Mon. Jan 12th, 2026

Curacao lisansı, dünya genelinde 160’tan fazla ülke tarafından tanınmakta olup, bahsegel giril bu lisansa sahip güvenilir markalardan biridir.

Yeni üyeler, hızlı ve kolay erişim sağlamak için bahsegel güncel giriş bağlantısını tercih ediyor.

Klasik masa oyunlarından slotlara kadar bahis siteleri çeşitliliği sunuluyor.

ಮೇಷ ರಾಶಿ : ವಿದೇಶದಲ್ಲಿ ಇರುವ ವಿದ್ಯಾರ್ಥಿಗಳು ತಮ್ಮ ಕ್ಷೇತ್ರದಲ್ಲಿ ಯಶಸ್ಸನ್ನು ಗಳಿಸುವರು. ಆದರೆ ಅಲ್ಲಿಯವರೆಗೆ ತಾಳ್ಮೆಯನ್ನು ಇಟ್ಟುಕೊಳ್ಳುವುದು ಮುಖ್ಯವಾಗಿ ಇರಲಿ. ಆಸ್ತಿಯ ತಕರಾರುಗಳು ಇತ್ಯರ್ಥವಾಗುವ ಸಮಯ ಹತ್ತಿರ ಬರುತ್ತಿದೆ. ಶಾಂತತೆಯನ್ನು ಕಾಯ್ದುಕೊಳ್ಳಿರಿ. ನಿಮಗೆ ದಕ್ಕಬೇಕಾದ ಪ್ರಮಾಣಕ್ಕಿಂತಲೂ ಹೆಚ್ಚಾಗಿ ದೊರೆಯುವ ಸಾಧ್ಯತೆ ಇರುತ್ತದೆ. ಸ್ವಂತ ವಿಚಾರದಲ್ಲಿ ಮಧ್ಯಪ್ರವೇಶವನ್ನು ನಿಮ್ಮ ವ್ಯವಹಾರವು ಅಧಿಕ ಲಾಭವನ್ನು ಗಳಿಸಬಹುದು. ಅಧಿಕಾರಿ ವರ್ಗ ನಿಮ್ಮ ಮೇಲೆ ಕಣ್ಣಿಡಬಹುದು.

ವೃಷಭ ರಾಶಿ : ಇಂದು ವ್ಯಾವಹಾರಿಕವಾಗಿರುವ ಮನಶ್ಚಾಂಚಲ್ಯ ಅನೇಕ ವಿಧವಾಗಿ ನಿಮ್ಮನ್ನು ಕಾಡಬಹುದು.‌ ನಿಮ್ಮ ಪ್ರಯಾಣವನ್ನು ತಡೆಯಬಹುದು. ಧನಲಾಭವಾದರೂ ಮನಸ್ಸಿನಲ್ಲಿ ಬೇಸರದ ತುಂಬಿ ಇರುವುದು. ವೃತ್ತಿಯ ಒತ್ತಡವನ್ನು ಮನೆಗೆ ತರುವುದು ಬೇಡ. ನೀವು ಪರಿಚಿತರಿಂದ ಪ್ರಯೋಜನ ಪಡೆಯಲು ಬಯಸುವಿರಿ. ವೃತ್ತಿಜೀವನದಲ್ಲಿ ಅಧಿಕಾರಿಗಳು ನಿಮ್ಮ ಮಾತನ್ನು ಕೇಳಿ, ಬೇಕಾದುದನ್ನು ಮಾಡಿಕೊಡುವರು.

ಮಿಥುನ ರಾಶಿ : ಇಂದು ಹಿತಶತ್ರುಗಳು ನಿಮಗೆ ಬರುವ ಲಾಭವನ್ನು ತಪ್ಪಿಸುವರು. ಸಮಾಜದಿಂದ ಸಿಗುವ ಗೌರವವೂ ಬಾರದೇ ಇರುವುದು. ಬಂಧುಗಳು ನಿಮ್ಮ ಸಹಾಯವನ್ನು ಕೇಳಬಹುದು. ಕುಟುಂಬದ ಸದಸ್ಯರೊಂದಿಗೆ ಸಂತೋಷದಿಂದ ಕಾಲ ಕಳೆಯುವಿರಿ. ನೀವು ಅಂದುಕೊಂಡಷ್ಟು ಲಾಭವು ಸಿಗುವತನಕ ಕಾರ್ಯವನ್ನು ನಿಲ್ಲಿಸಲಾರಿರಿ. ಸಂಗಾತಿಯ ಸಲಹೆಯನ್ನು ಸ್ವೀಕರಿಸಿರಿ. ಮಕ್ಕಳು ಶುಭಯೋಗವನ್ನು ಉಂಟು ಮಾಡುವರು.

ಕಟಕ ರಾಶಿ : ಇಂದು ನೀವು ಯಾರನ್ನೂ ಲಘುವಾಗಿ ಕಾಣುವುದು ಬೇಡ.ಆಭರಣವನ್ನು ಖರೀದಿಸಲು ಸಾಲವನ್ನು ಮಾಡಬೇಕಾಗುವುದು ಉದ್ಯೋಗದಲ್ಲಿ ಒತ್ತಡವು ಅಧಿಕವಾಗಿದ್ದು ಅದು ದಾಂಪತ್ಯದಲ್ಲಿ ಮೇಲೂ ಪರಿಣಾಮವನ್ನು ಬೀರಬಹುದು. ಸಹೋದರನ ಕಡೆಯಿಂದ ನಿಮಗೆ ಸಹಾಯವಾಗುವುದು. ನಿಮ್ಮ ಕೆಲಸಕ್ಕೆ ಸಮಾಜದಲ್ಲಿ ಗೌರವ ಸಿಗಬಹುದು.

ಸಿಂಹ ರಾಶಿ : ನೀವು ಇಂದು ಹೊಸತನವನ್ನು ತೆರೆದ ಮನಸ್ಸಿನಿಂದ ಸ್ವಾಗತಿಸುವಿರಿ. ವೃತ್ತಿಯಲ್ಲಿ ಆತಂಕದ ವಾತಾವರಣವು ಇರಲಿದೆ. ದೀರ್ಘಕಾಲದ ಹೂಡಿಕೆಗಳಿಗೆ ಕೈಹಾಕುವ ಮುನ್ನ ಯೋಚಿಸಿ. ಹಿರಿಯರ ಮಾತನ್ನು ಶ್ರದ್ಧೆಯಿಂದ ಕೇಳಿ, ನಿಮ್ಮ ಕಾರ್ಯಕ್ಕೆ ಸಹಾಯಕವಾದೀತು. ಶಕ್ತಿ‌ ಮೀರಿ ಮಾಡಿದ ಕೆಲಸದಲ್ಲಿ ನಿಮಗೆ ತೊಂದರೆಯಾಗಬಹುದು. ಯಾರ ಬಗ್ಗೆಯೂ ಅನಗತ್ಯ ಟೀಕೆಗಳನ್ನು ಮಾಡುವುದು ಬೇಡ.

ಕನ್ಯಾ ರಾಶಿ : ಇಂದು ನಿಮ್ಮ ಹಳೆಯ ಕಾರ್ಯಗಳನ್ನೇ ಯಾರಾದರೂ ನೆನಪಿಸಿಯಾರು. ಸಮಸ್ಯೆಯನ್ನು ಬರುವ ಮೊದಲೇ ಯೋಚಿಸಿ ಸಿದ್ಧತೆಯನ್ನು ಮಾಡಿಕೊಳ್ಳುವಿರಿ. ಕೆಲವು ಸಂಬಂಧಗಳು ಯಾಕೆ ದೂರವಾಗುತ್ತವೆ ಎಂದು ತಿಳಿಯುವುದಿಲ್ಲ. ಯಾರನ್ನೂ ನೋಯಿಸುವುದು ನಿಮಗೆ ಆಗದು. ಈ ಬಗ್ಗೆ ನೀವೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದು. ಕೆಲವು ಸಣ್ಣಪುಟ್ಟ ಬದಲಾವಣೆಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಜಯ ಸಿಗುತ್ತದೆ.

ತುಲಾ ರಾಶಿ : ಇಂದು ನಿಮ್ಮ ವಿವಾಹದ ಪ್ರಸ್ತಾಪಗಳು ಬರಬಹುದು. ಭೋಗವಸ್ತುಗಳನ್ನು ಅನವಶ್ಯಕವಾಗಿ ಖರೀದಿಸುವಿರಿ. ನಿಮ್ಮ ಇಷ್ಟದವರು ನಿಮ್ಮನ್ನು ಭೇಟಿಯಾಗಲು ಬರಬಹುದು. ನಿಮ್ಮ‌ ಸಣ್ಣ ಉಳಿತಾಯಕ್ಕೆ ಇಂದು ಬಹಳ ಬೆಲೆ‌ಬರಲಿದೆ. ಹೊಸ ಜವಾಬ್ದಾರಿಗಳ ನಿರೀಕ್ಷೆಯಲ್ಲಿ ಇರುವಿರಿ. ಶುಭಕಾರ್ಯಗಳಿಗೆ ಇಂದು ಸೂಕ್ತ ದಿನವಾಗಿದೆ. ಆಲಸ್ಯತನ ಮಾಡದೆ ಹಮ್ಮಿಕೊಂಡ ಕಾರ್ಯಗಳನ್ನು ಆರಂಭಿಸಿರಿ. ಹಿರಿಯರ ಮತ್ತು ಸಹೋದ್ಯೋಗಿಗಳ ಬೆಂಬಲ ದೊರೆಯುವುದು.

ವೃಶ್ಚಿಕ ರಾಶಿ : ಇಂದು ನಿಮ್ಮ ಗೌರವಕ್ಕೆ ಯಾರಿಂದಲಾದರೂ ಚ್ಯುತಿಯಾಗಬಹುದು. ಯಾವ ಅಪವಾದವನ್ನೂ ನೀವು ಇಟ್ಟುಕೊಳ್ಳುವುದು ಇಷ್ಟಪಡುವುದಿಲ್ಲ. ಹೊಸ ತರಹದ ಆಲೋಚನೆಗಳು ನಿಮ್ಮನ್ನು ಹುರಿದುಂಬಿಸಲಿದೆ. ಮಾನಸಿಕ ನೆಮ್ಮದಿಯನ್ನು ಪಡೆಯಲು ಮತ್ತು ಮನಸ್ಸಿನಲ್ಲಿ ಮಾಡಿದ ಆಲೋಚನೆಗಳು ಸಾಕಾರಗೊಳ್ಳಲು ಧ್ಯಾನ ಮಾಡಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

ಧನು ರಾಶಿ : ನೀವು ಪ್ರಯಾಣವನ್ನು ಅನಿವಾರ್ಯ ಕಾರಣಕ್ಕೆ ಮಾಡಬೇಕಾಗಬಹುದು. ಉದ್ಯೋಗದಲ್ಲಿ ಇಷ್ಟವಿಲ್ಲದೆ ಕಡೆ ವರ್ಗಾವಣೆ ಆಗಲಿದೆ. ಸಹೋದ್ಯೋಗಿಗಳ ಬಗ್ಗೆ ನಿಮಗೆ ಅಸಮಾಧಾನ ಇರಲಿದೆ. ಮನೆಯಲ್ಲಿ ದೇವರಿಗೆ ಸಂಬಂಧಿಸಿದ ತೊಂದರೆಗಳು ಕಾಣಿಸಿಕೊಳ್ಳಬಹುದು. ದುರಭ್ಯಾಸವು ನಿಮಗೆ ಹಣಕಾಸಿನ ನಷ್ಟವನ್ನು ಮಾಡಿಸೀತು. ಯಾರಿಂದಲಾದರೂ ಸಿಗುವ ಅಲ್ಪ ಸಹಾಯವೂ ಅಧಿಕವೆಂದು ಭಾವಿಸಿ.

ಮಕರ ರಾಶಿ : ನೀವು ಹಿರಿಯರ ಜೊತೆ ಗೌರವಯುತವಾಗಿ ವರ್ತಿಸಿ. ಅನಗತ್ಯ ಹರಟೆಯಿಂದ ಈ ದಿನವನ್ನು ಕಳೆಯುವಿರಿ. ಹಣಕಾಸಿನ ವ್ಯವಹಾರವನ್ನು ಮಾಡುತ್ತಿದ್ದರೆ ನಿಮಗೆ ಲಾಭವು ನಿಮ್ಮದಾಗಬಹುದು. ಸಮಯಾದ ಅಭಾವದಿಂದ ಇಂದಿನ‌ ಕೆಲಸಗಳು ಹಾಗೆಯೇ ಇರಬಹುದು. ಉದ್ಯೋಗದಲ್ಲಿರುವ ಜನರು ತಮ್ಮ ಕಾರ್ಯಕ್ಷೇತ್ರದಲ್ಲಿ ಎಚ್ಚರಿಕೆಯಿಂದಿರಬೇಕು. ಯಾವುದನ್ನೂ ಪಳಗಿಸುವುದು ಸುಲಭದ ಕಾರ್ಯವಲ್ಲ.

ಕುಂಭ ರಾಶಿ : ಇಂದು ಸಂಪತ್ತಿನ ವ್ಯಯ ಆಗುವುದು. ನೀವು ಮೊದಲೇ ನಿರ್ಧರಿಸಿರುವ ಕೆಲಸಗಳನ್ನು ಪೂರ್ಣ ಮಾಡಲು ಕಾಲಾವಕಾಶದ ಕೊರತೆ ಇರುವುದು. ಭವಿಷ್ಯದ ಬಗ್ಗೆ ಹೆಚ್ಚು ಚಿಂತಾಮಗ್ನರಾಗುವಿರಿ. ನಿಮ್ಮ ಒಳ್ಳೆಯತನವು ಈ ದಿನ ಮತ್ತೊಮ್ಮೆ ಸಾಬೀತಾಗುವುದು. ನೆರೆಹೊರೆಯವರಿಗೆ ಸ್ನೇಹದ ಹಸ್ತ ಚಾಚುವಿರಿ. ವಿವಾಹದ ಮಾತುಕತೆಗಳು ನಿಮ್ಮ ಖುಷಿಯನ್ನು ಹೆಚ್ಚಿಸಬಹುದು. ವೃತ್ತಿಗಾಗಿ ನೀವು ಮಾಡುವ ಪ್ರಯತ್ನದಿಂದ ಯಶಸ್ಸು ಸಿಗಲಿದೆ.

ಮೀನ ರಾಶಿ : ಇಂದು ಮನಸ್ಸಿನ ಕಿರಿಕಿರಿಯನ್ನು ಅನುಭವಿಸದೇ ಅನ್ಯ ಮಾರ್ಗವಿರದು. ವಿವಾಹಯೋಗವು ಬಂದರೂ ನಿಮಗೆ ಅಂತಹ ಯೋಗ್ಯತೆಯ ಕೊರತೆ ಎದ್ದು ಕಾಣುವುದು. ಭೂಮಿಗೆ ಸಂಬಂಧಿಸಿದ ಮಾತುಕತೆಯಲ್ಲಿ ಹಿನ್ನಡೆ ಉಂಟಾಗುವುದು. ಸದ್ಯಕ್ಕೆ ಸ್ಥಿರಾಸ್ಥಿ ಖರೀದಿಯ ಬಗ್ಗೆ ಚಿಂತಿಸುವುದು ಸೂಕ್ತವಲ್ಲ. ಆರೋಗ್ಯದ ಕಡೆ ಗಮನವಿರಲಿ. ನಂಬಿದ ದೈವವು ನಿಮಗೆ ಅನುಕೂಲವನ್ನೇ ಮಾಡುವುದು. ಅದನ್ನು ತಿಳಿಯುವ ದೃಷ್ಟಿ ಬೇಕು. ಕಾರ್ಮಿಕರ ವಿಚಾರದಲ್ಲಿ ನಿಮಗೆ ಅಸಮಾಧಾನವು ಇರುವುದು.

Leave a Reply

Your email address will not be published. Required fields are marked *