ಮೇಷ ರಾಶಿ: ಎಂತಹ ಎತ್ತರವನ್ನೇ ಏರಿದರೂ ನಿಮ್ಮ ಮೂಲ ಸ್ಥಾನದ ಬಗ್ಗೆ ಪ್ರೀತಿ ಇರಲಿ. ಹಣಕಾಸಿನ ವಿಷಯದಲ್ಲಿ ನೀವು ಎಷ್ಟೇ ಎಚ್ಚರದಿಂದ ಇದ್ದರೂ ವ್ಯಯವಾಗುವ ಸಾಧ್ಯತೆ ಹೆಚ್ಚು ಇರಲಿದೆ. ಆಸ್ತಿ ಹಂಚಿಕೆಯು ಇತ್ಯರ್ಥವಾಗಬಹುದು. ನಿಮ್ಮನ್ನು ಕೆಲವು ಸಂದರ್ಭಗಳು ಪರಿವರ್ತನೆ ಮಾಡಬಹುದು. ಉನ್ನತ ಅಧ್ಯಯನವನ್ನು ಬಯಸಿ ವಿದೇಶಕ್ಕೆ ತೆರಳುವ ಸಾಧ್ಯತೆ ಇರಲಿದೆ. ನಿಮ್ಮ ನಿರೀಕ್ಷೆಯ ಗುರಿಯನ್ನು ತಲುಪುವುದು ಕಷ್ಟವಾದೀತು. ನಿಮ್ಮ ಸಂಗಾತಿಯ ವಿಚಾರದಲ್ಲಿ ಪ್ರೀತಿಯು ಅಧಿಕವಾಗಬಹುದು.
ವೃಷಭ ರಾಶಿ: ನಿಮ್ಮ ಸಂಧಾನದ ಮಾತುಗಳು ನಿಷ್ಫಲವಾಗಬಹುದು. ಇಂದು ನಿಮಗೆ ಬೇರೆ ಬೇರೆ ಮೂಲಗಳಿಂದ ಸಂಪಾದನೆಗೆ ಅವಕಾಶಗಳು ಸಿಗಬಹುದು. ಸಾಲದ ಹಣವು ಇಂದು ನಿಮ್ಮ ಕೈಸೇರಬಹುದು. ವಿದೇಶೀ ವ್ಯವಹಾರದಲ್ಲಿ ನಿಮಗೆ ಲಾಭವು ಬರಬಹುದು. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವು ಇರುವುದು. ಇನ್ನೊಬ್ಬರ ಕ್ಷೇಮ ಸಮಾಚಾರವನ್ನು ಕೇಳುವಿರಿ.
ಮಿಥುನ ರಾಶಿ: ಅನಿರೀಕ್ಷಿತ ಕೊಡುಗೆಗಳಿಂದ ನಿಮಗೆ ಸಂತೋಷವಾಗಲಿದೆ. ಉದ್ಯೋಗದಲ್ಲಿ ಎಲ್ಲಿಗಾದರೂ ಪ್ರಯಾಣ ಮಾಡುವ ಅವಕಾಶ ಬರುವುದು. ಇಂದು ಸ್ತ್ರೀಯರು ನಾನಾ ತೊಂದರೆಗಳನ್ನು ಅನುಭವಿಸಬೇಕಾಗಬಹುದು. ಅನಾರೋಗ್ಯವು ನಿಮ್ಮ ಉತ್ಸಾಹವನ್ನು ಕಡಿಮೆ ಮಾಡಬಹುದು. ಯಾರದೋ ತಪ್ಪಿಗೆ ತಲೆಕೊಡುವ ಸಂದರ್ಭವು ಬರಬಹುದು.
ಕರ್ಕಾಟಕ ರಾಶಿ: ನಿಮ್ಮ ಕಾರ್ಯದ ಕೌಶಲ್ಯತೆಯು ಸಹೋದ್ಯೋಗಿಗಳಿಗೆ ಇಷ್ಟವಾಗುವುದು. ನಿಮಗೆ ಬೇರೆ ಕಡೆಗಳಿಂದ ಬರಬೇಕಾದ ಹಣವು ಆಕಸ್ಮಿಕವಾಗಿ ಬರಲಿದೆ. ಅನಗತ್ಯ ತಿರುಗಾಟದಿಂದ ಬೇಸರವಾಗಬಹುದು. ನಿಮ್ಮ ಕಾರ್ಯಗಳನ್ನು ಮುಂದೂಡುವಿರಿ. ಇಂದು ನೀವು ಮನೋನಿಯಂತ್ರಣದಲ್ಲಿ ಸೋಲುವಿರಿ. ಲಾಭವಿರುವ ಕೆಲಸಗಳನ್ನು ಮಾತ್ರ ಮಾಡಲು ಇಚ್ಛೆಯು ಇರಲಿದೆ.
ಸಿಂಹ ರಾಶಿ: ಅಪರಿಚಿತರ ಜೊತೆ ವಿವಾದವನ್ನು ಮಾಡುವಿರಿ. ಅವಿವಾಹಿತರಿಗೆ ವಿವಾಹದ ಚಿಂತೆ ಹೆಚ್ಚಾಗುವುದು. ಇಂದು ನೀವು ಪಿತ್ರಾರ್ಜಿತ ಆಸ್ತಿಯ ಬಗ್ಗೆ ಆಸಕ್ತಿ ಹೊಂದುವಿರಿ. ದ್ವೇಷವನ್ನು ದೀರ್ಘಕಾಲದವರೆಗೆ ಮುಂದೂಡುವ ಅವಶ್ಯಕತೆ ಇರದು. ಇಂದು ಬಹು ದಿನಗಳ ಚಿಂತಿತ ಕಾರ್ಯವು ಸಫಲವಾಗುವುದು. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಿದರೂ ವಿರೋಧ ಬರುವ ಸಾಧ್ಯತೆ ಇದೆ.
ಕನ್ಯಾ ರಾಶಿ: ವಿದ್ಯಾರ್ಥಿಗಳು ಕಲಿತದ್ದನ್ನೇ ಕಲಿಯಬೇಕಾದ ಅನಿವಾರ್ಯತೆ ಬಂದೀತು. ಇಂದು ನೀವು ಅನ್ಯಸ್ಥಳದಲ್ಲಿ ಆಕಸ್ಮಿಕವಾಗಿ ವಾಸಮಾಡಬೇಕಾಗುವುದು. ಭೂಮಿಯ ವ್ಯವಹಾರವನ್ನು ಸರಿಯಾದ ಕ್ರಮದಲ್ಲಿ ಮಾಡಿ. ನಕಾರಾತ್ಮಕ ಚಿಂತನೆಯನ್ನು ಹೆಚ್ಚಿಸಲು ಅಂತಹ ವಾತಾವರಣವು ಇರಲಿದೆ. ಉಳಿತಾಯವನ್ನು ನೀವು ಅಲ್ಪವಾದರೂ ಮಾಡಿ.
ತುಲಾ ರಾಶಿ: ನೀವು ಯಾವ ಮಾತನ್ನು ಒಮ್ಮೆಲೆ ನಂಬುವುದಿಲ್ಲ. ರಾಜಕೀಯವಾಗಿ ಇರುವವರು ಹಿನ್ನಡೆಯನ್ನು ಅನುಭವಿಸಬೇಕಾದೀತು. ಹೊಸ ತಂತ್ರವನ್ನು ನೀವು ರೂಪಿಸಿಕೊಳ್ಳುವಿರಿ. ನಿಮ್ಮೆದುರೇ ಮಾತು ಬದಲಿಸುವವರನ್ನು ನೀವು ಇಷ್ಟಪಡಲಾರಿರಿ. ಹಳೆಯ ನೋವುಗಳು ನಿಮ್ಮನ್ನು ಕಾಡಬಹುದು. ಶುಭ ಸುದ್ದಿ ನಿರೀಕ್ಷೆಯು ಇಂದು ಕೇವಲ ನಿರೀಕ್ಷೆಯಾಗಿಯೇ ಇರಲಿದೆ. ಉದ್ಯಮಿಗಳು ಲಾಭಕ್ಕಾಗಿ ಬಹಳ ಶ್ರಮಪಡಬೇಕಾಗುವುದು.
ವೃಶ್ಚಿಕ ರಾಶಿ: ನೀವು ಉದ್ಯೋಗವನ್ನು ಇನ್ನು ಮುಂದೆ ಗಂಭೀರವಾಗಿ ಸ್ವೀಕರಿಸುವಿರಿ. ಇಂದಿನ ವಿವಾದಗಳು ನಿಮ್ಮ ಮನಸ್ಸನ್ನು ಕೆಡಿಸಬಹುದು. ಅತಿಯಾದ ನಂಬಿಕೆಯಿಂದ ಕೆಲವು ಅಮೂಲ್ಯವಾದ ವಸ್ತುಗಳನ್ನು ಕಳೆದುಕೊಳ್ಳುವಿರಿ. ಮನೆಯಲ್ಲಿ ಅಶಾಂತಿಯ ವಾತಾವರಣವು ಇರಲಿದೆ. ನಿಮ್ಮ ವ್ಯವಹಾರಕ್ಕೆ ಯಾರಾದರೂ ಹಸ್ತಕ್ಷೇಪ ಮಾಡಲು ಬರಬಹುದು.
ಧನು ರಾಶಿ: ದೊಡ್ಡ ಸಂಭ್ರಮದಲ್ಲಿ ಸಣ್ಣ ತಪ್ಪುಗಳು ಆಗಬಹುದು. ಅದನ್ನು ಸರಿಮಾಡಿಕೊಳ್ಳಬೇಕಾಗುವುದು.ನಿಮ್ಮ ಸ್ಪಷ್ಟ ಮಾತಿಗೆ ಒಳ್ಳೆಯ ಉದ್ಯೋಗವು ಸಿಗಬಹುದು. ತಂದೆಯ ಮೇಲೆ ನಿಮಗೆ ಬೇಸರ ಉಂಟಾಗಬಹುದು. ಸಂಗಾತಿಯ ಮಾತುಗಳು ನಿಮಗೆ ನೋವನ್ನು ಕೊಡಬಹುದು. ಆಸ್ತಿಯ ವಿಚಾರದಲ್ಲಿ ನೀವು ನಿಮ್ಮರಿಗೆ ಸುಳ್ಳು ಹೇಳಿದ್ದು ಗೊತ್ತಾಗುವುದು.
ಮಕರ ರಾಶಿ: ಸ್ವಂತಿಕೆಯನ್ನು ನೀವು ಯಾವ ಸನ್ನಿವೇಶದಲ್ಲಿಯೂ ಬಿಟ್ಟುಕೊಡಲಾರಿರಿ. ಏನೋ ಮಾಡಲು ಹೋಗಿ ನೆಮ್ಮದಿಯನ್ನು ಕಳೆದುಕೊಳ್ಳುವಿರಿ. ಅಧಿಕ ಆಲೋಚನೆಯನ್ನು ಮಾಡುವುದರಿಂದ ಮನಸ್ಸು ದುರ್ಬಲವಾಗಬಹುದು. ನಿಮ್ಮ ಜೀವನ ಕ್ರಮವನ್ನು ಬದಲಿಸಿಕೊಳ್ಳಲು ಇಷ್ಟಪಡುವಿರಿ. ಸ್ವಂತ ಉದ್ಯೋಗದಲ್ಲಿ ನಿಮಗೆ ಕೆಲವು ಕಹಿ ವಿಚಾರವು ಗೊತ್ತಾಗಲಿದೆ. ನಿಮ್ಮ ಸಂಗಾತಿಯ ಜೊತೆ ಹೆಚ್ಚು ಸಮಯ ಕಳೆಯಲು ನಿಮಗೆ ಆಗದು.
ಕುಂಭ ರಾಶಿ: ನಿಮ್ಮ ಸಂಗವು ಚೆನ್ನಾಗಿದ್ದರೆ ಯಾರೂ ಏನೂ ಮಾಡಲಾರರು. ಇಂದು ನಿಮಗೆ ಆತ್ಮೀಯರ ಒಡನಾಟ ಅಧಿಕವಾಗಲಿದೆ. ಸಹೋದ್ಯೋಗಿಗಳನ್ನು ಕೆಲಸದಲ್ಲಿ ಸಹಾಯಕ್ಕಾಗಿ ಕೇಳುವಿರಿ. ನಿಮ್ಮದಾದ ಚಿಂತನೆಯನ್ನು ಬಿಟ್ಟು ಬೇರೆ ಕಡೆ ಯೋಚನೆಯನ್ನು ಮಾಡಲಾರಿರಿ. ಆನಂದದಿಂದ ಈ ದಿನವನ್ನು ಕಳೆಯಲು ಬಯಸುವಿರಿ. ಅನಿರೀಕ್ಷಿತ ಪ್ರಯಾಣವು ಬರಬಹುದು. ಕೊಡಬೇಕಾದ ಹಣವನ್ನು ಯಾವುದೇ ಕಾರಣಕ್ಕೂ ಮುಂದೂಡಲಾರಿರಿ.
ಮೀನ ರಾಶಿ: ವ್ಯವಹಾರದಲ್ಲಿನ ಸೂಕ್ಷ್ಮ ವಿಚಾರಗಳನ್ನು ವೇಗವಾಗಿ ಅರಿತುಕೊಳ್ಳಬೇಕು. ಇಂದು ಮನೆಯಲ್ಲಿ ನಿಮಗೆ ನಿರಾಸೆಯ ಅನುಭವ ಆಗಬಹುದು. ಆಲಸ್ಯದಿಂದ ನಿಮ್ಮ ಕೆಲಸದಲ್ಲಿ ಹಿನ್ನಡೆಯಾಗಬಹುದು. ಕೃಷಿಯಲ್ಲಿ ನೀವು ಹೆಚ್ಚಿನ ಪ್ರಗತಿಯನ್ನು ಸಾಧಿಸುವ ಮನಸ್ಸನ್ನು ಇಟ್ಟುಕೊಳ್ಳುವಿರಿ. ನೀವು ಇಂದು ಅತಿಥಿಯಾಗಿ ಕಾರ್ಯದಲ್ಲಿ ಭಾಗವಹಿಸುವಿರಿ. ಮನೆಯವರನ್ನು ನಿಷ್ಠುರ ಮಾಡಿಕೊಳ್ಳುವುದು ಬೇಡ. ನಿಮ್ಮ ನಡವಳಿಕೆಯನ್ನು ಬದಲಿಸಿಕೊಳ್ಳುವಿರಿ.