Tue. Apr 8th, 2025

Mangaluru:(ಅ.9) ಮುಮ್ತಾಜ್‌ ಆಲಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರು ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದು, ಈ ಪ್ರಕರಣದ ಎ2 ಆರೋಪಿ ಅಬ್ದುಲ್‌ ಸತ್ತಾರ್‌ನನ್ನು ವಶಕ್ಕೆ ಪಡೆದಿದ್ದಾರೆ.

ಎ3 ಆರೋಪಿ ಶಾಫಿ, ಎ4 ಮುಸ್ತಾಫನನ್ನು ಕೂಡಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಈ ಪ್ರಕರಣದ ಕಿಂಗ್‌ಪಿನ್‌, ಮಾಸ್ಟರ್‌ಮೈಂಡ್‌ ಆಗಿದ್ದ ಆರೋಪಿ ಅಬ್ದುಲ್‌ ಸತ್ತಾರ್‌ನನ್ನು ಬೆಳಗಾವಿ ಮಹಾರಾಷ್ಟ್ರ ಗಡಿಯಲ್ಲಿ ಮಂಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈತ ಮಹಾರಾಷ್ಟ್ರಕ್ಕೆ ಪರಾರಿಯಾಗಲು ಯತ್ನ ಮಾಡಿದ್ದು, ಪೊಲೀಸರು ಬಂಧನ ಮಾಡಿದ್ದಾರೆ.ಈ ಹಿಂದೆ ಕೂಡಾ ಆರೋಪಿ ಅಬ್ದುಲ್‌ ಸತ್ತಾರ್‌ ಹಲವರನ್ನು ಹನಿಟ್ರ್ಯಾಪ್‌ ಮೂಲಕ ಸುಲಿಗೆ ಮಾಡಿರುವ ಕುರಿತು ವರದಿಯಾಗಿದೆ.

ಈಗಾಗಲೇ ಈ ಪ್ರಕರಣದ ಎ1 ಆರೋಪಿ ಆಯಿಷಾ@ರೆಹಮತ್‌ ಹಾಗೂ ಆಕೆಯ ಪತಿ ಸೋಹೆಬ್‌ ಮತ್ತು ಎ6 ಆರೋಪಿ ಸಿರಾಜ್‌ರನ್ನು ಪೊಲೀಸರು ನಿನ್ನೆ ಬಂಧನ ಮಾಡಿದ್ದಾರೆ.

Leave a Reply

Your email address will not be published. Required fields are marked *