Sat. Apr 19th, 2025

Ujire: ಶ್ರೀ ಧ.ಮಂ.ಪಾಲಿಟೆಕ್ನಿಕ್ ಕಾಲೇಜು ಉಜಿರೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಅಂತರ್ ಪಾಲಿಟೆಕ್ನಿಕ್ ಕಾಲೇಜು ಪುರುಷರ ಮ್ಯಾಟ್ ಕಬಡ್ಡಿ ಪಂದ್ಯಾಟ ಉದ್ಘಾಟನೆ

ಉಜಿರೆ:(ಅ.1) ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜು ಉಜಿರೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಅಂತರ್ ಪಾಲಿಟೆಕ್ನಿಕ್ ಕಾಲೇಜು ಪುರುಷರ ಮ್ಯಾಟ್ ಕಬಡ್ಡಿ ಪಂದ್ಯಾಟವು ಅ.1ರಂದು ಇಂದ್ರಪ್ರಸ್ಥ ಒಳಾಂಗಣದಲ್ಲಿ ನಡೆಯಿತು.

ಇದನ್ನೂ ಓದಿ; 🟣ರಾಷ್ಟ್ರೀಯ ಮಟ್ಟದ ಭಾರ ಎತ್ತುವಿಕೆ ಸ್ಪರ್ಧೆಯಲ್ಲಿ ಭಾಗವಹಿಸಲು ಹಿಮಾಚಲ ಪ್ರದೇಶಕ್ಕೆ ತೆರಳಲಿರುವ ಬಂದಾರು ಕೆ. ತೇಜಸ್ವಿನಿ ಪೂಜಾರಿ ಯವರಿಗೆ

ಪಂದ್ಯಾಟವನ್ನು ಪ್ರೊ ಕಬಡ್ಡಿಯ ಯು.ಪಿ.ಯೋಧ, ಗುಜರಾತ್ ತಂಡದ ಆಟಗಾರ ರತನ್ ಕೆ.ಎ. ಉದ್ಘಾಟಿಸಿ, ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಧ.ಮಂ.ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್ ರವರು ವಹಿಸಿದ್ದರು.

ಈ ಸಂದರ್ಭದಲ್ಲಿಎಸ್. ಡಿ. ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ರಮೇಶ್ ಹೆಚ್, ಎಸ್ ಡಿ.ಸ್ಪೋರ್ಟ್ಸ್ ಕ್ಲಬ್ ಕಬಡ್ಡಿ ತರಬೇತುದಾರ ಕೃಷ್ಣಾನಂದ ರಾವ್, ದೈಹಿಕ ಶಿಕ್ಷಣ ನಿರ್ದೇಶಕ ನಿತಿನ್ ಉಪಸ್ಥಿತರಿದ್ದರು.

ಪಾಲಿಟೆಕ್ನಿಕ್ ಕಾಲೇಜು ಮ್ಯಾನೇಜರ್ ಚಂದ್ರನಾಥ್ ಜೈನ್, ಉಪನ್ಯಾಸಕರು ಸಹಕರಿಸಿದರು. ಮೂರು ಅಂತ‌ರ್ ಜಿಲ್ಲೆಯ ಆಟಗಾರರು, ತರಬೇತುದಾರರು ವಿದ್ಯಾರ್ಥಿಗಳು ಹಾಜರಿದ್ದರು.

ಮೆಕ್ಯಾನಿಕ್ ವಿಭಾಗದ ಮುಖ್ಯಸ್ಥ ಶ್ರೇಯಾಂಕ್ ಜೈನ್ ಸ್ವಾಗತಿಸಿದರು. ಸಾಯಿ ಚರಣ್ ಪರಿಚಯಿಸಿದರು. ಉಪನ್ಯಾಸಕ ಸಂಪತ್ ಕುಮಾರ್ ನಿರೂಪಿಸಿ, ಕಾಲೇಜಿನ ಸಿವಿಲ್ ವಿಭಾಗದ ಉಪನ್ಯಾಸಕ ಪ್ರವೀಣ್‌ ವಂದಿಸಿದರು.

Leave a Reply

Your email address will not be published. Required fields are marked *