ಕಾಶಿಪಟ್ಣ:(ಅ.8) ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಕಾಶಿಪಟ್ಣ 13 ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವವು ಅ.12 ರಂದು ಕಾಶಿಪಟ್ಣದ ಕೇಳ ಗರಡಿ ಮೈದಾನದಲ್ಲಿ ನಡೆಯಲಿದೆ.
ಇದನ್ನೂ ಓದಿ : ⭕ಪಡುಬಿದ್ರಿ : ಕಾರು ಚಾಲಕನ ನಿದ್ರೆ ಮಂಪರಿನಿಂದ ಸರಣಿ ಅಪಘಾತ
ಅ.12 ರಂದು ಬೆಳಿಗ್ಗೆ 7 ಗಂಟೆಯಿಂದ ದೇವತಾ ಪ್ರಾರ್ಥನೆ, ಪುಣ್ಯಾಹವಾಚನ, ಬೆಳಿಗ್ಗೆ 7: 45 ರಿಂದ ಶ್ರೀ ಶಾರದಾ ದೇವಿಯ ವಿಗ್ರಹ ಪ್ರತಿಷ್ಠೆ ನಡೆಯಲಿದೆ. ಬೆಳಿಗ್ಗೆ 9 ರಿಂದ ಗಣಹೋಮ, ಬೆಳಿಗ್ಗೆ 10 ಗಂಟೆಯಿಂದ ಶ್ರೀಪಂಚಲಿಂಗೇಶ್ವರ ಕುಣಿತ ಭಜನಾ ಮಂಡಳಿ ಕಾಶಿಪಟ್ಣ ಇವರಿಂದ ಕುಣಿತ ಭಜನೆ ನಡೆಯಲಿದೆ. ಬೆಳಿಗ್ಗೆ 11 ರಿಂದ ಶಾಲಾ ಕಾಲೇಜು ಮಕ್ಕಳ ಪುಸ್ತಕ ಪೂಜೆ, 11:30 ರಿಂದ ಪ್ರಸಿದ್ಧ ತಂಡದಿಂದ ಹಿಮ್ಮೇಳದೊಂದಿಗೆ ವೇದಿಕೆಯಲ್ಲಿ ಭಜನಾ ಕಾರ್ಯಕ್ರಮ, ಮಧ್ಯಾಹ್ನ 12:30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 1 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಅಪರಾಹ್ನ 2:30ರಿಂದ ಸ್ಥಳೀಯ ಮಕ್ಕಳಿಂದ ನೃತ್ಯ ಕಾರ್ಯಕ್ರಮ, 3:30 ರಿಂದ ಬಹುಮಾನ ವಿತರಣೆ ,ಅಪರಾಹ್ನ 4:30 ರಿಂದ ಶಾರದಾ ಆರ್ಟ್ಸ್ ಕಲಾವಿದರು (ರಿ.) ಮಂಜೇಶ್ವರ ಅಭಿನಯದ ಸಾಮಾಜಿಕ ಹಾಸ್ಯಮಯ ನಾಟಕ, ” ಕಥೆ ಎಡ್ಡೆಂಡು” ನಾಟಕ ಪ್ರದರ್ಶನ ನಡೆಯಲಿದೆ.
ಸಂಜೆ 6:30ಕ್ಕೆ ಸಂಧ್ಯಾಪೂಜೆ , ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ 7:00 ಗಂಟೆಗೆ ವೈಭವದ ವಿಗ್ರಹ ವಿಸರ್ಜನಾ ಶೋಭಾಯಾತ್ರೆಯು ಜರುಗಲಿದೆ. ಶೋಭಾಯಾತ್ರೆಯಲ್ಲಿ ಪ್ರಸಿದ್ಧ ಕುಣಿತ ಭಜನಾ ತಂಡಗಳಿಂದ ಕುಣಿತ ಭಜನಾ ಪ್ರದರ್ಶನ ನಡೆಯಲಿದೆ.
13th Annual Public Shree Sharada Mahotsav by the Public Shree Sharada Mahotsav Committee Kashipatna