Wed. Nov 20th, 2024

Ujire: ಎಸ್‌.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ಕಿಂಡರ್ಗಾರ್ಟನ್ ವಿಭಾಗದಲ್ಲಿ “ಜಂಗಲ್ ಜಂಬೂರಿ” ಕಾರ್ಯಕ್ರಮ

ಉಜಿರೆ: (ಸೆ.30) ಎಸ್‌.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ಕಿಂಡರ್ಗಾರ್ಟನ್ ವಿಭಾಗದಲ್ಲಿ “ಜಂಗಲ್ ಜಂಬೂರಿ” ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಇದನ್ನೂ ಓದಿ: 😱ಉಡುಪಿ: ಸರಕಾರಿ ನೌಕರರ 6 ಮನೆಗಳಿಗೆ ನುಗ್ಗಿದ ಕಳ್ಳರು

ಸಂಪನ್ಮೂಲ ವ್ಯಕ್ತಿಯಾಗಿ ಉಜಿರೆಯ ಸೀನಿಯರ್ ವೆಟರ್ನರಿ ಆಫೀಸರ್ ಡಾ.ಯತೀಶ್ ಕುಮಾರ್ ಎಂ.ಎಸ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳಿಗೆ ಪ್ರಾಣಿಗಳ ಬಗ್ಗೆ ಮಾಹಿತಿ ನೀಡಿದರು. ಕಾಡು ಪ್ರಾಣಿಗಳು, ಹಾಗೂ ಸಾಕು ಪ್ರಾಣಿಗಳ ಲಾಲನೆ ಪಾಲನೆ, ಚುಚ್ಚುಮದ್ದು ಇದರ ಬಗ್ಗೆ ವಿವರಿಸಿದರು.


ಮಕ್ಕಳ ಟಾಯ್ ರೂಮನ್ನು ಡೊಮೆಸ್ಟಿಕ್ ಅನಿಮಲ್, ವೈಲ್ಡ್ ಅನಿಮಲ್, ವಾಟರ್ ಅನಿಮಲ್, ಬರ್ಡ್ಸ್ ನಾಲ್ಕು ವಿಭಾಗಗಳಾಗಿ ಮಾಡಿ ಜಂಗಲ್ ಜಂಬೂರಿಯ ರೀತಿಯಲ್ಲಿ ಕಾರ್ಯಕ್ರಮ ಮಾಡಲಾಯಿತು.

ಶಾಲೆಯ ಪ್ರಾಂಶುಪಾಲರಾದ ಮನಮೋಹನ್ ನಾಯಕ್ ಕೆ.ಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಿಂಡರ್ಗಾರ್ಟನ್ ಪ್ರತಿ ವಿಭಾಗದ ವಿಧ್ಯಾರ್ಥಿಗಳಿಂದ ವಿವಿಧ ಪ್ರಾಣಿಗಳ ಛದ್ಮವೇಷ ನಡೆಸಲಾಯಿತು.

ಶಿಕ್ಷಕಿಯರಾದ ಸ್ಮೃತಿ ಜೈನ್, ಜೀಜಿ ಜೋಸ್, ಮಮತಾ ಶೆಟ್ಟಿ, ಸುದರ್ಶಿನಿ, ವಿಜಯಲಕ್ಷ್ಮಿ ಕಟ್ಟಿ, ದಕ್ಷ.ಎಂ, ಶಾಲ್ಮಲಿ ಪ್ರಸಾದ್, ಸಂಧ್ಯಾ ಹೆಗಡೆ, ಉಪಸ್ಥಿತರಿದ್ದರು.

ಶಿಕ್ಷಕಿ ಸ್ಮೃತಿ ಜೈನ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *