Tue. Jan 13th, 2026

Curacao lisansı, dünya genelinde 160’tan fazla ülke tarafından tanınmakta olup, bahsegel giril bu lisansa sahip güvenilir markalardan biridir.

Yeni üyeler, hızlı ve kolay erişim sağlamak için bahsegel güncel giriş bağlantısını tercih ediyor.

Klasik masa oyunlarından slotlara kadar bahis siteleri çeşitliliği sunuluyor.

Oyuncular hızlıca işlem yapmak için Bahsegel giriş bağlantısını takip ediyor.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಚಿತ್ರಾ, ಯೋಗ: ಐಂದ್ರ, ಕರಣ: ಕಿಂಸ್ತುಘ್ನ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 19 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:51 ರಿಂದ 03:20, ಯಮಘಂಡ ಕಾಲ ಬೆಳಿಗ್ಗೆ 06:24ರಿಂದ 07:53ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:23 ರಿಂದ 10:52 ರವರೆಗೆ.

ಮೇಷ ರಾಶಿ :ಮನೆಯ ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ ಹಾಗೂ ಆತಂಕ ಇರುವುದು. ಮಕ್ಕಳ‌ ಮೇಲೆ ನಿಮಗೆ ಅತಿಯಾದ ಮೋಹವು ಇರಲಿದೆ. ದಾಂಪತ್ಯದಲ್ಲಿ ನೀವು ಸಂತೋಷವಾಗಿರಲು ಹೊಸ ಆಯಾಮವನ್ನು ಕಂಡುಕೊಳ್ಳುವಿರಿ.‌ ಕುಟುಂಬವನ್ನು ಸಂತೋಷದಿಂದ ಇಡುವಿರಿ. ಅಸಪ್ತರನ್ನು ಕಳೆದುಕೊಳ್ಳುವ ಭೀತಿ ಇರಲಿದೆ.

ವೃಷಭ ರಾಶಿ : ಅಧಿಕಾರಿಗಳ ಒತ್ತಡವೇ ನಿಮ್ಮ ಉದ್ವೇಗಕ್ಕೆ ಕಾರಣವಾಗಲಿದೆ. ಇಂದು ನಿಮಗೆ ಯಾರ ಸಹಾನುಭೂತಿಯೂ ಬೇಡವಾಗಬಹುದು. ಚಂಚಲವಾದ ಮನಸ್ಸನ್ನು ನೀವು ನಿಯಂತ್ರಿಸಲು ನಾನಾ ವಿಧವಾದ ಕಸರತ್ತು ಮಾಡುವಿರಿ. ಉದ್ಯೋಗದ ಸ್ಥಳದಲ್ಲಿ ಅಸಮಾಧಾನವಿರಲಿದ್ದು, ನೆಮ್ಮದಿಯಿಂದ ಕೆಲಸವನ್ನು ಮಾಡಲು ಕಷ್ಟವಾದೀತು. ಎಲ್ಲ ಕಾರ್ಯಗಳನ್ನೂ ಮುಗಿಸಿ ಆರಾಮಾಗಿ ಇರುವಿರಿ.

ಮಿಥುನ ರಾಶಿ : ಅನೇಕ ವಿಚಾರಗಳ ಕಡೆ ನಿಮ್ಮ ಗಮನವಿರುವುದು. ಹಾಗಾಗಿ ಇಂದಿನ ಕಾರ್ಯವು ಸಫಲವಾಗದು. ನಿಮ್ಮ ಬಿಡುವಿನ ದಿನದಲ್ಲಿಯೂ ಕುಟುಂಬದವರ ಬಗ್ಗೆ ಕಾಳಜಿ ಇರದು.ಹೊಸ ಬಂಧುಗಳ ಪರಿಚಯವು ನಿಮಗಾಗುವುದು. ಧಾರ್ಮಿಕ ವಿಚಾರದಲ್ಲಿ ಆಸಕ್ತಿ ಉಂಟಾಗಬಹುದು. ಅವಿವಾಹಿತರು ವಿವಾಹ ಚಿಂತನೆಯನ್ನು ಮನೆಯಲ್ಲಿ ಪ್ರಸ್ತಾಪಿಸುವಿರಿ. ನೀವು ಮನಸ್ಸಿಗೆ ನೆಮ್ಮದಿ ನೀಡುವ ಸ್ಥಳಗಳಿಗೆ ಹೋಗುವಿರಿ. ನಿಮ್ಮ‌ ಮಾತುಗಳು ಅಹಂಕಾರದಂತೆ ತೋರಬಹುದು.

ಕರ್ಕಾಟಕ ರಾಶಿ : ಅನ್ವೇಷಣೆಯ ಮನಃಸ್ಥಿತಿಯವರಿಗೆ ಯಾವುದಾದರೂ ಮಾರ್ಗವು ಸಿಗುವುದು. ರಾಜಕೀಯ ಪರಿವರ್ತನೆಯು ನಿಮ್ಮಲ್ಲಿ ಅಚ್ಚರಿ ತಂದೀತು. ನೀವು ಇಂದು ನಿಮಗೆ ಮಾತ್ರ ಗೊತ್ತಿರುವ ಇನ್ನೊಬ್ಬರ ರಹಸ್ಯವನ್ನು ಹೇಳುವಿರಿ. ಬಾಡಿಗೆ ಮನೆಯವರಾಗಿದ್ದರೆ ಮನೆಯನ್ನು ಬದಲಿಸುವಿರಿ. ಭೂವ್ಯವಹಾರವನ್ನು ಮಾಡುವವರಿಗೆ ಹೆಚ್ಚು ಲಾಭವು ಸಿಗಲಿದೆ.

ಸಿಂಹ ರಾಶಿ : ಸಂಗಾತಿಯ ಮನೋಭಾವವನ್ನು ನೀವು ಅರ್ಥಮಾಡಿಕೊಳ್ಳಲಾರಿರಿ. ಅಧಿಕಾರ ಮತ್ತು ಸಂಪತ್ತು ಪ್ರದರ್ಶನಕ್ಕೆ ಅಲ್ಲ ಎಂಬುದು ತಿಳಿಯುವುದು. ಸಾಲಬಾಧೆಯಿಂದ ನಿಮಗೆ ಬಹಳ ತೊಂದರೆಯಾಗಲಿದೆ. ನಿಮಗೆ ಸಹಾಯವನ್ನು ಕೇಳಲು ಮುಜುಗರವಾದೀತು. ವ್ಯಾಪಾರದ ಸಲುವಾಗಿ ದೂರಪ್ರಯಾಣವನ್ನು ಮಾಡಬೇಕಾಗಬಹುದು.

ಕನ್ಯಾ ರಾಶಿ :ಸಂಬಂಧಗಳು ಸಂಬಂಧಗಳಾಗಿಯೇ ಇರಲಿ. ಮಕ್ಕಳ ಅನಾರೋಗ್ಯದ ಕಾರಣ ಅವರ ಜೊತೆ ಇರಬೇಕಾಗುವುದು. ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿನ್ನಡೆಯನ್ನು ಕಂಡು ಪಾಲಕರಿಗೆ ಆತಂಕವಾಗಬಹುದು. ಸ್ನೇಹಿತರಿಂದ ಉಡುಗೊರೆಗಳು ಸಿಗಬಹುದು. ತಾಯಿಯ ಪ್ರೀತಿಯು ನಿಮಗೆ ಹೆಚ್ಚು ಸಿಗುವುದು. ಇಂದು ನಿಮ್ಮ ಕೋಪವನ್ನು ನಿಯಂತ್ರಣಕ್ಕೆ ತಂದುಕೊಳ್ಳುವಿರಿ.

ತುಲಾ ರಾಶಿ : ಚಾಣಾಕ್ಷತನದಿಂದ ಗಿಟ್ಟಿಸಿಕೊಂಡ ಅಧಿಕಾರವು ಸಮಯಮಿತಿಯಲ್ಲಿ ಇರುತ್ತದೆ. ಪ್ರೇಮಪ್ರಕರಣವು ನಿಮಗೆ ದುಃಖವನ್ನು ಕೊಟ್ಟೀತು. ನಿಮ್ಮನ್ನು ನಿಂದಿಸುವವರ ವಿರುದ್ಧ ಅತಿಯಾದ ಕೋಪವು ಬರಲಿದೆ. ಶತ್ರುಗಳೂ ನಿಮಗೆ ಉಪದೇಶ ಮಾಡುವರು. ಮಕ್ಕಳಿಗಾಗಿ ನೀವು ಬದಲಾವಣೆಯನ್ನು ಮಾಡಿಕೊಳ್ಳುವಿರಿ.

ವೃಶ್ಚಿಕ ರಾಶಿ : ನಿಮ್ಮ ಮಾತುಗಳು ಚಾಣಾಕ್ಷತನದಂತೆ ಇರುವುದು. ನಿಮ್ಮ ಸಾಧನೆಯನ್ನು ಹಂಚಿಕೊಳ್ಳುವಿರಿ‌. ಯೋಗ್ಯ ಪುರಸ್ಕಾರ, ಮಾತುಗಳು ಸಿಗಲಿವೆ. ಹಣಕಾಸಿನ ವಿಚಾರದಲ್ಲಿ ನಿಮಗೆ ಮೋಸವಾಗಲಿದ್ದು, ಅದರಲ್ಲೂ ನಿಮ್ಮವರೇ ಅದನ್ನು ಮಾಡಿದ್ದು ಎಂಬ ವದಂತಿಯು ನಿಮಗೆ ಸಹಿಸಲು ಅಸಾಧ್ಯವಾದುದಾಗಿದೆ. ನಿಮ್ಮ ಸಣ್ಣ ವ್ಯಾಪಾರವೂ ಆದಾಯದ ಮೂಲವಾಗಬಹುದು.

ಧನು ರಾಶಿ : ನೀವೇ ನಿಮ್ಮನ್ನು ಸರಿಮಾಡಿಕೊಳ್ಳುವ ಬಗ್ಗೆ ಯೋಚಿಸಿದರೆ ಉತ್ತಮ. ಕಾನೂನಿನಿಂದ ಜಯಸುವ ಉತ್ಸಾಹವು ಇಂದು ನಿರುತ್ಸಾಹದಲ್ಲಿ ಕೊನೆಯಾಗಲಿದೆ. ಎಲ್ಲವೂ ವಿಧಿಯ ನಿಯಮದಂತೆ ಆಗುತ್ತದೆ ಎಂಬ ಸತ್ಯವನ್ನು ನೀವು ಅರಿತರೂ ದುಃಖವು ಹೆಚ್ಚಾಗುವುದು. ನಿಮ್ಮರನ್ನು ನೀವು ದೂರ ಮಾಡಿಕೊಳ್ಳುವಿರಿ. ನಿಮಗೆ ಬರುವ ವಿವಾಹ ಸಂಬಂಧವನ್ನು ಬೇರೆ ಬೇರೆ ಕಾರಣಗಳನ್ನು ಕೊಟ್ಟು ನೀವು ನಿರಾಕರಿಸುವಿರಿ.‌

ಮಕರ ರಾಶಿ : ಸಮಾನಮನಸ್ಕರು ಸೇರಿದಾಗ ಮಾತ್ರ ನಿಮ್ಮ ಕಾರ್ಯವು ಸಾಧುವಾಗುವುದು. ನೀವು ಎಲ್ಲದಕ್ಕೂ ಅನುಕೂಲ ಯೋಗವನ್ನು ನೋಡುತ್ತ ಕುಳಿತಿರಲು ಆಗದು. ನೀವು ಪಡೆದುಕೊಂಡ ವಿರಾಮವನ್ನು ಆನಂದದಿಂದ ಕಳೆಯುವಿರಿ. ಸ್ನೇಹಿತರ ಮೇಲೆ ನಿಮಗೆ ಶಂಕೆ ಉಂಟಾಗಬಹುದು. ಹಣದ ವಿಚಾರವನ್ನು ನೀವು ಯಾರ ಬಳಿಯೂ ಹೇಳುವುದು ಬೇಡ.

ಕುಂಭ ರಾಶಿ : ಆಪ್ತರಿಂದ ನಿಮಗೆ ಪರೋಕ್ಷವಾಗಿ ನೋವು ಬರಬಹುದು. ಇಂದು ನಿಮ್ಮ ವೃತ್ತಿಕ್ಷೇತ್ರದಲ್ಲಿ ನೀವು ಕಲಹಕ್ಕೆ ದಾರಿ ಮಾಡಿಕೊಡುವಿರಿ. ನಿಮ್ಮನ್ನು ಸಂತೋಷಪಡಿಸಲು ನಿಮ್ಮನ್ನು ಚಂದದಲ್ಲಿ ಹೊಗಳುವರು. ಪುಣ್ಯಸ್ಥಳಕ್ಕೆ ಹೋಗುವ ಮನಸ್ಸಾಗುವುದು. ಕುಟುಂಬ ನಿರ್ವಹಣೆಯನ್ನು ಒತ್ತಡದಿಂದ ನೀವು ಮಾಡಬೇಕಾದೀತು.

ಮೀನ ರಾಶಿ : ನೀವು ಇಂದು ಅನವಶ್ಯಕ ವಿವಾದಗಳಿಗೆ ಮಾತನ್ನು ಹರಿದುಬಿಡುವುದು ಬೇಡ.‌ ನಿಮ್ಮ ಮಾನಸಿಕ ತೊಳಲಾಟಕ್ಕೆ ಪೂರ್ಣವಿರಾಮದ ಅವಶ್ಯಕತೆ ಇದ್ದು, ಸರಿಯಾದ ವ್ಯಕ್ತಿಯಿಂದ ಅದು ಸಾಧ್ಯವಾಗುವುದು. ಆಪ್ತರನ್ನು ದೂರ ಮಾಡಿಕೊಂಡು ಸಂಕಟಪಡಬೇಕಾದೀತು. ಸಂಗಾತಿಯ ವಿಚಾರದಲ್ಲಿ ನಿಮಗೆ ಅಸಮಾಧಾನ ಎದ್ದು ಕಾಣುವುದು. ನಿಮ್ಮನ್ನು ಇಷ್ಟಪಡುವವರಿಗೆ ಸಮಯವನ್ನು ಕೊಡಿ. ವಾಹನದ ವಿಚಾರದಲ್ಲಿ ನಿಮಗೆ ಆಸಕ್ತಿಯು ಕಡಿಮೆ ಇರಲಿದೆ.

Leave a Reply

Your email address will not be published. Required fields are marked *