Wed. Nov 20th, 2024

Ujire: ಎಸ್‌.ಡಿ.ಎಂ ಮಲ್ಟಿ- ಸ್ಪೆಷಾಲಿಟಿ ಆಸ್ಪತ್ರೆ ಉಜಿರೆ ಹಾಗೂ ಎಸ್‌.ಡಿ.ಎಂ ವೈದ್ಯಕೀಯ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆ , ಧಾರವಾಡ ಇದರ ಜಂಟಿ ಸಹಯೋಗದಲ್ಲಿಉಚಿತ ಶ್ರವಣ ಮತ್ತು ಮಾತು ಪರಿಶೀಲನಾ ಶಿಬಿರದ ಉದ್ಘಾಟನಾ ಸಮಾರಂಭ

ಉಜಿರೆ:(ಅ.4) ಎಸ್.ಡಿ.ಎಂ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಉಜಿರೆ ಮತ್ತು ಎಸ್.ಡಿ.ಎಂ. ವೈದ್ಯಕೀಯ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆ, ಧಾರವಾಡ ಇದರ ಜಂಟಿ ಸಹಯೋಗದಲ್ಲಿ ನಡೆದ

ಇದನ್ನೂ ಓದಿ: 🟠Ujire:(ಅ.5) ಶ್ರೀ ಧ. ಮಂ.ಕಾಲೇಜು ಉಜಿರೆ ರಾಷ್ಟ್ರೀಯ ಸೇವಾ ಯೋಜನೆ ಇದರ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ “ಸುವರ್ಣ ಸಮ್ಮಿಲನ” ಕಾರ್ಯಕ್ರಮ

ಉಚಿತ ಶ್ರವಣ ಮತ್ತು ಮಾತು ಪರಿಶೀಲನಾ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಎಸ್. ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉಜಿರೆಯಲ್ಲಿ ಅ.4 ರಂದು ನಡೆಯಿತು.

ಎಲ್ಲಾ ವಯಸ್ಸಿನ ಜನರಿಗೆ ಮಾತು, ಭಾಷೆ ಮತ್ತು ಶ್ರವಣ ಸಂಬಂಧಿತ ಸಮಸ್ಯೆಗಳನ್ನು ಗುರುತಿಸಲು ಶಿಬಿರವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀ ಶರತ್ ಕೃಷ್ಣ ಪಡ್ವೆಟ್ನಾಯ ರವರು ನೆರವೇರಿಸಿದರು.

ಜೊತೆಗೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಎಂ.ಡಿ ಎಂ.ಜನಾರ್ದನ್, ಎಸ್‌.ಡಿ.ಎಂ ಕಾಲೇಜು ಮತ್ತು ಆಸ್ಪತ್ರೆ ಧಾರವಾಡ ಇದರ ಸ್ಪೀಚ್ ಮತ್ತು ಹಿಯರಿಂಗ್ ಹೆಚ್.ಓ.ಡಿ ಡಾ| ವಸೀಮ್ ಅಹ್ಮದ್ ಮತ್ತು ಎಸ್.ಡಿ.ಎಂ ಹಾಸ್ಪಿಟಲ್ ವೈದ್ಯರು ಭಾಗವಹಿಸಿದ್ದರು.

ಮಕ್ಕಳಿಗೆ, ಹಿರಿಯರಿಗೆ ಮತ್ತು ವಯಸ್ಕರಿಗೆ ಉಚಿತ ಶ್ರವಣ ಮತ್ತು ಮಾತು ಪರಿಶೀಲನೆ ಅನುಭವ ಸಂಪನ್ನ ಶ್ರವಣ ತಜ್ಞರು ಮತ್ತು ಭಾಷಾ ತಜ್ಞರಿಂದ ಸಮಾಲೋಚನೆ ನಡೆಯಲಿದೆ.


ಭಾರತ ಸರ್ಕಾರದ ಎ.ಡಿ.ಐ.ಪಿ ಯೋಜನೆಯಡಿ ಶ್ರವಣೋಪಕರಣ ಪಡೆಯಲು ಅಗತ್ಯವಿರುವ ದಾಖಲೆಗಳನ್ನು ಕುರಿತು ಮಾರ್ಗದರ್ಶನ ಮತ್ತು ಪರಿಶೀಲನೆ ಮುಂತಾದ ವಿಚಾರಗಳ ಕುರಿತು ಎರಡು ದಿನದ ಉಚಿತ ಶಿಬಿರ ನಡೆಯಲಿದೆ.

Leave a Reply

Your email address will not be published. Required fields are marked *