Wed. Nov 20th, 2024

Puttur: ತಿರುಪತಿ ಲಡ್ಡು ವಿವಾದ ಪ್ರಕರಣ – ಕಾನೂನು ಚೌಕಟ್ಟಿನಲ್ಲಿ ತನಿಖೆ ಆಗಲಿ – ಹಿಂದೂ ಜನ ಜಾಗೃತಿ ಸಮಿತಿ

ಪುತ್ತೂರು:(ಸೆ.30) ತಿರುಪತಿ ಶ್ರೀ ಬಾಲಾಜಿ ದೇವಸ್ಥಾನದ ಲಡ್ಡಿನಲ್ಲಿ ದನದ ಕೊಬ್ಬು, ಹಂದಿ ಕೊಬ್ಬು, ಮೀನಿನ ಎಣ್ಣೆ ಬೆರೆಸಿ ಅಪವಿತ್ರಗೊಳಿಸಿದ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು,

ಇದನ್ನೂ ಓದಿ: 🔴ಬಂಟ್ವಾಳದ ಬೃಹತ್ ಆಹಾರ ಮೇಳ ದ. ಕ.ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ

ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿ ಕರ್ನಾಟಕ ದೇವಸ್ಥಾನ ಮಠ ಧಾರ್ಮಿಕ ಸಂಸ್ಥೆಗಳ ಮಹಾ ಸಂಘದ ವತಿಯಿಂದ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರ ಕಚೇರಿ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಲಡ್ಡು ಅಪವಿತ್ರಗೊಳಿಸಿ ಹಿಂದು ಧಾರ್ಮಿಕ ಶ್ರದ್ದೆಗೆ ಹೊಡೆತವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಕರ್ನಾಟಕ ದೇವಸ್ಥಾನ ಮಠ ಧಾರ್ಮಿಕ ಸಂಸ್ಥೆಗಳ ಮಹಾ ಸಂಘದ ಜಿಲ್ಲಾ ಸಂಚಾಲಕ ಬಾಲಕೃಷ್ಣ ಗೌಡ,

ಕಾರ್ಪಾಡಿ ಸುಬ್ರಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಬಾಲಚಂದ್ರ ಸೊರಕೆ, ಹಿಂದೂ ಜಾಗರಣ ವೇದಿಕೆಯ ಅವಿನಾಶ್ ಪುರುಷರಕಟ್ಟೆ, ಪ್ರಸಾದ್ ರೈ,

ವೇಣುಗೋಪಾಲ್ ಬೊಳುವಾರು, ಹರಿಪ್ರಸಾದ್ ಶೆಟ್ಟಿ ನೆಲ್ಲಿಕಟ್ಟೆ, ಶ್ರೀಪ್ರಸಾದ್, ಸೋಮನಾಥ್ ಬ್ರಹ್ಮನಗರ, ಶ್ರೀಧರ ಬಲ್ನಾಡು, ವಕೀಲ ಆದರ್ಶ ರೈ, ವೆಂಕಪ್ಪ ಗೌಡ ಕೆಯ್ಯರು, ತಾರನಾಥ ಗೌಡ, ಚಂದ್ರಶೇಖರ್ ಶಾಂತಿನಗರ, ಬಾಲಕೃಷ್ಣ ಶೆಟ್ಟಿ ಮುಂತಾದವರು ಮನವಿ ಸಲ್ಲಿಕೆ ಸಂದರ್ಭ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *