ಬೈಲಡ್ಕ:(ಅ.4) ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳ ಪರದಾಟ ನಡೆಸುತ್ತಿರುವ ಘಟನೆ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಬೈಲಡ್ಕದಲ್ಲಿ ನಡೆದಿದೆ.
ಇದನ್ನೂ ಓದಿ: 🐯ಪುತ್ತೂರು: (ಅ.5-6 ) “ಪುತ್ತೂರುದ ಪಿಲಿಗೊಬ್ಬು”, ಫುಡ್ ಫೆಸ್ಟ್ – ಸೀಸನ್ -2
ಬಸ್‌ನ ಬೋರ್ಡ್ ಮೇಲೆ ಬೈಲಡ್ಕ ಅಂತ ಹೆಸರಿದ್ದರೂ ಕೂಡಾ ಊರಿಗೆ ಬಸ್ ಮಾತ್ರ ಬರುತ್ತಾ ಇಲ್ಲಾ ಅಂತ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ಹಾರಿಕೆ ಉತ್ತರ ನೀಡುತ್ತಾ ಇದ್ದಾರೆ. ಕಂಡಕ್ಟರ್ ಜೊತೆ ಕೇಳಿದರೆ ಡಿಪೋದಲ್ಲಿ ಕೇಳಿ ಅಂತಾ ಉಡಾಫೆ ಉತ್ತರ ನೀಡುತ್ತಾರೆ. ಡಿಪೋದಲ್ಲಿ ಕೇಳಿದರೆ ರೋಡ್ ಸರಿಯಿಲ್ಲ ಅಂತಾ ಉತ್ತರ ಕೊಡುತ್ತಾ ಇದ್ದಾರೆ.
ಬೈಲಡ್ಕಕ್ಕೆ ಯಾಕೆ ಗಾಡಿ ಹೋಗಲ್ಲ ಅಂತ ಕೇಳೋಕೆ ಹೋದ್ರೆ ರೇಗ್ತಾರೆ. ಬೈಲಡ್ಕ ಬೋರ್ಡ್ ಇದ್ರೂ ಊರಿಗೆ ಹೋಗೋಕೆ ಪರ್ಮಿಷನ್ ಇಲ್ಲ ಅಂತಾರೆ. ಬಸ್ ತಿರುಗುವಷ್ಟು ಜಾಗ ಬೈಲಡ್ಕದಲ್ಲಿ ಇಲ್ಲ ಅಂತಾ ಡ್ರೈವರ್ ಹೇಳುತ್ತಾರೆ.
ಅಲ್ಲಿ ಎಲ್ಲಾ ವ್ಯವಸ್ಥೆಗಳು ಸರಿ ಇದ್ರೂ ಕೂಡಾ ಬೈಲಡ್ಕ ತನಕ ಬಸ್ ಮಾತ್ರ ಹೋಗ್ತಿಲ್ಲ. ಡಿಪೋಗೆ ಕಂಪ್ಲೈಂಟ್ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಅಂತ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗ್ಗೆ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಊರಿಗೆ ಬಸ್ ಇದ್ರೂ ಅರ್ಧದಲ್ಲಿ ಇಳಿದು ಗಾಡಿ ಮಾಡ್ಕೊಂಡು ಹೋಗೋ ಸ್ಥಿತಿ ನಿರ್ಮಾಣವಾಗಿದೆ.
ಇನ್ನಾದರೂ ಸಾರಿಗೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಬೈಲಡ್ಕ ಗ್ರಾಮಸ್ಥರ ಹಾಗೂ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ , ಸಮಸ್ಯೆಗಳಿಗೆ ಸಾರಿಗೆ ಅಧಿಕಾರಿಗಳು ಪರಿಹಾರ ನೀಡಬೇಕು.