ಬೆಳ್ತಂಗಡಿ :(ಅ.1) ಅಂಗನವಾಡಿ ನೌಕರರು ಬಾಕಿ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಬೆಳ್ತಂಗಡಿ ಸಿಡಿಪಿಒ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: 🔥ಪುತ್ತೂರು: ಎಂ.ಎಲ್.ಸಿ ಎಲೆಕ್ಷನ್
ಅಂಗನವಾಡಿ ನೌಕರರ ಬಾಕಿ ಇರುವ ಎಲ್ಲಾ ವೇತನಗಳ ಬಿಡುಗಡೆಗೆ ಒತ್ತಾಯಿಸಿ ನಿವೃತ್ತ ಅಂಗನವಾಡಿ ನೌಕರರ ಗ್ರಾಚ್ಯುವಿಟಿ ಪಾವತಿಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾನಿರತ ಅಂಗನವಾಡಿ ಕಾರ್ಯಕರ್ತೆಯರು “ಅಂಗನವಾಡಿ ಕೇಂದ್ರಗಳಲ್ಲಿ ಎಲ್ ಕೆಜಿ, ಯುಕೆಜಿ ಪ್ರಾರಂಭಿಸಬೇಕು”, “ಅಂಗನವಾಡಿ ಕಾರ್ಯಕರ್ತೆಯರನ್ನು ಶಿಕ್ಷಕರೆಂದು ಪರಿಗಣಿಸಬೇಕು”, “ಅಂಗನವಾಡಿ ನೌಕರರಿಗೆ ಇಲಾಖೇತರ ಕೆಲಸ ನೀಡಬಾರದು,
“ಮಹಿಳಾ ಕಲ್ಯಾಣ ಇಲಾಖೆ ಅಂಗನವಾಡಿ ನೌಕರರಿಗೆ ಅವಮಾನ, ಹಿಂಸೆಗಳು ನಡೆಯದಂತೆ ರಕ್ಷಣೆ ನೀಡಬೇಕು” ಎಂಬಿತ್ಯಾದಿ ಪ್ರಮುಖ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆಗೆ ಸಿಡಿಪಿಒ ಮೂಲಕ ಸಲ್ಲಿಸಿ ಈಡೇರಿಕೆಗೆ ಪ್ರಯತ್ನಿಸುವಂತೆ ವಿನಂತಿಸಿದರು.
ಬೇಡಿಕೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳಿಸಿ ಶೀಘ್ರ ಈಡೇರಿಕೆಗೆ ಪ್ರಯತ್ನಿಸುವುದಾಗಿ ಸಿಡಿಪಿಒ ಪ್ರಿಯಾ ಆಗ್ನೇಸ್ ಭರವಸೆ ನೀಡಿದ ಹಿನ್ನೆಲೆ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.
ಈ ಸಂದರ್ಭ ಕಾರ್ಮಿಕ ಮುಖಂಡ ನ್ಯಾಯವಾದಿ ಬಿ.ಎಂ.ಭಟ್ , ಈಶ್ವರಿ ಶಂಕರ್ ಪದ್ಮುಂಜ ಮತ್ತಿತರರು ಇದ್ದರು.