Tue. Apr 8th, 2025

Kinnigoli: ಏಕಾಏಕಿ ಹೊತ್ತಿ ಉರಿದ ಕಾರು – ಪ್ರಯಾಣಿಕರು ಪಾರು

ಕಿನ್ನಿಗೋಳಿ :(ಅ.7) ಚಲಿಸುತ್ತಿದ್ದ ಕಾರು ಏಕಾಏಕಿ ಬೆಂಕಿ ಹತ್ತಿಕೊಂಡು ಉಳಿದ ಘಟನೆ ಮಂಗಳೂರು ಹೊರವಲಯದ ಕಿನ್ನಿಗೋಳಿ ಪೇಟೆಯಲ್ಲಿ ಸಂಭವಿಸಿದೆ. ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: ⭕ಪಾರಿವಾಳ ಬಳಸಿಕೊಂಡು ಕಳ್ಳತನ ಮಾಡುತ್ತಿದ್ದ ಖತರ್ನಾಕ್‌ ಕಳ್ಳ

ಕಾರೊಂದಕ್ಕೆ ಅಕಸ್ಮಾತ್ ಬೆಂಕಿ ತಗುಲಿದ ಘಟನೆ ಕಿನ್ನಿಗೋಳಿ ಮುಖ್ಯ ರಸ್ತೆಯ ಮಾರುಕಟ್ಟೆ‌ಮುಂಭಾಗ ನಡೆದಿದೆ.

ಕಿನ್ನಿಗೋಳಿ ಸಮೀಪದ ದಾಮಸ್ಕಟ್ಟೆ ನಿವಾಸಿ ಜಾಸ್ಮಿನ್ ಅವರು ಮತ್ತೊರ್ವ ಮಹಿಳೆ‌ ಮತ್ತು ಎರಡು‌ ಮಕ್ಕಳೊಂದಿಗೆ ಕಿನ್ನಿಗೋಳಿ‌ ಮಾರುಕಟ್ಟೆ ಮುಂಭಾಗ ಕಾರು ನಿಲ್ಲಿಸಿ ಹೋದ ಸಂದರ್ಭ ಕಾರಿನಲ್ಲಿ ಹೊಗೆ ಬರಲಾರಂಭಿಸಿದೆ.

ಕಾರಿನಲ್ಲಿದ್ದ ಮಹಿಳೆ ಮತ್ತು ಎರಡು ಮಕ್ಕಳು ಬೊಬ್ಬೆ ಹಾಕಿದ್ದು, ಕೂಡಲೇ ಸ್ಥಳೀಯರು ಸೇರಿ ಕಾರಿನಲ್ಲಿದ್ದವರನ್ನು ಅಪಾಯದಿಂದ ಪಾರು‌ ಮಾಡಿದ್ದಾರೆ.

ಸ್ಥಳೀಯ ಅಂಗಡಿ‌ ಮಾಲೀಕ ರಾಘವೇಂದ್ರ ಪ್ರಭು ಸ್ಥಳೀಯ ಪ್ರೆಟ್ರೋಲ್ ಪಂಪ್ ನಿಂದ ಅಗ್ನಿ ಶಮನದ ಸಾಧನದ ಮೂಲಕ, ಸ್ಥಳೀಯರೊಂದಿಗೆ ಸೇರಿ ಬೆಂಕಿ ನಂದಿಸಿದ್ದಾರೆ. ಕಾರು ಸಂಪೂರ್ಣ ಸುಟ್ಟು ಹೋಗಿದ್ದರಿಂದ ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿದೆ.

A car that burst into flames

Leave a Reply

Your email address will not be published. Required fields are marked *