Wed. Nov 20th, 2024

Bengaluru: ವೇದಿಕೆಯಲ್ಲಿ ದೈವಕ್ಕೆ ಅವಮಾನ – ದೈವದಂತೆ ವೇಷ ಧರಿಸಿ ನೃತ್ಯ.!!

ಬೆಂಗಳೂರು:(ಅ.8) ದೈವಕ್ಕೆ ಅಪಮಾನ‌‌ ಮಾಡಬೇಡಿ ಎಂದು ಎಷ್ಟೇ‌ ಗೋಗರೆದರೂ ಸಾಕಾಗುತ್ತಿಲ್ಲ. ಇತ್ತೀಚಿನ ಬೆಳವಣಿಗೆಗಳು ಕರಾವಳಿಗರನ್ನು ಆಕ್ರೋಶಿತರನ್ನಾಗಿ ಮಾಡಿಸಿದೆ. ಎಷ್ಟೇ ಜಾಗೃತಿ ಮೂಡಿಸಿದರೂ ತಪ್ಪುಗಳು ನಿರಂತರ ಆಗುತ್ತಿದೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಡೆದ ಘಟನೆ ತುಳುವರನ್ನು ಕೆರಳಿಸಿದೆ.

ಹಂದಿ ತಲೆಯ ಮಾದರಿ, ಕೈಯಲ್ಲಿ ಗಗ್ಗರ, ಪೂರ್ತಿ ಆರ್ಟಿಫೀಶಿಯಲ್ ಕಾಸ್ಟ್ಯೂಮ್ ಬಳಸಿ ಪಂಜುರ್ಲಿ ದೈವದ ಅಣುಕು ಮಾಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ.

ನಾಡಹಬ್ಬ ದಸರಾದ ನವರಾತ್ರಿ ಉತ್ಸವ ರಂಗೇರಿದ್ದು, ಹೊಸಕೋಟೆಯಲ್ಲೂ ಇದೇ ಮೊದಲ ಬಾರಿಗೆ ಕಮ್ಮ ಸಮುದಾಯದಿಂದ ನವರಾತ್ರಿ ಉತ್ಸವವನ್ನು ಹಮ್ಮಿಕೊಂಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಹೂಮಂಡಿ ಸರ್ಕಲ್ ಬಳಿ ಆಯೋಜಿಸಿದ್ದ, ಅದ್ದೂರಿ ನವರಾತ್ರಿ ಉತ್ಸವ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕ ಶರತ್ ಬಚ್ಚೇಗೌಡ ಹಾಗೂ ಮಾಜಿ ಸಂಸದ ಬಚ್ಚೇಗೌಡ ದೀಪ ಬೆಳಗುವ ಮೂಲಕ ಚಾಲನೆ ನೀಡಿದ್ದಾರೆ.

ಇನ್ನು ನವರಾತ್ರಿ ಉತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದಾರೆ.‌ ಕಲಾವಿದರು ವಿವಿಧ ಹಾಸ್ಯನಟರು ಪ್ರದರ್ಶನ ನೀಡುವ ಮೂಲಕ ನೆರೆದಿದ್ದ ಜನರನ್ನು ರಂಜಿಸಿದ್ದಾರೆ.

ಇದೇ ವೇಳೆ ಲಕ್ಷಾಂತರ ತುಳುವರ ನಂಬಿಕೆಗೆ ಮತ್ತೊಂದು ಪೆಟ್ಟು ಬಿದ್ದಿದೆ‌. ಕಾಂತಾರ ಹಾಡು ಹಾಗೂ ದೈವದ ನೃತ್ಯ ಮಾಡಿದ್ದು ಅಲ್ಲಿದ್ದವರಿಗೆ ಮನೋರಂಜನೆ ಕೊಟ್ಟರೂ ದೈವರಾಧಕರನ್ನು ಕೆರಳಿಸಿದೆ.

‌Insulting God on stage – Dressing up and dancing as God!!

Leave a Reply

Your email address will not be published. Required fields are marked *