Wed. Nov 20th, 2024

Ujire: (ಅ.4 & 5 ) ಎಸ್‌.ಡಿ.ಎಂ ಮಲ್ಟಿ- ಸ್ಪೆಷಾಲಿಟಿ ಆಸ್ಪತ್ರೆ ಉಜಿರೆ ಹಾಗೂ ಎಸ್‌.ಡಿ.ಎಂ ವೈದ್ಯಕೀಯ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆ , ಧಾರವಾಡ ಇದರ ಜಂಟಿ ಸಹಯೋಗದಲ್ಲಿ ಉಚಿತ ಶ್ರವಣ ಮತ್ತು ಮಾತು ಪರಿಶೀಲನಾ ಶಿಬಿರ

ಉಜಿರೆ:(ಸೆ.30) ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರ ಆಶೀರ್ವಾದಗಳೊಂದಿಗೆ ಎಸ್‌.ಡಿ.ಎಂ ಮಲ್ಟಿ- ಸ್ಪೆಷಾಲಿಟಿ ಆಸ್ಪತ್ರೆ ಉಜಿರೆ ಹಾಗೂ ಎಸ್‌.ಡಿ.ಎಂ ವೈದ್ಯಕೀಯ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆ , ಧಾರವಾಡ ಇದರ ಜಂಟಿ ಸಹಯೋಗದಲ್ಲಿ ಉಚಿತ ಶ್ರವಣ ಮತ್ತು ಮಾತು ಪರಿಶೀಲನಾ ಶಿಬಿರವು ಅಕ್ಟೋಬರ್‌ 4 ಮತ್ತು ಅಕ್ಟೋಬರ್‌ 5 ರಂದು ಬೆಳಿಗ್ಗೆ 9:00 ರಿಂದ 5:00 ರ ತನಕ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ- ಸ್ಪೆಷಾಲಿಟಿ ಆಸ್ಪತ್ರೆ ಉಜಿರೆಯಲ್ಲಿ ನಡೆಯಲಿದೆ.

ಇದನ್ನೂ ಓದಿ: 🐯ಮಂಗಳೂರು: ಟ್ರೆಂಡ್ ಆಯ್ತು ಪಿಯು ವಿದ್ಯಾರ್ಥಿ ಕೈಚಳಕದಲ್ಲಿ ಮೂಡಿದ ಹುಲಿವೇಷದ ತಲೆ

ಶಿಬಿರದಲ್ಲಿ ಭಾಗವಹಿಸುವ ತಜ್ಞರು ಡಾ. ರೋಹನ್‌ ಎಂ. ದೀಕ್ಷಿತ್‌ MBBS , ಕಿವಿ , ಮೂಗು, ಗಂಟಲು ತಜ್ಞರು ಹಾಗೂ ಡಾ.ವಸೀಮ್‌ ಅಹ್ಮದ್‌ Ph.d , Professor & HOD , Department of Speech & Hearing, SDM College of Medical Sciences & Hospital, Dharwad.

ಶಿಬಿರದ ಪ್ರಯೋಜನಗಳು:

  • ಉಚಿತ ಶ್ರವಣ ಮತ್ತು ಮಾತು ಪರಶೀಲನೆ : ಮಕ್ಕಳಿಗೆ, ಹಿರಿಯರಿಗೆ ಮತ್ತು ವಯಸ್ಕರಿಗೆ
  • ಅನುಭವ ಸಂಪನ್ನ ಶ್ರವಣ ತಜ್ಞರು ಮತ್ತು ಭಾಷಾ ತಜ್ಞರಿಂದ ಸಮಾಲೋಚನೆ
  • ಭಾರತ ಸರ್ಕಾರದ ಎ.ಡಿ.ಐ.ಪಿ. ಯೋಜನೆಯಡಿ ಶ್ರವಣೋಪಕರಣ ಪಡೆಯಲು ಅಗತ್ಯವಿರುವ ದಾಖಲೆಗಳನ್ನು ಕುರಿತು ಮಾರ್ಗದರ್ಶನ ಮತ್ತು ಪರಿಶೀಲನೆ.

ಬೇಕಾಗಿರುವ ದಾಖಲೆಗಳು:

  • ವಿಕಲಚೇತನರ ಪ್ರಮಾಣಪತ್ರ (ಜಿಲ್ಲಾ ನಾಗರಿಕ ಆಸ್ಪತ್ರೆಯ ವೈದ್ಯಾಧಿಕಾರಿ ನೀಡಿರುವುದು)
  • ಯು.ಡಿ.ಐ.ಡಿ.ಕಾರ್ಡ್‌ (ವಿಕಲಚೇತನರ ಪರಿಚಯ ಕಾರ್ಡ್‌ ) ಅಥವಾ ಯು.ಡಿ.ಐ.ಡಿ.ನೋಂದಣಿ ಸ್ಲಿಪ್ಪಿನ ಪ್ರತಿ.
  • ಆಧಾರ್‌ಕಾರ್ಡ್
  • ಇತ್ತೀಚಿನ ಎರಡು ಪಾಸ್ಪೋರ್ಟ್‌ ಗಾತ್ರದ ಫೋಟೋಗಳು.
  • ಆದಾಯ ಪ್ರಮಾಣ ಪತ್ರ (ತಿಂಗಳಿಗೆ 30,000 ರೂಪಾಯಿಗಳಿಗಿಂತ ಕಡಿಮೆ): ರೂ.22,500/- ಕ್ಕಿಂತ ಕಡಿಮೆ ಆದಾಯವಿದ್ದರೆ ಸಂಪೂರ್ಣ ವೆಚ್ಚದಲ್ಲಿ (ಉಚಿತ) ಶ್ರವಣೋಪಕರಣಗಳು ಮತ್ತು ರೂ.22,501/- ರಿಂದ 30,000/- ರವರೆಗೆ ಆದಾಯವಿದ್ದಲ್ಲಿ 50% ವೆಚ್ಚದಲ್ಲಿ ಶ್ರವಣೋಪಕರಣಗಳು , ಆದಾಯ ಪ್ರಮಾಣಪತ್ರವನ್ನು ಅರ್ಹ ಪ್ರಾಧಿಕಾರಿಗಳು ನೀಡಿರಬೇಕು.
  • ಆಹಾರ ಕಾರ್ಡ್‌ ಅನ್ನು ಆದಾಯ ದೃಢೀಕರಣಕ್ಕಾಗಿ ಬಳಸಲು ಅನುಮತಿ ನೀಡಲಾಗುವುದಿಲ್ಲ.
  • ಕಳೆದ 3 ವರ್ಷಗಳಲ್ಲಿ ಯಾವುದೇ ವಾಕ್‌ ಶ್ರವಣ ಶಿಬಿರ ಅಥವಾ ಕೇಂದ್ರದಿಂದ ಈ ಯೋಜನೆಯಡಿ ಸಹಾಯ ಪಡೆದಿಲ್ಲ ಎಂಬುದಾಗಿ ದೃಢೀಕರಣ ಪತ್ರ ನೀಡಬೇಕು.
  • 18 ವರ್ಷಕ್ಕಿಂತ ಕಡಿಮೆ ಮಕ್ಕಳೀಗೆ , ಶ್ರವಣೋಪಕರಣ ವಿತರಣೆಯ ವೇಳೆ ಪೋಷಕರು ಹಾಜರಿರಬೇಕು.

ಹೆಸರು ನೋಂದಾಯಿಸಲು ಸಂಪರ್ಕಿಸಿ:
7760397878, 8073349216, 9513203461

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು