Wed. Apr 16th, 2025

Mangaluru:‌ ಯುವತಿಗೆ ವಿಡಿಯೋ ಕಾಲ್ ಮಾಡಿ ಕಿರುಕುಳ – ಯುವಕನಿಗೆ ಬಿತ್ತು ಧರ್ಮದೇಟು – ಹಲ್ಲೆ ನಡೆಸಿದ ವಿಡಿಯೋ ವೈರಲ್!!

ಮಂಗಳೂರು:(ಅ.6) ಯುವತಿಯೊಬ್ಬಳಿಗೆ ರಾತ್ರಿ ಕರೆ ವಿಡಿಯೋ ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಯುವಕನಿಗೆ ಮಹಿಳೆಯರು ಧರ್ಮದೇಟು ನೀಡಿದ ಘಟನೆ ಮಂಗಳೂರಿನ ಕೂಳೂರಿನಲ್ಲಿ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ⭕ಮಂಗಳೂರು : ಮಾಜಿ ಶಾಸಕ ಮೊಯಿದ್ದೀನ್ ಬಾವಾ ಸೋದರ ಮಮ್ತಾಜ್ ಅಲಿ ನಾಪತ್ತೆ!

ಏನಿದು ಘಟನೆ?

ಮುಸ್ಲಿಂ ಯುವಕ ಜನರಲ್ ಸ್ಟೋರ್ ಅಂಗಡಿಯವನಾಗಿದ್ದು ಅಲ್ಲಿಗೆ ಬರುತ್ತಿದ್ದ ಗ್ರಾಹಕಿಯೂ ಆಗಿರುವ ಯುವತಿಗೆ ತಡರಾತ್ರಿ ವಿಡಿಯೋ ಕರೆ ಮಾಡಿ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಇದನ್ನು ತಿಳಿದ ಮನೆಯ ಹಿರಿಯ ಮಹಿಳೆಯರಿಬ್ಬರು ಅಂಗಡಿಗೆ ಬಂದು ಕಪಾಳಕ್ಕೆ ಬಾರಿಸಿ ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬ ವ್ಯಕ್ತಿ ಮಹಿಳೆಯರಿಗೆ ಸಪೋರ್ಟ್ ಮಾಡಿದ್ದು ಯುವಕನನ್ನು ಪ್ರಶ್ನಿಸಿ ಅವಾಚ್ಯವಾಗಿ ನಿಂದಿಸುವುದು ವಿಡಿಯೋದಲ್ಲಿದೆ. ಅಲ್ಲದೆ, ಅಂಗಡಿಯ ಇತರರಲ್ಲಿ ಈ ರೀತಿ ಮಾಡಿದರೆ ಹೇಗೆ.. ಇವನ ಉದ್ದೇಶ ಏನೆಂದು ಪ್ರಶ್ನೆ ಮಾಡುತ್ತಾನೆ.

ಯುವಕನ ಮುಖಕ್ಕೆ ಬಾರಿಸಿ ಪ್ರಶ್ನಿಸುವುದನ್ನು ಮತ್ತೊಬ್ಬರು ವಿಡಿಯೋ ಮಾಡಿದ್ದು ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.. ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿಲ್ಲ

Mangaluru: Video call to women coming to general store – video viral

Leave a Reply

Your email address will not be published. Required fields are marked *