ಗುರುವಾಯನಕೆರೆ:(ಅ.3) ವಿದ್ವತ್ ಪದವಿ ಪೂರ್ವ ಕಾಲೇಜಿನಲ್ಲಿ ಅ.2 ರಂದು ವಿನೂತನವಾಗಿ ಗಾಂಧಿ ಜಯಂತಿಯನ್ನು ಆಚರಿಸಲಾಯಿತು.
ಇದನ್ನೂ ಓದಿ: 🐯ಧರ್ಮಸ್ಥಳ: ಕುಡುಮಶ್ರೀ ಟೈಗರ್ಸ್ ನಡುಗುಡ್ಡೆ ಧರ್ಮಸ್ಥಳ ತಂಡದಿಂದ 7 ನೇ ವರ್ಷದ ವೈಭವದ “ಪಿಲಿಏಸ”
ಗಾಂಧಿ ಭಾವ ಚಿತ್ರದೊಂದಿಗೆ ದೀಪ ಪ್ರಜ್ವಲನ ಮತ್ತು ಪುಷ್ಪಾರ್ಚನೆ ಕಾರ್ಯಕ್ರಮವನ್ನು ಶೈಕ್ಷಣಿಕ ನಿರ್ದೇಶಕರು ಗಂಗಾಧರ ಇ ಮಂಡಗಳಲೆ,
ಆಡಳಿತ ಅಧಿಕಾರಿ ಚಂದ್ರಶೇಖರ ಗೌಡ, ಪ್ರಾಂಶುಪಾಲರು ಅರುಣ್ ಕ್ಯಾಸ್ಟಲಿನೊ, ಉಪಪ್ರಾಂಶುಪಾಲರು ಜಯೇಂದ್ರ ಬಂದ್ಯಾನ್ ಮತ್ತು ವಿದ್ಯಾರ್ಥಿಗಳು ನೆರವೇರಿಸಿದರು.
ಗಾಂಧಿ ಜೀವನ ತತ್ವ ಮತ್ತು ದೇಶ ಅಭ್ಯುದಯದಲ್ಲಿ ವಿದ್ಯಾರ್ಥಿಗಳ ವೈಯಕ್ತಿಕ ತತ್ವದ ಕುರಿತು ಶಿಕ್ಷಣ ನಿರ್ದೇಶಕರು ಮಾತನಾಡಿದರು.
ನಂತರ ಗಾಂಧಿ ಸ್ಮೃತಿ ಹಾಗೂ ವಿವಿಧ ದೇಶಭಕ್ತಿ ಗೀತೆಗಳನ್ನು ವಿದ್ಯಾರ್ಥಿಗಳು ಮತ್ತು ಕಾಲೇಜಿನ ಬೋಧಕ ಹಾಗೂ ಬೋಧಕೇತರ ವಗ೯ದವರು ನೆಲದಲ್ಲಿ ಆಸೀನರಾಗಿ 1 ಗಂಟೆಯ ವರೆಗೆ ಹಾಡಿದರು.
ಕನ್ನಡ ವಿಭಾಗದ ಮುಖ್ಯಸ್ಥರು ನೀಲಕಂಠ ಕಾರ್ಯಕ್ರಮವನ್ನು ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.