ಗಂಡಿಬಾಗಿಲು:(ಅ.11) ಸಿಯೋನ್ ಆಶ್ರಮ (ರಿ.), ಗಂಡಿಬಾಗಿಲು ಇಲ್ಲಿ ಅ.10 ರಂದು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಸಂಸ್ಥೆಯ ಟ್ರಸ್ಟಿ ಸದಸ್ಯರಾದ ಶ್ರೀಮತಿ ಮೇರಿ ಯು.ಪಿ.ಯವರು ಅಲಂಕರಿಸಿದ್ದರು.
ಇದನ್ನೂ ಓದಿ: 🟠ಕರಂಬಾರು: (ಅ.12) ಶಾರದೋತ್ಸವ ಸಮಿತಿಯಿಂದ ಸಂಭ್ರಮದ ಆಹ್ವಾನ
ಅತಿಥಿಗಳಾಗಿ ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ಶಾಖೆಯ ಅಧ್ಯಕ್ಷರಾದ ಶ್ರೀಯುತ ಹರಿದಾಸ್ ಎಸ್.ಎಂ.ರವರು ಮಾತನಾಡಿ, ಮಾನಸಿಕ ಕಾಯಿಲೆಯ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿಯನ್ನು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತಿದೆ ಎಂದರು.
ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ್ದ ಕಾರ್ಯಕಾರ ಸದಸ್ಯರುಗಳಾದ ಅಡ್ವಕೇಟ್ ಶ್ರೀಯುತ ಶಿವಕುಮಾರ್ ಬಿ.ಎಸ್.ರವರು ಮಾತನಾಡಿ, ಮಾನಸಿಕ ಅಸ್ವಸ್ಥರನ್ನು ಸಾಕಿ ಸಲಹುತ್ತಿರುವ ಸಿಯೋನ್ ಆಶ್ರಮದ ಕೆಲಸ ಕಾರ್ಯಗಳು ಶ್ಲಾಘನೀಯ ಎಂದರು. ಸಿಯೋನ್ ಆಶ್ರಮದ ಮ್ಯಾನೇಜರ್ ಸಂಧ್ಯಾ ಸುಭಾಷ್ ರವರು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಮಹತ್ವವನ್ನು ವಿವರಿಸಿದರು.
ಸಂಸ್ಥೆಯ ವೈದ್ಯರಾದ ಶ್ರೀಯುತ ಶಿವಾನಂದ ಸ್ವಾಮಿಯವರು, ಮಾನಸಿಕ ಕಾಯಿಲೆ ಬರಬಹುದಾದ ಸಾಧ್ಯತೆಗಳ ಕಾರಣಗಳು, ವಿಧಗಳು, ಲಕ್ಷಣಗಳು, ಪರಿಹಾರಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ರೆಡ್ ಕ್ರಾಸ್ ಸೊಸೈಟಿ ಕಾರ್ಯಕಾರ ಸದಸ್ಯೆ ಶ್ರೀಮತಿ ಸುಕನ್ಯರವರು, ಸಂಸ್ಥೆಯ ಟ್ರಸ್ಟೀ ಸದಸ್ಯರಾದ ಶ್ರೀಯುತ ಸುಭಾಷ್ ಯು.ಪಿ., ಆಶ್ರಮ ನಿವಾಸಿಗಳಾದ ರಾಜು ಮತ್ತು ಜಯಂತಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಸಿಯೋನ್ ಅಶ್ರಮದ ನಿವಾಸಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಸಂಸ್ಥೆಯ ಆಡಳಿತ ಮಂಡಳಿಯವರು, ಸಿಬ್ಬಂದಿವರ್ಗದವರು, ಆಶ್ರಮ ನಿವಾಸಿಗಳೆಲ್ಲರೂ ಉಪಸ್ಥಿತರಿದ್ದರು. ಸಂಸ್ಥೆಯ ಸಿಬ್ಬಂದಿಯವರಾದ ಶ್ರೀಮತಿ ಸಿಂಧು ವಿ.ಎಮ್.ರವರು ಕಾರ್ಯಕ್ರಮ ನಿರೂಪಿಸಿದರು. ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ಶಾಖೆಯ ವತಿಯಿಂದ ಸಿಹಿತಿಂಡಿ ವಿತರಿಸಲಾಯಿತು.