ಬೆಳ್ತಂಗಡಿ:(ಅ.7) ರಸ್ತೆ ಬದಿಯಲ್ಲಿ ಜಾನುವಾರುವನ್ನು ಮೇಯಲು ಕಟ್ಟಿ ಹಾಕಿದ್ದರು, ಹಗ್ಗವು ಅದರ ಕುತ್ತಿಗೆಗೆ ಸುತ್ತಿಕೊಂಡು ಜೀವನ್ಮರಣ ಹೋರಾಟದಲ್ಲಿದ್ದ ಹಸುವೊಂದನ್ನು ಗೃಹರಕ್ಷಕ ದಳದ ಸಿಬ್ಬಂದಿಯೊಬ್ಬರು ಸಕಾಲಿಕವಾಗಿ ಸ್ಪಂದಿಸಿ ರಕ್ಷಿಸಿದ್ದಾರೆ.
ಇದನ್ನೂ ಓದಿ: 🛑ಉಡುಪಿ : ಹಿಂದೂ ದೇವಾಲಯಗಳನ್ನು ಹಿಂದೂ ಸಮಾಜಕ್ಕೆ ಬಿಟ್ಟು ಕೊಡಿ – ಸರ್ಕಾರಕ್ಕೆ ಪೇಜಾವರ ಶ್ರೀ ಆಗ್ರಹ…!
ಬೆಳ್ತಂಗಡಿ ತಾಲೂಕಿನ ಪೆರಣಮಂಜ ಸ್ಥಳದ ರಸ್ತೆ ಬದಿಯಲ್ಲಿ ಯಾರೋ ಮೇಯಲು ಕಟ್ಟಿ ಹೋಗಿದ್ದ ಹಸುವಿನ ಕುತ್ತಿಗೆಗೆ ಹಾಕಲಾಗಿದ್ದ ಹಗ್ಗ ಬಿಗಿಯಾಗಿ ಜಾನುವಾರು ಅಂಗಾತ ಬಿದ್ದಿತ್ತು.
ಕೈಕಾಲುಗಳನ್ನು ಅಲ್ಲಾಡಿಸಿ ಮೇಲೇಳಲು ಭಾರೀ ಪ್ರಯತ್ನ ಪಟ್ಟು ಕೊನೆಗೆ ಬಸವಳಿದಿತ್ತು. ಇದೇ ರಸ್ತೆಯ ಮೂಲಕ ಹೋಗುತ್ತಿದ್ದ ಗೃಹರಕ್ಷಕ ದಳದ ಸಿಬ್ಬಂದಿ ಹಾಗೂ ಸರ್ವೋದಯ ಫ್ರೆಂಡ್ಸ್ ಕ್ಲಬ್ ಅಟ್ಲಾಜೆ ಇದರ ಸದಸ್ಯ ಪ್ರಮೋದ್ ಪೂಜಾರಿ ತೂಪಲ್ಕೆ- ಬಳೆಂಜ ಅವರು ಹಸುವಿನ ಪ್ರಾಣ ಉಳಿಸಿದ್ದಾರೆ.
ಇದೇ ವೇಳೆ ಬಂದ ಇನ್ನಿಬ್ಬರು ದ್ವಿಚಕ್ರ ವಾಹನ ಸವಾರರು ಅವರಿಗೆ ಸಾಥ್ ನೀಡಿದ್ದಾರೆ. ಪ್ರಮೋದ್ ಅವರ ಈ ಸೇವೆಯ ವೀಡಿಯೋ ಹರಿದಾಡುತ್ತಿದ್ದು ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.