ಕಾರವಾರ :(ಅ.1) ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಹೆದ್ದಾರಿಯಲ್ಲಿ ಬೃಹತ್ ಗುಡ್ಡ ಕುಸಿದು ಗಂಗಾವಳಿ ನದಿಯ ಒಡಲು ಸೇರಿತ್ತು. ಜುಲೈ 16ರಂದು ಭೂ ಕುಸಿತವಾಗಿ 11 ಜನರು ಕಣ್ಮರೆಯಾಗಿದ್ದರು. ಸೆ.25ರಂದು ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ಶವ ಸಿಕ್ಕಿತ್ತು. ಇದೀಗ ಮಾನವನ ಮೂಳೆ ಪತ್ತೆ ಆಗಿದೆ.
ಇದನ್ನೂ ಓದಿ: 😱ಬಿಗ್‌ಬಾಸ್‌ಗೆ ಟಾಂಗ್ ಕೊಟ್ಟ ಧನರಾಜ್ ಆಚಾರ್ ! ಯಾಕೆ ಗೊತ್ತಾ??
ನಿನ್ನೆ ಕಾರ್ಯಾಚರಣೆ ವೇಳೆ ಗಂಗಾವಳಿ ನದಿಯಲ್ಲಿ ಮಾನವನ ದೇಹದ 2 ಮೂಳೆಗಳು ಪತ್ತೆ ಆಗಿದೆ. ಅದು ಯಾರದ್ದು ಎನ್ನುವ ಬಗ್ಗೆ ತಿಳಿಯಲು ಡಿಎನ್‌ಎ ಟೆಸ್ಟ್ಗೆ ರವಾನೆ ಸಾಧ್ಯತೆ ಇದೆ. ಶಿರೂರಿನ ಜಗನ್ನಾಥ್, ಗಂಗೆಕೊಳ್ಳದ ಲೋಕೇಶ್ ಶವಕ್ಕಾಗಿ ಶೋಧ ಮುಂದುವರೆದಿದೆ.
ಈ ಬಗ್ಗೆ ಕಾರವಾರದಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಪ್ರತಿಕ್ರಿಯಿಸಿದ್ದು, ಶೋಧ ಕಾರ್ಯಾಚರಣೆ ವೇಳೆ ನದಿಯಲ್ಲಿ ಮಾನವನ ಮೂಳೆ ಪತ್ತೆ ಆಗಿದೆ. ಪತ್ತೆಯಾದ ಎರಡು ಮೂಳೆಗಳನ್ನು ಡಿಎನ್‌ಎ ಟೆಸ್ಟ್ ಗೆ ಕಳುಹಿಸಿದ್ದೇವೆ. ಡಿಎನ್ ಎ ಟೆಸ್ಟ್ ಬಳಿಕ ಸಂಬಂಧಪಟ್ಟ ಕುಟುಂಬಕ್ಕೆ ಹಸ್ತಾಂತರ ಮಾಡಲಾಗುವುದು.
ಮತ್ತೆ ಕಾರ್ಯಾಚರಣೆ ಮುಂದುವರೆಸುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ನಾವು ಹತ್ತು ದಿನ ಕಾರ್ಯಾಚರಣೆ ಮಾಡಲು ಅನುಮತಿ ಪಡೆದಿದ್ದೆವು, ಆದರೆ ಇಬ್ಬರ ಶೋಧಕ್ಕಾಗಿ ಇಂದು ಕಾರ್ಯಾಚರಣೆ ಮುಂದುವರೆದಿದೆ. ಕಾರ್ಯಾಚರಣೆ ಮುಂದುವರಿಸುವ ಬಗ್ಗೆ ಸಚಿವರ ಜೊತೆ ಚರ್ಚೆ ಮಾಡುವುದಾಗಿ ಹೇಳಿದ್ದಾರೆ.