Wed. Nov 20th, 2024

Ujire: ಉಜಿರೆ‌ ಬೆನಕ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ತಜ್ಞ ವೈದ್ಯರ ಸೇವೆ ಆರಂಭ

ಉಜಿರೆ:(ಅ.9) ಗಾಯಗಳು ಹಾಗೂ ಅನಾರೋಗ್ಯದ ರೋಗಿಗಳಿಗೆ ತಕ್ಷಣದ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ. ತುರ್ತು ಚಿಕಿತ್ಸೆ ಅಥವಾ ಎಮರ್ಜೆನ್ಸಿ ಮೆಡಿಸಿನ್‌ ಕ್ಷೇತ್ರದ ಪರಿಣಿತರು ಇಂತಹ ಚಿಕಿತ್ಸೆ ನೀಡುತ್ತಾರೆ.ಈ ವಿಶೇಷ ಸೇವೆ ಇಂದಿನಿಂದ ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ಲಭ್ಯವಿದೆ ಎಂದು ಉಜಿರೆಯ ಬೆನಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಗೋಪಾಲಕೃಷ್ಣ ಅವರು ತಿಳಿಸಿದರು.

ಇದನ್ನೂ ಓದಿ: ⭕ದಿಡುಪೆಯಲ್ಲಿ ಮತ್ತೆ ಮಹಾ ಪ್ರವಾಹ…!

ಉಜಿರೆಯ ಬೆನಕ ಆಸ್ಪತ್ರೆಯಲ್ಲಿ‌ ನಡೆದ ಸರಳ ಕಾರ್ಯಕ್ರಮದಲ್ಲಿ ಡಾ.ಗೋಪಾಲಕೃಷ್ಣ ಅವರು ತುರ್ತು ಚಿಕಿತ್ಸಾ ತಜ್ಞ ಡಾ. ಆದಿತ್ಯ ರಾವ್ ಅವರನ್ನು ಸ್ವಾಗತಿಸುತ್ತಾ ಮಾತನಾಡುತ್ತಿದ್ದರು.

ತುರ್ತು ಚಿಕಿತ್ಸೆಯ ಪರಿಣಿತ ವೈದ್ಯರು ಎಲ್ಲಾ ವಯಸ್ಸಿನ ರೋಗಿಗಳಿಗೆ ಚಿಕಿತ್ಸೆ ಮತ್ತು ಅಗತ್ಯ ಆರೈಕೆಯನ್ನು ನೀಡುತ್ತಾರೆ. ತುರ್ತುಸ್ಥಿತಿಯನ್ನು ದಾಟಿದ ನಂತರ ರೋಗಿಗಳಿಗೆ ಮಧ್ಯಂತರ ಅನುಸರಣಾ ಆರೈಕೆಯು ಸಹ ಒಳಗೊಂಡಿರುತ್ತದೆ ಎಂದು ತಿಳಿಸಿದರು. 

ತುರ್ತು ಚಿಕಿತ್ಸೆ ವೈದ್ಯರು ಭರವಸೆ ಮತ್ತು ಬೆಂಬಲದ ದಾರಿದೀಪಗಳಾಗಿ ಸೇವೆ ಸಲ್ಲಿಸುತ್ತಾರೆ. ಅವರ ಲಭ್ಯತೆ, ಮತ್ತು ಸುಧಾರಿತ ರೋಗನಿರ್ಣಯದ ಸಾಮರ್ಥ್ಯಗಳು ಸಕಾಲಿಕ ಮತ್ತು ಜೀವ ಸಂರಕ್ಷಣೆಯಲ್ಲಿ  ಪ್ರಮುಖ ಪಾತ್ರವನ್ನು ವಹಿಸುತ್ತವೆ. ಬೆಳ್ತಂಗಡಿ ತಾಲೂಕಿನಲ್ಲಿ ಮೊತ್ತ‌ಮೊದಲ ಬಾರಿಗೆ ಈ ವಿಶಿಷ್ಟ ಸೇವೆಯನ್ನು ಬೆನಕ ಆಸ್ಪತ್ರೆ ಒದಗಿಸಲಿದೆ ಎಂದು ತಿಳಿಸಿದರು.

ಗುಣಮಟ್ಟದ ತುರ್ತು ವೈದ್ಯಕೀಯ ಆರೈಕೆ ರಸ್ತೆ ಆಪಘಾತ, ಸೆಪ್ಸಿಸ್, ಪಾರ್ಶ್ವವಾಯು, ಹೃದಯಾಘಾತ, ಗರ್ಭಾವಸ್ಥೆಯ ಮತ್ತು ಹೆರಿಗೆಯ ತೀವ್ರ ತೊಡಕುಗಳು ಹಾಗೂ ಅನೇಕ ಬಾಲ್ಯದ ಸೋಂಕುಗಳ ವಿನಾಶಕಾರಿ ಪರಿಣಾಮಗಳನ್ನು ತಡೆಯುತ್ತದೆ ಅಥವಾ ಕಡಿಮೆ ಮಾಡುತ್ತದೆ ಎಂದು ತುರ್ತು ಚಿಕಿತ್ಸಾ ತಜ್ಞ ಡಾ. ಆದಿತ್ಯ ರಾವ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ.ಭಾರತಿ ಜಿ.ಕೆ, ಡಾ. ಅಂಕಿತಾ ಜಿ.ಭಟ್, ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಜಿ.ಭಟ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *