Fri. Apr 11th, 2025

Bumper lottery: ರಾತ್ರೋ ರಾತ್ರಿ ಒಲಿದ ಅದೃಷ್ಟ ಲಕ್ಷ್ಮಿ – ಬಂಪರ್‌ ಲಾಟರಿಯಲ್ಲಿ ಮಂಡ್ಯದ ಗಂಡು ಗೆದ್ದಿದ್ದೆಷ್ಟು ಗೊತ್ತಾ?!!

Bumper lottery:(ಅ.11)ಅದೃಷ್ಟ ಒಂದಿದ್ರೆ ಯಾರು ಬೇಕಾದರೂ ಕೋಟ್ಯಾಧಿಪತಿ ಆಗಬಹುದು. ಹಾಗೆಯೇ ಇದೀಗ ಮೆಕ್ಯಾನಿಕ್‌ ಗೆ ಬಂಪರ್‌ ಲಾಟರಿ ಹೊಡೆದಿದೆ. ಆತನಿಗೆ ಹೊಡೆದ ಬಂಪರ್‌ ಲಾಟರಿ ಮೊತ್ತ ಕೇಳಿದ್ರೆ ನೀವು ಶಾಕ್‌ ಆಗೋದು ಗ್ಯಾರಂಟಿ!!

ಇದನ್ನೂ ಓದಿ: ⚖Aries to Pisces: ಅಸಂಬದ್ಧ ಸಲಹೆಗಳನ್ನು ಕೊಡುವ ಸಹೋದ್ಯೋಗಿಗಳನ್ನು ನಂಬಬೇಡಿ!!!

ಓಣಂ ಹಬ್ಬದ ಹಿನ್ನೆಲೆಯಲ್ಲಿ ಕೇರಳದಲ್ಲಿ ನಡೆಸುವ ಬಂಪರ್ ಜಾಕ್​ಪಾಟ್​ ಮಂಡ್ಯದ ಮೂಲದ ಬೈಕ್ ಮೆಕ್ಯಾನಿಕ್‌ ಗೆ​ ಹೊಡೆದಿದೆ. ಈ ಹಿನ್ನೆಲೆಯಲ್ಲಿ ಮೆಕ್ಯಾನಿಕ್‌ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ.


ಲಾಟರಿ ಒಲಿದಿರುವ ಅದೃಷ್ಟವಂತ ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ ನಿವಾಸಿಯಾಗಿರುವ ಅಲ್ತಾಫ್ ಪಾಷಾ. ವೃತ್ತಿಯಲ್ಲಿ ಬೈಕ್​ ಮೆಕ್ಯಾನಿಕ್ ಆಗಿದ್ದು, ಈತನಿಗೆ ಲಾಟರಿಯಲ್ಲಿ ಬರೋಬ್ಬರಿ 25 ಕೋಟಿ ರೂಪಾಯಿ ಒಲಿದು ಬಂದಿದೆ.

ಈತ ಇತ್ತೀಚಿಗಷ್ಟೆ ಕೇರಳಕ್ಕೆ ಹೋಗಿದ್ದಾಗ 500 ರೂ ಕೊಟ್ಟು ಲಾಟರಿ ಖರೀದಿ ಮಾಡಿದ್ದರು. ಇದೀಗ 25 ಕೋಟಿ ರೂ. ಲಾಟರಿ ಹೊಡೆದಿರುವ ವಿಚಾರ ತಿಳಿಯುತ್ತಿದ್ದಂತೆಯೇ ಹಣದ ಮೂಟೆ ಕಟ್ಟಿಕೊಂಡು ಬರಲು ಕೇರಳದತ್ತ ಹೊರಟ್ಟಿದ್ದಾರೆ.

ಅದಕ್ಕೂ ಮೊದಲು ಲಾಟರಿ ಹೊಡೆದಿರುವ ಬಗ್ಗೆ ಮಾಧ್ಯಮದ ಜತೆ ಅಲ್ತಾಫ್​ ತಮ್ಮ ಮನದಾಳದ ಮಾತು ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು