Tue. Apr 8th, 2025

BMTC bus: BMTC bus ನ ಕಂಡಕ್ಟರ್ ಮೇಲೆ ಪ್ರಯಾಣಿಕನೋರ್ವನಿಂದ ಚಾಕು ಇರಿತ – ಕಾರಣ ಕೇಳಿದ್ರೆ ನೀವು ಬೆಚ್ಚಿಬೀಳೋದು ಖಂಡಿತ!!!

BMTC bus: (ಅ.2) ಬಿಎಂಟಿಸಿ ಬಸ್ ಕಂಡಕ್ಟರ್ ನನ್ನು ಪ್ರಯಾಣಿಕನೋರ್ವ ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ ಬಳಿಯ ITPL ಬಸ್ ಸ್ಟಾಪ್ ಬಳಿ ನಡೆದಿದೆ.

ಇದನ್ನೂ ಓದಿ: 🐾ಬೆಳ್ತಂಗಡಿ : ಕೊಯ್ಯೂರು – ಬಾಸಮೆ ಪರಿಸರದಲ್ಲಿ ಚಿರತೆ ಸಂಚಾರ

ಅಕ್ಟೋಬರ್ 01 ರ ಸಂಜೆ ವೈಟ್ ಫೀಲ್ಡ್ ಬಳಿಯ ಐಟಿಪಿಎಲ್ ಬಸ್ ಸ್ಟಾಪ್ ನಲ್ಲಿ KA- 57-F0015 ವೋಲ್ವೋ ಬಸ್ ಕಂಡಕ್ಟರ್ ಯೋಗೇಶ್‌ ಗೆ ಅಪರಿಚಿತ ವ್ಯಕ್ತಿ ಎರಡ್ಮೂರು ಬಾರಿ ಚಾಕುವಿನಿಂದ ಇರಿದಿದ್ದಾನೆ.

ಪ್ರಯಾಣಿಕರು ತುಂಬಿದ್ದ ಬಸ್ ‌ನಲ್ಲಿ ಈ ದುಷ್ಕೃತ್ಯ ನಡೆದಿದೆ. ನಂತರ ಬಸ್‌ ನಲ್ಲಿದ್ದ ಸುತ್ತಿಗೆ ತೆಗೆದುಕೊಂಡು ಗಾಜು ಪುಡಿಗಟ್ಟಿ ಹುಚ್ಚನಂತೆ ವರ್ತಿಸಿದ್ದಾನೆ.

ಇದನ್ನು ನೋಡಿದ ಪ್ರಯಾಣಿಕರು ಕಿರುಚಾಡಿಕೊಂಡು ಬಸ್ ನಿಂದ ಕೆಳಗೆ ಇಳಿದು ಓಡಿ ಹೋಗಿದ್ದಾರೆ. ಸ್ಥಳಕ್ಕೆ ವೈಟ್ ಫೀಲ್ಡ್ ಠಾಣೆ ಪೊಲೀಸರು ಭೇಟಿ ನೀಡಿದ್ದು, ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.

ಚಾಕು ಇರಿತಕ್ಕೆ ಒಳಗಾಗಿರುವ ಕಂಡಕ್ಟರ್ ಯೋಗೇಶ್ ಅವರನ್ನು ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಚಾಕು ಇರಿದ ಪ್ರಯಾಣಿಕ ಖಾಸಗಿ ಕಂಪನಿಗೆ ಇಂಟರ್ವ್ಯೂವ್ ಗೆ ಹೋಗಿದ್ದನಂತೆ. ಈ ವೇಳೆ ಆತನಿಗೆ ಕೆಲಸ ಸಿಕ್ಕಿಲ್ಲವಂತೆ. ಆ ಫ್ರಸ್ಟ್ರೇಶನ್‌ ನಿಂದ ಆತ ಈ ತರ ವರ್ತನೆ ಮಾಡಿದನೆಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *