Tue. Apr 8th, 2025

Karambaru:(ಅ.12) ಶಾರದೋತ್ಸವ ಸಮಿತಿಯಿಂದ ಸಂಭ್ರಮದ ಆಹ್ವಾನ

ಕರಂಬಾರು: (ಅ.11) ಶ್ರೀ ಶಾರದೋತ್ಸವ ಸಮಿತಿ ಕರಂಬಾರು, ವಿಶ್ವ ಹಿಂದೂ ಪರಿಷತ್ ಬಜರಂಗದಳ ಕರಂಬಾರು, ಶ್ರೀ ಜ್ಞಾನೇಶ್ವರಿ ಭಜನಾ ಮಂದಿರ ಇವರ ಜಂಟಿ ಸಹಯೋಗದಲ್ಲಿ ಇದೇ ಬರುವ ದಿನಾಂಕ 12-10-2024ನೇ ಶನಿವಾರ ಶ್ರೀ ಜ್ಞಾನೇಶ್ವರಿ ಭಜನಾ ಮಂದಿರದ ವಠಾರದಲ್ಲಿ ಪ್ರಥಮ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ನಡೆಯಲಿದೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಕಾರ್ಯಕ್ರಮ ನಡೆಯಲಿದೆ.

ಇದನ್ನೂ ಓದಿ: ⭕ಉರುವಾಲು: ಕುಪ್ಪೆಟ್ಟಿ ನಿವಾಸಿ ಶ್ರಾವ್ಯ ಜಿ. ಅಸೌಖ್ಯದಿಂದ ನಿಧನ


ಪ್ರತಿಷ್ಠಾಪನೆ, ಉಪಹಾರ, ಆಟೋಟ ಸ್ಪರ್ಧೆಗಳು, ಧಾರ್ಮಿಕ ಸಭಾ ಕಾರ್ಯಕ್ರಮ, ಮಹಾ ಮಂಗಳಾರತಿ, ಅನ್ನಸಂತರ್ಪಣೆ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ, ಶಾರದಾ ಮೂರ್ತಿಯ ವಿಸರ್ಜನಾ ಮೆರವಣಿಗೆಯು ನಡೆಯಲಿದೆ.


ಆಟೋಟ ಸ್ಪರ್ಧೆ ನಡೆಯಲಿದ್ದು, ಮಕ್ಕಳಿಗೆ ಓಟ, ಲಿಂಬು ಚಮಚ, ಹಗ್ಗಜಗ್ಗಾಟ, ಭಕ್ತಿಗೀತೆ, ಮಹಿಳೆಯರಿಗೆ ಸೂಜಿಗೆ ನೂಲು ಹಾಕುವುದು, ಗುಂಡೆಸೆತ, ಹಗ್ಗ ಜಗ್ಗಾಟ, ಮಡಕೆ ಒಡೆಯುವುದು, ಭಕ್ತಿಗೀತೆ. ಪುರುಷರಿಗೆ ಗುಂಡೆಸೆತ, ಹಗ್ಗ ಜಗ್ಗಾಟ, ಮಡಕೆ ಒಡೆಯುವುದು, ಗೋಣಿಚೀಲ ಓಟ ನಡೆಯಲಿರುವುದು.

ವಿಶೇಷ ಆರ್ಷಣೆಯಾಗಿ ಆರು ವರ್ಷದ ಒಳಗಿನ ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆ ಮತ್ತು ಚೆಂಡೆ ವಾದ್ಯಗಳ ಮೇಳದೊಂದಿಗೆ ಶಾರದಾ ದೇವಿಯ ವೈಭವಪೂರ್ಣ ಶೋಭಾಯಾತ್ರೆ ಜರುಗಲಿದೆ.

Leave a Reply

Your email address will not be published. Required fields are marked *