Mon. Jan 12th, 2026

Curacao lisansı, dünya genelinde 160’tan fazla ülke tarafından tanınmakta olup, bahsegel giril bu lisansa sahip güvenilir markalardan biridir.

Yeni üyeler, hızlı ve kolay erişim sağlamak için bahsegel güncel giriş bağlantısını tercih ediyor.

Klasik masa oyunlarından slotlara kadar bahis siteleri çeşitliliği sunuluyor.

Oyuncular hızlıca işlem yapmak için Bahsegel giriş bağlantısını takip ediyor.

ಮೇಷ ರಾಶಿ : ಇಂದು ನಿಮ್ಮ‌ ಜೊತೆಗಾರರ ವರ್ತನೆಯ ಮೇಲೆ ಅನುಮಾನವು ಬರಬಹುದು. ತಂದೆಯಿಂದ ನಿಮಗೆ ಆರ್ಥಿಕ ಸಹಾಯವಾಗಲಿದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಂಡಲ್ಲಿ ಕೆಲಸದಲ್ಲಿ ಪ್ರಗತಿ ಇರಲಿದೆ. ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಕೆಲವು ಮಾರ್ಪಾಡುಗಳು ಆಗಬಹುದು. ಮಕ್ಕಳಿಂದ ಆಗುವ ಅಸಮಾಧಾನವನ್ನು ನೀವು ಸಹಿಸಿಕೊಳ್ಳಲಾರಿರಿ.

ವೃಷಭ ರಾಶಿ : ಗಳಿಕೆಗಿಂತ ಕಳೆದುಕೊಂಡಿದ್ದು ಅಧಿಕವಾಗಿ ಕಾಣಿಸುವುದು. ನಿಮಗೆ ಬೇಕಾದಷ್ಟು ಸೌಲಭ್ಯಗಳಿದ್ದರೂ ಕೊರತೆ ಎನಿಸಬಹುದು. ಬಹಳ ದಿನಗಳ ಅನಂತರ ದೂರಪ್ರಯಾಣವನ್ನು ಮಾಡಲು ಹೊರಟಿರುವಿರಿ. ಪುಣ್ಯಸ್ಥಳಗಳ ದರ್ಶನವನ್ನು ಮಾಡಲು ಇಚ್ಛಿಸುವಿರಿ. ಸಾಮಾಜಿಕ ಕಾರ್ಯಗಳು ನಿಮಗೆ ಯಶಸ್ಸನ್ನು ತಂದುಕೊಡಲಿವೆ.

ಮಿಥುನ ರಾಶಿ : ಎಲ್ಲದರಲ್ಲಿಯೂ ಋಣಾತ್ಮಕತೆಯನ್ನು ನೋಡಿದರೆ ಯಶಸ್ಸು ನಿಮಗೆ ಸಿಗುವುದು ಕಷ್ಟವಾಗಬಹುದು. ಪ್ರಭಾವಿಗಳ ಜೊತೆ ನೀವು ಪ್ರಯಾಣ ಮಾಡುವಿರಿ. ಉದ್ಯೋಗದಲ್ಲಿ ಮನಸ್ತಾಪ ಬಂದು ನೀವು ಆ ಉದ್ಯೋಗವನ್ನು ಬಿಡುವಿರಿ. ಮೇಲಧಿಕಾರಿಗಳ ಜೊತೆ ವಾಗ್ವಾದ ಬೇಡ. ಎಷ್ಟೋ ಕೆಲಸಗಳು ನಿಮ್ಮ ಬಳಿಯೇ ಆಗದೇ ಇರುತ್ತವೆ. ನೀವು ಹೇಳಬೇಕಾದ ವಿಷಯಗಳನ್ನು ಇನ್ನೊಬ್ಬರಿಗೆ ಹೇಳುವಿರಿ. ಮರೆವು ನಿಮಗೆ ಬಹಳ ತೊಂದರೆಯನ್ನು ಕೊಟ್ಟೀತು.

ಕರ್ಕಾಟಕ ರಾಶಿ : ನಿಮ್ಮ ಇಂದಿನ ಮಧ್ಯ ಯಾವ ಪಕ್ಷಪಾತವನ್ನೂ ತೋರಿಸದು. ಸ್ವಂತ ಉದ್ಯೋಗಸ್ಥರಿಗೆ ಲಾಭವಾಗುವುದು. ಸರ್ಕಾರದ ಅಧಿಕಾರಿಗಳು ನಿಮ್ಮನ್ನು ಪೀಡಿಸಬಹುದು. ಸ್ವತಂತ್ರವಾಗಿದ್ದರೂ ಏನನ್ನಾದರೂ ಕಳೆದುಕೊಳ್ಳುತ್ತೇನೆ ಎಂಬ‌ ಭಯವು ಇರುವುದು.

ಸಿಂಹ ರಾಶಿ : ಪರೋಪಕಾರವು ಉತ್ತಮವಾದ ಗುಣವಾದರೂ ಅದು ವಿಷಕಾರಿ ಸರ್ಪದಂತೆ ಆಗಬಹುದು. ಬಹು ದಿನಗಳ ವಿವಾಹದ ಚಿಂತೆಯು ನಿಮ್ಮಿಂದ ದೂರಾಗುವುದು. ಲಾಭವು ಇಲ್ಲದ ಪ್ರಯಾಣವು ನಿಮಗೆ ಬೇಸರವನ್ನು ತರಿಸಬಹುದು. ನಿಮಗೆ ಪ್ರಶಂಸೆಯ ಜೊತೆ ಹೆಚ್ಚಿನ ಜವಾಬ್ದಾರಿಗಳೂ ಬರಬಹುದು. ಮಕ್ಕಳಿಂದ ನಿಮಗೆ ಪ್ರೀತಿ ಸಿಗಬಹುದು.

ಕನ್ಯಾ ರಾಶಿ : ನಿಮ್ಮವರ ಮೇಲೆ ನಿಮಗೆ ಸಂದೇಹವು ಆರಂಭವಾಗುವುದು. ಇಂದು ನಿಮ್ಮ‌ ನಿರೀಕ್ಷಿತ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಅಧಿಕಾರಿಗಳು ಹೆಚ್ಚು ಒತ್ತಡದಿಂದ ಇರುವಿರಿ. ಮಾತನಾಡುವಾಗ ಹೆಚ್ಚು ಸ್ಪಷ್ಟತೆ ಇರಲಿ. ಹಣಕಾಸಿನ ಲೆಕ್ಕಾಚಾರದಲ್ಲಿ ನಿಮಗೆ ಕೆಲವು ಗೊಂದಲಗಳು ಬರಬಹುದು.

ತುಲಾ ರಾಶಿ : ಮನೆಯಲ್ಲಿ ಯಾರಾದರೂ ನಿಮ್ಮನ್ನೇ ಗುರಿಯಾಗಿಸಿಕೊಂಡು ಮಾತನಾಡಬಹುದು. ತುರ್ತಾಗಿ ಸ್ಥಳ ಬದಲಾವಣೆ ಮಾಡಬೇಕಾಗಬಹುದು. ಬಹು ದಿನಗಳಿಂದ ಇದ್ದ ನಿರುದ್ಯೋಗ ಸಮಸ್ಯೆಯು ಇಂದು ದೂರಾಗಿ, ಬೇಸರವೂ ಕಳೆಯಬಹುದು. ಭೂಮಿಯು ಲಾಭವಾಗುವಂತೆ ಇದ್ದರೂ ಕೈ ತಪ್ಪಿ ಹೋಗಬಹುದು. ನಿಮ್ಮ ಸ್ವಭಾವವು ಇತರರಿಗೆ ಕಿರಿಕಿರಿ ತರಿಸಬಹುದು.

ವೃಶ್ಚಿಕ ರಾಶಿ : ವಿದ್ಯಾರ್ಥಿಗಳು ಅಭ್ಯಾಸದ ವಿಷಯದಲ್ಲಿ ಮೈಮರೆಯಬಹುದು. ಇಂದು ನೀವು ಮಾಡುವ ಕಾರ್ಯದಲ್ಲಿ ವಿಳಂಬವು ಕಾಣಿಸುವುದು. ಅಸೂಯೆಯು ನಿಮ್ಮ ಇತರ ಕೆಲಸಗಳನ್ನು ನಷ್ಟ ಮಾಡಿಸುವುದು. ಸ್ನೇಹಿತರ ಸಹಾಯವು ನಿಮಗೆ ಬಲವನ್ನು ತಂದುಕೊಡುವುದು. ಪ್ರಭಾವೀ ವ್ಯಕ್ತಿಗಳು ನಿಮ್ಮನ್ನು ಆಕರ್ಷಿಸಬಹುದು. ದಾಂಪತ್ಯದಲ್ಲಿ ಮಧುರ ಕ್ಷಣಗಳು ಇರಲಿವೆ.

ಧನು ರಾಶಿ : ಅಧ್ಯಾತ್ಮದ ಕಡೆಗೆ ನಿಮ್ಮ ಮನಸ್ಸು ಹರಿದರೂ ಸರಿಯಾದ ಮಾರ್ಗದರ್ಶನವೂ ಬೇಕು. ದಾಂಪತ್ಯದಲ್ಲಿ ನಂಬಿಕೆ ದೂರಾಗಬಹುದು. ನಾನಾ ಮಾರ್ಗಗಳಿಂದ ಹಣವು ಬರಬಹುದು. ‌ಉತ್ಸಾಹಕ್ಕೆ ಭಂಗ ಬರುವ ಕಡೆ ನೀವು ಇರಲಾರಿರಿ. ನಿಮ್ಮ ಉದ್ಯೋಗವು ನಿಮಗೆ ಸಾಕೆನಿಸಬಹುದು. ಪ್ರಸಿದ್ಧಿಗಾಗಿ ನೀವು ಹಂಬಲಿಸುವಿರಿ. ನಿಮ್ಮ ಕೆಲಸವನ್ನು ಬಿಟ್ಟು ಇತರರ ಕೆಲಸದ ಕಡೆ ಗಮನ ಹರಿಸುವಿರಿ.

ಮಕರ ರಾಶಿ : ಮನೆಯಲ್ಲಿ ನಡೆಯುವ ಮಂಗಳ ಕಾರ್ಯದಲ್ಲಿ ಪಾಲ್ಗೊಳ್ಳುವಿರಿ. ಸ್ವಪ್ರತಿಷ್ಠೆಯಿಂದ ಎಲ್ಲವನ್ನೂ ಹಾಳು ಮಾಡಿಕೊಳ್ಳುವಿರಿ. ಹಿರಿಯರೆದುರು ತಗ್ಗಿ ಬಗ್ಗಿ ನಡೆಯುವುದು ಒಳ್ಳೆಯದು. ದೇವತಾಕಾರ್ಯಗಳಲ್ಲಿ ಆಸಕ್ತಿಯು ಇದ್ದರೂ ಕಾರಣಾಂತರಗಳಿಂದ ಅದು ಸಾಧ್ಯವಾಗದು.

ಕುಂಭ ರಾಶಿ : ನಿಮಗೆ ಇಂದು ದೇಹಾರೋಗ್ಯವು ಕ್ಷೀಣಿಸಿದಂತೆ ಭಾಸವಾಗುವುದು. ಕೋಪದಲ್ಲಿ ಏನನ್ನಾದರೂ ಹೇಳಬಹುದು.‌ ಜಾಗ್ರತೆ. ದೂರದೃಷ್ಟಿಯಿಂದ ಮುಂಬರುವ ತೊಂದರೆಯನ್ನು ತಡೆಗಟ್ಟುವಿರಿ. ಭವಿಷ್ಯದ ಬಗ್ಗೆ ಅಸ್ಪಷ್ಟವಾದ ಚಿಂತೆಯು ಇರಲಿದೆ. ಯಂತ್ರಗಳ ವ್ಯಾಪಾರಿಗಳಿಗೆ ಲಾಭದಾಯಕ ದಿನ ಇಂದು‌. ನಿಮ್ಮ ಅಸತ್ಯದ ಮಾತುಗಳು ಯಾರಿಗೂ ಸಂದೇಶವನ್ನು ಉಂಟುಮಾಡದು.

ಮೀನ ರಾಶಿ : ನಿಮ್ಮ ದೌರ್ಬಲ್ಯವೇ ಶಕ್ತಿಯ ಕೇಂದ್ರವೂ ಆಗಬಹುದು. ರಾಜಕೀಯ ಕ್ಷೇತ್ರದಲ್ಲಿ ಕಾದಾಟ, ವಾಗ್ವಾದಗಳು ಅಧಿಕವಾಗಿ ಇರಲಿವೆ. ಬೇಸರದಿಂದ ಹೊರಬರಲು ನಿಮಗೆ ಕಷ್ಟವಾದೀತು. ನಕಾರಾತ್ಮಕ ಆಲೋಚನೆಗಳೇ ನಿಮ್ಮ ಮನಸ್ಸಿನಲ್ಲಿ ಓಡಾಡುತ್ತವೆ. ಒತ್ತಡದಿಂದ ಕೆಲಸವನ್ನು ಮಾಡಬೇಕಾಗಬಹುದು. ಅಧಿಕಾರಿಗಳಿಂದ ಮೆಚ್ಚುಗೆ ಗಳಿಸುವ ಸಾಧ್ಯತೆ ಇದೆ. ಸ್ತ್ರೀಯರ ಸಹಾಯದಿಂದ ಜವಾಬ್ದಾರಿಯನ್ನು ಮುಗಿಸುವಿರಿ. ಮಕ್ಕಳ ಬಗ್ಗೆ ಹೆಚ್ಚು ಗಮನ ಅಗತ್ಯ.

Leave a Reply

Your email address will not be published. Required fields are marked *