Wed. Jan 14th, 2026

Curacao lisansı, dünya genelinde 160’tan fazla ülke tarafından tanınmakta olup, bahsegel giril bu lisansa sahip güvenilir markalardan biridir.

Yeni üyeler, hızlı ve kolay erişim sağlamak için bahsegel güncel giriş bağlantısını tercih ediyor.

Klasik masa oyunlarından slotlara kadar bahis siteleri çeşitliliği sunuluyor.

Oyuncular hızlıca işlem yapmak için Bahsegel giriş bağlantısını takip ediyor.

Daily Horoscope - ಇಂದು ಈ ರಾಶಿಯವರಿಗೆ ಆತುರವೇ ಅಪಾಯ ತಂದೊಡ್ಡಬಹುದು

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಸ್ವಾತಿ, ಯೋಗ: ವಿಷ್ಕಂಭ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 17 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:22 ರಿಂದ 10:52, ಯಮಘಂಡ ಕಾಲ ಮಧ್ಯಾಹ್ನ 01:50ರಿಂದ 03: 19ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:24 ರಿಂದ 07:53 ರವರೆಗೆ.

ಮೇಷ ರಾಶಿ : ನಿಮಗೆ ಇಂದು ಬಂಧನದಿಂದ ಮುಕ್ತವಾದಂತೆ ಅನ್ನಿಸಬಹುದು. ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರಿಯುವ ಅವಕಾಶವು ಮತ್ತೆ ಸಿಗುವುದು. ಮೋಜಿನಲ್ಲಿ ಈ ದಿನವನ್ನು ಕಳೆಯುವಿರಿ. ಇಂದು ವಿದ್ಯಾಭ್ಯಾಸದಲ್ಲಿ ಆಸಕ್ತಿಯು ಕಡಿಮೆ ಆಗಲಿದೆ. ಆಸ್ತಿ ಖರೀದಿಯ ಬಗ್ಗೆ ಮನೆಯಲ್ಲಿ ಚಿಂತನೆಯನ್ನು ನಡೆಸಬಹುದು.

ವೃಷಭ ರಾಶಿ : ಶ್ರಮದಿಂದ ಎಲ್ಲ ಕಾರ್ಯವೂ ಆಗದು. ಉಪಾಯದಿಂದ ಮಾಡುವುದನ್ನು ಹಾಗೆಯೇ ಮಡುವುದು ಸೂಕ್ತ. ನೀವು ಬಂಧುಗಳಿಂದ ಸಹಾಯವನ್ನು ನಿರೀಕ್ಷಿಸುವಿರಿ. ನಿಮ್ಮ ಸಂಪತ್ತಿನ ಅಳೆಯುವರು. ಗುಟ್ಟನ್ನು ನೀವು ಬಿಟ್ಟಕೊಡುವಿರಿ. ನಿಮ್ಮ ತಪ್ಪು ತಿಳಿದು ಕೊಂಡವರಿಗೆ ಸರಿಯಾದ‌ ಮಾಹಿತಿಯನ್ನು ಕೊಡುವಿರಿ.

ಮಿಥುನ ರಾಶಿ : ಬಿಗುಮಾನವು ನಿಮ್ಮನ್ನು ತೆರೆಯಲು ಬಿಡದು. ಅಧಿಕಾರವು ನಿಮ್ಮದಾದ ಕಾರಣ ಜವಾಬ್ದಾರಿಯೂ ನಿಮ್ಮದೇ ಆಗಿರುತ್ತದೆ. ಬಂಧುಗಳಿಗಾಗಿ ನೀವು ಹಣವನ್ನು ನೀಡಬೇಕಾಗಬಹುದು. ವಿದ್ಯಾಭ್ಯಾಸಕ್ಕಾಗಿ ಮನೆಯವರಿಂದ ಪ್ರೋತ್ಸಾಹವನ್ನು ಪಡೆಯುವಿರಿ. ಅನಿವಾರ್ಯವಾಗಿ ನೀವು ಬದಲಾಯಿಸಿದ ವೃತ್ತಿಗೇ ಹೋಗಬೇಕಾಗುವುದು.

ಕರ್ಕಾಟಕ ರಾಶಿ : ನಿಮ್ಮ ಉದ್ಯಮವು ಇಚ್ಛೆಗೆ ಅನುಸಾರವಾಗಿ ನಡೆಯುತ್ತಿದೆಯೇ ಎಂಬುದನ್ನು ಪರೀಕ್ಷಿಸುವಿರಿ. ನಾಯಕರಾಗುವುದಕ್ಕಿಂತ ಹಾಗೆ ನಡೆದುಕೊಳ್ಳುವುದೂ ಮುಖ್ಯವಾಗಲಿದೆ. ಜೀವನವು ಬಹಳ ನಿಧಾನವಾಗಿ ಚಲಿಸುತ್ತಿದೆ ಎಂದು ಅನ್ನಿಸಬಹುದು. ಸಂಗಾತಿಯ ಜೊತೆ‌ಗಿನ ಕಲಹದಿಂದ‌ ಕೆಲ ಕಾಲ ಮೌನವು ಆವರಿಸುವುದು.

ಸಿಂಹ ರಾಶಿ : ನಿಮ್ಮ ವ್ಯಕ್ತಿತ್ವದಿಂದ ಯಾರಾದರೂ ಆಕರ್ಷಿತರಾಗಬಹುದು. ಮಕ್ಕಳಿಂದ ನಿಮ್ಮ ತೊಂದರೆ ದೂರಾಗುವುದು. ಸಾಲವೇ ನಿಮಗೆ ಸಾಲವಾಗದು. ಅನಾರೋಗ್ಯದ ಕಾರಣ ಆರ್ಥಿಕ ಮಟ್ಟವು ಕುಸಿಯುವುದು. ಹೆಚ್ಚಿನ ಆರ್ಥಿಕ ಮೂಲವನ್ನೂ ಪಡೆಯಲು ಕಷ್ಟವಾದೀತು. ಹೊಸ ಉದ್ಯಮದ ಯೋಚನೆಯನ್ನು ಸದ್ಯ ಕೈ ಬಿಡುವುದು ಒಳ್ಳೆಯದು.

ಕನ್ಯಾ ರಾಶಿ : ಔಷದೀಯ ವ್ಯಾಪಾರದಲ್ಲಿ ಗಣನೀಯ ಪ್ರಗತಿಯು ಕಾಣಿಸುವುದು. ಕುಟುಂಬದಲ್ಲಿ ಬರುವ ಕಲಹಕ್ಕೆ ವಿರಾಮದ ಅಗತ್ಯವಿದೆ. ನಿಮ್ಮ ಬಳಿ ಅಪರಿಚಿತರು ಸಹಾಯವನ್ನು ಕೇಳಿಕೊಂಡು ಬರಬಹುದು. ಇಲ್ಲ ಎನದೇ ಅಲ್ಪವನ್ನಾದರೂ ದಾನಮಾಡಿ. ಮನೆಗೆ ಬೇಕಾದ ವಸ್ತುಗಳನ್ನು ನೀವು ಖರೀದಿಸುವಿರಿ.

ತುಲಾ ರಾಶಿ : ನಿಮ್ಮ ಖರ್ಚಿನ ಅಂದಾಜು ಮೀರಿದಂತೆ ನಿಮಗೆ ಕಾಣಿಸಬಹುದು. ನಿಮಗೆ ಸಿಗುವ ಜಯದಿಂದ ಕುಟುಂಬಕ್ಕೆ ಸಂತಸ. ಒಂಟಿಯಾಗಿ ಇದ್ದಷ್ಟೂ ನಿಮಗೆ ಏನೇನೋ ಯೋಚನೆಗಳು ಬರಬಹುದು. ನಿಮ್ಮ ಗೌರವಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಿ. ಕೆಲವು ಪ್ರಗತಿಗಳು ನಿಮಗೆ ಆಶ್ಚರ್ಯಕರ ಎನಿಸುವುದು. ಜಾಣತನದಿಂದ ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳಬೇಕಾಗಬಹುದು.‌

ವೃಶ್ಚಿಕ ರಾಶಿ : ಎಲ್ಲವನ್ನೂ ಸಂಭ್ರಮಿಸಿದರೆ ಯಾವುದೂ ಕಷ್ಟವೆನಿಸದು. ನಿಮ್ಮ‌ ಸಮಾನರಿಗೂ ಕೆಲವು ಸಂದರ್ಭದದಲ್ಲಿ ಗೌರವ ಕೊಡಬೇಕಾಗುವುದು. ನಿಮ್ಮ ಮಾತನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೂ ಆಗದು. ದ್ವಂದ್ವಗಳು ಬಂದಾಗ ಎದುರಿಸುವ ಬಗ್ಗೆ ಯೋಚಿಸಿ. ಆಪ್ತರ ಭೇಟಿಯಾಗುವ ನಿಮ್ಮ ಕಾರ್ಯವು ಸಫಲವಾಗದು. ಅಧಿಕಾರಿ ವರ್ಗ ನಿಮ್ಮ‌ ಮೇಲೆ ಬಂದ ದೂರಿನ ವಿಚಾರಣೆಯನ್ನು ಮಾಡಬಹುದು.

ಧನು ರಾಶಿ : ನಿಮಗೆ ಹೊಂದಾಣಿಕೆ ಸ್ವಭಾವವು ಹಿಡಿಸುವುದಿಲ್ಲ. ಕಾನೂನಿಗೆ ಸಮ್ಮತವಾದ ಕಾರ್ಯವನ್ನು ಮಾಡುವಿರಿ. ಸುಖವಾಗಿರಲು ಬೇಕಾದ ಎಲ್ಲ ಮಾರ್ಗಗಳನ್ನು ಹುಡುಕುವಿರಿ. ಗೊತ್ತಿಲ್ಲದೇ ಮಾತನಾಡುವುದು ನಿಮಗೆ ಶೋಭೆ ತರದು. ವಂಚನೆಯ ಬಲೆಯಲ್ಲಿ ನೀವು ಸಿಕ್ಕಿಕೊಳ್ಳಬಹುದು.

ಮಕರ ರಾಶಿ : ಸಾಲವನ್ನು ತೀರಿಸುವ ಬಗ್ಗೆ ಸಣ್ಣ ಪ್ರಯತ್ನವನ್ನಾದರೂ ಮಾಡಿ. ಇಂದು ನೀವು ಬೇರೆಯವರ ಕಷ್ಟಕ್ಕೆ ಸ್ಪಂದಿಸಬೇಕಾಗಬಹುದು. ಆರ್ಥಿಕ ಮೂಲವು ಕೈತಪ್ಪಿ ಹೋಗಬಹುದು. ಕನಸನ್ನು ನನಸಾಗಿಸಲು ನಿಮ್ಮ ಪ್ರಯತ್ನ ಅತಿಮುಖ್ಯವಾಗುವುದು. ಎಲ್ಲವೂ ಸರಿಯಿದ್ದರೂ ಮತ್ತೆಲ್ಲೋ ತಪ್ಪನ್ನು ಕಂಡುಕೊಳ್ಳುವಿರಿ. ನಿಮ್ಮ‌ ನಿಯಮವನ್ನು ಪಾಲಿಸಿದ್ದು ನಿಮಗೆ ಖುಷಿ ಕೊಡಬಹುದು. ಮಕ್ಕಳ ವಿದ್ಯಾಭ್ಯಾಸದಿಂದ ನಿಮಗೆ ಅಲ್ಪ ಪ್ರಮಾಣದಲ್ಲಿ ಖುಷಿ ಕಾಣಿಸುವುದು.

ಕುಂಭ ರಾಶಿ : ನಿಮ್ಮ ನಕಾರಾತ್ಮಕ ಆಲೋಚನೆಗಳು ಇತರರಿಗೂ ತಿಳಿದೀತು. ಇಂದು ನಿಮಗೆ ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಕಡಿಮೆ ಆಗುವುದು. ಬಂಧುಗಳ ವಿಚಾರದಲ್ಲಿ ನಿಮಗೆ ಸಂಪೂರ್ಣ ಮನಸ್ಥಿತಿಯು ಏಕರೂಪವಾಗಿ ಇರಲಾರದು. ಸಂಬಂಧಗಳನ್ನು ಸಡಿಲ‌ ಮಾಡಿಕೊಳ್ಳುವಿರಿ. ನಿಮ್ಮ ವರ್ತನೆಯಿಂದ ನಿಮ್ಮನ್ನು ನೋಡುವ ಕ್ರಮವು ಬದಲಾದೀತು.

ಮೀನ ರಾಶಿ : ನಿಮಗೆ ಯಾವುದೇ ಕಟ್ಟುಪಾಡುಗಳಲ್ಲಿ ಇರಲು ಮನಸ್ಸಾಗದು. ಇಂದು ನಿಮ್ಮ ಉದ್ಯೋಗದಲ್ಲಿ ಉತ್ತಮ ಪ್ರಗತಿಯು ಇರುವುದು. ಭವಿಷ್ಯದ ಬಗ್ಗೆ ನಿಮಗಿರುವ ಕಲ್ಪನೆಯು ಬದಲಾಗಬಹುದು. ‌ಹಣಕಾಸಿನ ವಿಚಾರದಲ್ಲಿ ನೀವು ಬಹಳ ಕಾಳಜಿಯನ್ನು ವಹಿಸಬೇಕಾಗುವುದು.ವಾಹನಕ್ಕಾಗಿ ಖರ್ಚು ಮಾಡುವ ಸ್ಥಿತಿಯು ಬರಬಹುದು. ಸಹಾಯವನ್ನು ಯಾರಾದರೂ ಕೇಳುವರು. ಒಂಟಿಯಾಗಿ ಇರಲು ನೀವು ಇಂದು ಹೆಚ್ಚು ಇಷ್ಟಪಡಬಹುದು.

Leave a Reply

Your email address will not be published. Required fields are marked *