುವುದು ಕಷ್ಟವಾಗುವುದು. ಹಳೆಯ ವಿಚಾರಕ್ಕೆ ಸಂಗಾತಿಯ ಜೊತೆ ಕಲಹವಾಗಲಿದೆ. ಆದಷ್ಟು ಒಬ್ಬರು ಸುಮ್ಮನಿದ್ದರೆ ಕಲಹವು ಶಾಂತವಾಗಲಿದೆ. ಶ್ರೇಷ್ಠ ವಸ್ತುಗಳ ಲಾಭವಿದ್ದರೂ ಅದನ್ನು ಉಳಿಸಿಕೊಳ್ಳುವುದು ಕಷ್ಟವಾದೀತು. ಮನೆಯ ಶುಭ ಕಾರ್ಯಗಳಿಗೆ ನೀವು ಕೈಲಾದ ಸಹಕಾರವನ್ನು ಕೊಡಬಹುದು. ಕಛೇರಿಯ ಕೆಲಸಗಳನ್ನು ಬೇರೆ ಸಮಯದಲ್ಲಿಯೂ ಮಾಡಬೇಕಾಗುವುದು.

ವೃಶ್ಚಿಕ ರಾಶಿ : ಇಂದಿನ ಆದಾಯ ಕಡಿಮೆ ಇದ್ದರೂ ನೆಮ್ಮದಿ ಇರಲಿದೆ. ಪ್ರಾಮಾಣಿಕತೆ ನಿಮಗೆ ವರವಾಗಬಹುದು. ನಿಮ್ಮ ಸರಳತೆಯು ನಿಮಗೆ ಧನಾತ್ಮಕ ಅಂಕಗಳನ್ನು ನೀಡುವುದು. ಸ್ತ್ರೀಯರಿಂದ ನೀವು ಸಂತೋಷವನ್ನು ಅನುಭವಿಸುವಿರಿ. ನಿಮ್ಮ ಮನಸ್ಸಿಗೆ ಹೊಂದುವವರ ಒಡನಾಟ ಸಿಗುವುದು. ನಿಮ್ಮವರೇ ನಿಮಗೆ ತೊಂದರೆಯನ್ನು ಕೊಡುವರು.

ಧನು ರಾಶಿ : ನಿಮ್ಮ ಆತ್ಮವಿಶ್ವಾಸವೇ ಏಕಾಗ್ರತೆಯನ್ನು ತರುವುದು. ಯಾರ ಮೇಲೂ ದ್ವೇಷ ಬರುವಂತಹ ಕೆಲಸವನ್ನು ಮಾಡುವುದು ಬೇಡ. ಹಣವನ್ನು ತಪ್ಪಾದ ಕಡೆಯಲ್ಲಿ ಹೂಡುವಿರಿ. ಸುಮ್ಮನೇ ಎಲ್ಲದಕ್ಕೂ ಒಪ್ಪಿಗೆಯನ್ನು ಕೊಡುವುದು ಬೇಡ. ಸಾಹಸಮಯವಾದ ಪ್ರವೃತ್ತಿಯನ್ನು ಇಟ್ಟುಕೊಳ್ಳುವುದು ಬೇಡ.

ಮಕರ ರಾಶಿ : ಒಮ್ಮೆಲೇ‌ ಅಧಿಕ ಲಾಭವನ್ನೂ ಇಂದು ಯಾರಿಂದಲೂ ನಿರೀಕ್ಷಿಸಬಾರದು. ನೀವು ಇಂದು ದೇವರ ಮೇಲೆ‌ ಸಂಪೂರ್ಣ ಭಾರ ಹಾಕಿ ನಿಮ್ಮ ಕಾರ್ಯವನ್ನು ಆರಂಭಿಸುವಿರಿ. ಪ್ರೇಮವನ್ನು ನೀವು ಒಪ್ಪಿಕೊಳ್ಳದೇ ನಿಮ್ಮದೇ ವಾದವನ್ನು ಮಾಡುವಿರಿ. ಸಂಗಾತಿಯ ಮಾತುಗಳು ನಿಮಗೆ ಕಿರಿಕಿರಿಯನ್ನು ತಂದೀತು.

ಕುಂಭ ರಾಶಿ : ನೆಮ್ಮದಿಗೆ ನಿಮ್ಮದೇ ಸೂತ್ರಗಳನ್ನು ನೀವು ಅನುಸರಿಸುವಿರಿ.‌ ಕೆಲವು ಅಭ್ಯಾಸವನ್ನು ಬಿಟ್ಟುಬಿಡುವಿರಿ. ಸ್ನೇಹಿತರ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ. ಸಂಸಾರವನ್ನು ನಿಭಾಯಿಸುವ ಕಲೆಯನ್ನು ನೀವು ತಿಳಿದುಕೊಳ್ಳಬಹುದು. ಔದ್ಯೋಗಿಕವಾದ ವಿಚಾರವನ್ನು ಮನೆಯಲ್ಲಿ ಸಹೋದರರ‌ ಜೊತೆ ಚರ್ಚಿಸುವಿರಿ. ತಾಯಿಯಿಂದ ನಿಮಗೆ ಹಿತವಚನವು ಸಿಗಲಿದೆ.

ಮೀನ ರಾಶಿ : ಮಾಡಿದ ತಪ್ಪನ್ನೇ ಮತ್ತೆ ಮಾಡಿ, ಎಲ್ಲರ ಕೆಂಗಣ್ಣಿಗೆ ಗುರಿಯಾಗುವಿರಿ. ಇಂದು ನೀವು ಏಕಾಂತವಾಗಿ ಇರಲು ಆಗದು. ಸಾಮಾಜಿಕ ಕಳಕಳಿಯನ್ನು ನೀವು ಹೆಚ್ಚಿಸಿಕೊಳ್ಳುವಿರಿ. ಆದಾಯಕ್ಕಿಂತ ಖರ್ಚು ಹೆಚ್ಚಾಗಿ ಆತಂಕವಾಗಬಹುದು. ಕುಟುಂಬದ ಸದಸ್ಯರ ಪ್ರೀತಿಯು ಸಿಗಲಿದೆ. ಆಕಸ್ಮಿಕ ವಾರ್ತೆಯನ್ನು ನೀವು ಸಮಾಧಾನದಿಂದ ತೆಗೆದುಕೊಳ್ಳಬೇಕಾದೀತು.‌ ನಿಮ್ಮ ಕೆಲಸಕ್ಕೆ ಪ್ರಶಂಸೆಯು ಸಿಗಲಿದೆ.

Leave a Reply

Your email address will not be published. Required fields are marked *