Wed. Nov 20th, 2024

suicide: ಮದುವೆಗೆ ನೋ ಎಂದ ಸೀರಿಯಲ್‌ ನಟಿ – ಆತ್ಮಹತ್ಯೆಗೆ ಶರಣಾದ ಯುವಕ

The police tied the heads of the victims

ಬೆಂಗಳೂರು :(ಅ.4) ಸೀರಿಯಲ್ ನಟಿಯೊಬ್ಬಳು ತನ್ನನ್ನು ಮದುವೆಯಾಗೋದಕ್ಕೆ ಒಪ್ಪಿಲ್ಲ ಅನ್ನೋ ಕಾರಣಕ್ಕೆ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: ⭕ತಿರುಪತಿ ಲಡ್ಡು ವಿವಾದ – ಎಸ್‌ಐಟಿ ರಚಿಸುವಂತೆ ಸುಪ್ರೀಂ ಆದೇಶ.!


ಮದನ್ (25) ಆತ್ಮಹತ್ಯೆಗೆ ಶರಣಾದ ಯುವಕ.

ವೀಣಾ ಎಂಬ ಸೀರಿಯಲ್ ನಟಿಯ ವ್ಯಾವೋಹಕ್ಕೆ ಬಿದ್ದ ಮದನ್ ಆಕೆ ಮದುವೆಯಾಗಲು ನಿರಾಕರಿಸಿದ್ದಕ್ಕೆ ಸಾವಿಗೆ ಶರಣಾಗಿದ್ದಾನೆ. ವೀಣಾ ಹಾಗೂ ಮದನ್ ಸೆಪ್ಟೆಂಬರ್ 1 ರಂದು ರಾತ್ರಿ ಒಟ್ಟಿಗೆ ಪಾರ್ಟಿ ಮಾಡಿದ್ದರು ಎನ್ನಲಾಗಿದೆ.

ಆದರೆ ವೀಣಾ ಮದುವೆಗೆ ನಿರಾಕರಿಸಿದ್ದರು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಮನನೊಂದು ಮದನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಟಿ ವೀಣಾರಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *