Tue. Apr 8th, 2025

Viral News : ಸೌತೆಕಾಯಿ ಕಾಯಲು ಸ್ಯಾಂಡಲ್‌ ವುಡ್‌ ನಟಿ – ಮಣಿಯರನ್ನೇ ಕಾವಲಿರಿಸಿದ ರೈತ – ಆತನ ಡಿಫರೆಂಟ್‌ ಐಡಿಯಾಗೆ ಇವರೇ ಇನ್ಸಿಪಿರೇಶನ್ ಅಂತೇ!!

ರಾಮನಗರ :(ಅ.9) ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಗರಕಹಳ್ಳಿ ರೈತ ಇಡೀ ಸ್ಯಾಂಡಲ್‌ವುಡ್ ನಟಿಮಣಿಯರನ್ನೇ ತನ್ನ ಹೊಲದಲ್ಲಿ ನಿಲ್ಲಿಸಿದ್ದಾನೆ. ಸೌತೆಕಾಯಿ ಬೆಳೆ ಮೇಲೆ ದೃಷ್ಟಿ ಬೀಳದಂತೆ ನಟಿಮಣಿಯರ ಸುಂದರವಾದ ಭಾವಚಿತ್ರಗಳನ್ನು ಹೊಲದಲ್ಲಿ ಅಳವಡಿಸುವ ಮೂಲಕ ತನ್ನ ಬೆಳೆ ಕಾಪಾಡಿಕೊಳ್ಳಲು ಮುಂದಾಗಿದ್ದಾನೆ.

ಇದನ್ನೂ ಓದಿ: 🟣ರೌಡಿ ಬೇಬಿ ಸತ್ಯ ತುಳುನಾಡಿನ ಸೊಸೆ!!


ಸ್ಯಾಂಡಲ್‌ವುಡ್ ನಟಿಯರಾದ ರಮ್ಯ, ರಾಗಿಣಿ ದ್ವಿವೇದಿ, ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಸೋನಾಲ್ ಸೇರಿ ಇನ್ನು ಇಡೀ ಸ್ಯಾಂಡಲ್‌ವುಡ್ ನಟಿಯರ ಭಾವಚಿತ್ರವನ್ನು ಪ್ಲೆಕ್ಸ್ ಮಾದರಿಯಲ್ಲಿ ಹಾಕಿದ್ದಾನೆ. ರೈತ ಮಾಡಿದ ಈ ಡಿಫ್ರೆಂಟ್ ಐಡಿಯಾ ಇಡೀ ಊರಿನವರಿಗೆ ಹೊಸದೆನಿಸಿದೆ.


ಎಲ್ಲಾ ರೈತರು ತಮ್ಮ ತಮ್ಮ ಬೆಳೆಗೆ ದೃಷ್ಟಿ ತಾಕದಂತೆ ಮಾಡಲು ಇಂಥದ್ದೇ ಐಡಿಯಾ ಮಾಡಿದರೆ ಹೇಗಿರುತ್ತೆ ಅಂತ ಚರ್ಚೆ ಶುರು ಮಾಡಿದ್ದಾರೆ.


ಹೊಲದಲ್ಲಿ ನಟಿಮಣಿಯರ ಮುಗುಳುನಗುವ ಸುಂದರ ಫೋಟೋಗಳನ್ನು ಅಳವಡಿಸುವ ಮೂಲಕ ದಾರಿ ಮಧ್ಯೆ ಹೋಗುವವರ ದೃಷ್ಟಿಯನ್ನು ಹಿರೋಯಿನ್ ಗಳ ಮೇಲೆ ಬೀಳುವಂತೆ ಮಾಡಿ ಬೆಳೆ ಮೇಲೆ ದೃಷ್ಟಿ ತಾಕದೇ ಇರಲಿ ಎನ್ನುವುದು ಈ ರೈತನ ಐಡಿಯಾ.

Leave a Reply

Your email address will not be published. Required fields are marked *