ಉಜಿರೆ:(ಅ.5) ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಇದರ ರಾಷ್ಟ್ರೀಯ ಸೇವಾ ಯೋಜನೆಯ ಸುವರ್ಣ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಸುವರ್ಣ ಸಮ್ಮಿಲನ ಸಮಾರಂಭ ಕಾಲೇಜಿನ ಆವರಣದಲ್ಲಿರುವ ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆಯಿತು.
ಇದನ್ನೂ ಓದಿ: 🔶ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆಯ ರಾಷ್ಟ್ರೀಯ ಸೇವಾ ಯೋಜನೆಯ “ಸುವರ್ಣ ಸಮ್ಮಿಲನ”
ಈ ವೇಳೆ ಸೇವಾ ಪಥ ಎನ್ನುವ ಸ್ಮರಣ ಸಂಚಿಕೆಯನ್ನು ಡಿ.ಹರ್ಷೇಂದ್ರ ಕುಮಾರ್ ಅವರು ಬಿಡುಗಡೆಗೊಳಿಸಿದರು. ಈ ವೇಳೆ ಎನ್ ಎಸ್ ಎಸ್ ವತಿಯಿಂದ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ಹಾಗೂ ವಿವಿಧ ವೇಷಗಳ ಮೂಲಕ ಹಣ ಸಂಗ್ರಹಿಸಿ ಆ ಮೊತ್ತವನ್ನು ಅನಾರೋಗ್ಯ ಪೀಡಿತರಿಗೆ ನೀಡುವ ಸತ್ಕಾರ್ಯವನ್ನು ಮಾಡುತ್ತಿರುವ ರವಿ ಕಟಪಾಡಿ ಅವರಿಗೆ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬಳಿಕ ಮಾತನಾಡಿದ , ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಡಿ ಹರ್ಷೇಂದ್ರ ಕುಮಾರ್ ರವರು , ಎನ್ ಎಸ್ ಎಸ್ ಆರಂಭಿಸಿದ ಪ್ರಮುಖರಿಗೆ ಶರಣು ಎನ್ನುತ್ತೇನೆ ಯಾಕೆಂದರೆ , ಮಕ್ಕಳಿಗೆ ಎನ್ ಎಸ್ ಎಸ್ ಮೂಲಕ ಸಂಸ್ಕಾರ ಹೇಳಿ ಕೊಡುವ ಕೆಲಸವಾಗುತ್ತಾ ಇದೆ ಎಂದರು.
ನಾವು ವಿಚಾರವಂತರಾಗೋದರ ಜೊತೆಗೆ ನಾವು ಆಚಾರವಂತರಾಗಬೇಕು. ನಮ್ಮಲ್ಲಿ ನಾಗರಿಕ ಪ್ರಜ್ಜೆ ಮೂಡಿದರೆ ಉತ್ತಮ ಎಂದು ಹೇಳಿ ಶುಭ ಹಾರೈಸಿದರು. ಬಳಿಕ ಮಾತನಾಡಿದ ಎಸ್ ಡಿ ಎಂ ಕಾಲೇಜಿನ ಪ್ರಾಂಶುಪಾಲ ಕುಮಾರ್ ಹೆಗ್ಡೆ ರವರು , ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸವನ್ನು ಮಾಡುವುದು ಸೇವೆ ಅನ್ನುತ್ತಾರೆ.
ಅದು ಎನ್ ಎಸ್ ಎಸ್ ನಲ್ಲಿ ಇದೆ . ಎನ್ ಎಸ್ ಎಸ್ ನ ಪ್ರಮುಖ ಧ್ಯೇಯವೇ ವ್ಯಕ್ತಿತ್ವ ನಿರ್ಮಾಣವಾಗಿದೆ ಎಂದು ಹೇಳಿದರು. ನಮ್ಮ ಎನ್ ಎಸ್ ಎಸ್ ಸ್ವಯಂ ಸೇವಕರು ರಕ್ತದಾನ ಸೇರಿ , ದತ್ತು ಯೋಜನೆಗಳು ಸೇರಿ ಹಲವು ಮಹಾ ಕಾರ್ಯ ದಲ್ಲಿ ಭಾಗಿಯಾಗುತ್ತಿದ್ದಾರೆ. ಎನ್ ಎಸ್ ಎಸ್ ನ ಆಸ್ತಿ ಸ್ವಯಂ ಸೇವಕರಾಗಿದ್ದಾರೆ.
ಇದನ್ನು ತಿಳಿಸುವ ನಿಟ್ಟಿನಲ್ಲಿ ಇವತ್ತಿನ ಕಾರ್ಯಕ್ರಮ ನಡೆಯುತ್ತಿದೆ ಎಂದರು. ಇನ್ನು ,ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಷ್ಟ್ರೀಯ ಯೋಜನಾಧಿಕಾರಿ ಡಾ. ಪ್ರತಾಪ್ ಲಿಂಗಯ್ಯ ಮಾತನಾಡಿ , ನಾನು ಆರಂಭದಲ್ಲಿ ಎನ್ ಎಸ್ ಎಸ್ ಅಧಿಕಾರಿ ಆಗಿ ಆಯ್ಕೆಯಾದಾಗ , ಉಜಿರೆ ಎಸ್ ಡಿ ಎಂ ಕಾಲೇಜಿನ ಎನ್ ಎಸ್ ಎಸ್ ಘಟಕವನ್ನು ನೋಡಿ ಕಲಿಯೋಕೆ ಹೇಳಿದ್ದರು. ನಾನು ಈಗ ಇಲ್ಲಿನ 50 ವರ್ಷದ ಕಾರ್ಯಕ್ರಮಕ್ಕೆ ಬಂದಿರೋದು ಹೆಮ್ಮೆಯಾಗಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ 6.5 ಲಕ್ಷ ಸ್ವಯಂ ಸೇವಕರು ಇರುವ ಸಂಘ ಅಂದರೆ ಅದು ಎನ್ ಎಸ್ ಎಸ್ ಘಟಕ ಆಗಿದೆ. ಮೌಲ್ಯಯುತ ಶಿಕ್ಷಣವನ್ನು ಕಲಿಸುವ ಕೆಲಸವನ್ನು ಎನ್ ಎಸ್ ಎಸ್ ಮಾಡುತ್ತದೆ ಎಂದರು. ಈ ವೇಳೆ ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ , ಮಂಗಳೂರು ವಿಶ್ವವಿದ್ಯಾನಿಲಯದ ಎನ್ ಎಸ್ ಎಸ್ ಸಂಯೋಜಕರಾದ ಡಾ. ಶೇಷಪ್ಪ ಕೆ , ಎಸ್ ಡಿ ಎಂ ಎನ್ ಎಸ್ ಎಸ್ ಯೋಜನಾಧಿಕಾರಿ ಡಾ. ಮಹೇಶ್ ಶೆಟ್ಟಿ, ಶ್ರೀಮತಿ ದೀಪಾ ಆರ್ ಪಿ ಮತ್ತಿತರು ಉಪಸ್ಥಿತರಿದ್ದರು.