ಮಂಗಳೂರು:(ಅ.9) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಚಾಲಕನ ಓವರ್ ಟೇಕ್ ಅಟ್ಟಹಾಸಕ್ಕೆ ಪೋಲಿಸರು ಬ್ರೇಕ್ ಹಾಕಿದ್ದಾರೆ. ಹೌದು, ಮಂಗಳೂರು -ಮೂಡಬಿದ್ರೆ ರೂಟ್ ನಲ್ಲಿ ಸಂಚಾರಿಸುತ್ತಿದ್ದ ಜೈನ್ ಟ್ರಾವೆಲ್ಸ್ ಬಸ್ಸನ್ನು ಮೂಡಬಿದ್ರೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: 🟣ಉಜಿರೆ ಬೆನಕ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ತಜ್ಞ ವೈದ್ಯರ ಸೇವೆ ಆರಂಭ
ಏನಿದು ಘಟನೆ?
ಮಂಗಳೂರು -ಮೂಡಬಿದ್ರೆ ರೂಟ್ ನಲ್ಲಿ ಸಂಚಾರಿಸುತ್ತಿದ್ದ ಜೈನ್ ಟ್ರಾವೆಲ್ಸ್ ಖಾಸಗಿ ಬಸ್ ನ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡುತ್ತಿದ್ದನು. ಪ್ರಯಾಣಿಕರ ಸುರಕ್ಷತೆಯನ್ನು ಲೆಕ್ಕಿಸದೇ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿದ್ದಾನೆ. ಪ್ರಾಣ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಕರು ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದರು.
ಓವರ್ ಟೇಕ್ ಮಾಡಲು ಏಕರೂಪದ ರಸ್ತೆಯಲ್ಲಿ ಚಲಾಯಿಸಿ ಚಾಲಕ ಸರ್ಕಸ್ ಮಾಡುತ್ತಿದ್ದನು. ಎದೆ ಝಲ್ಲೆನಿಸುವಂತಹ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಓವರ್ ಟೇಕ್ ಮಾಡುವ ಭರದಲ್ಲಿ ಅಪಾಯಕಾರಿ ಚಾಲನೆ ಹಾಗೂ ಶಾಲಾ ಮಕ್ಕಳ ರಿಕ್ಷಾಕ್ಕೆ ಡಿಕ್ಕಿ ಸೇರಿದಂತೆ ಹಲವು ಅಪಘಾತಗಳಿಗೆ ಖಾಸಗಿ ಬಸ್ ಕಾರಣವಾಗಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಖಾಸಗಿ ಬಸ್ ಗುರಿಯಾಗಿತ್ತು. ಸಾರ್ವಜನಿಕರ ಆಕ್ರೋಶದ ಹಿನ್ನಲೆ ಮೂಡಬಿದ್ರೆ ಪೊಲೀಸರು ಬಸ್ಸನ್ನು ವಶಕ್ಕೆ ಪಡೆದುಕೊಂಡಿದ್ದಾರೆ.