Thu. Apr 17th, 2025

Mangalore: ಇನ್ಸ್ಟಾಗ್ರಾಂ ನಲ್ಲಿ ವೀಡಿಯೋ ಲೈಕ್‌ ಮಾಡೋ ಮುಂಚೆ ಎಚ್ಚರ!! ಲೈಕ್‌ ಮಾಡಲು ಹೋಗಿ 5 ಲಕ್ಷ ಹಣ ಕಳೆದುಕೊಂಡ ಮಂಗಳೂರಿನ ವ್ಯಕ್ತಿ!!

ಮಂಗಳೂರು:(ಅ.11) ವ್ಯಕ್ತಿಯೊಬ್ಬರು ಇನ್‌ ಸ್ಟಾಗ್ರಾಂನಲ್ಲಿ ಆನ್‌ಲೈನ್ ಅರ್ನಿಂಗ್ ಲಿಂಕ್ ಕ್ಲಿಕ್ ಮಾಡಿ, ವಾಟ್ಸ್ ಅಪ್ ಚಾಟ್ ನಲ್ಲಿ ನಕಲಿ ಆನ್‌ಲೈನ್ ಗಳಿಕೆಯ ಜಾಲಕ್ಕೆ ಸಿಲುಕಿ 5 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಸಂಭವಿಸಿದೆ.

ಇದನ್ನೂ ಓದಿ: 🟠ಉಜಿರೆ: ಎಸ್.ಡಿ.ಎಮ್ ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಭಾಗದ ಸ್ಪಟಿಕ ಸಂಘದ ವತಿಯಿಂದ “ಕ್ರೆಸಿಟಾ ಫೆಸ್ಟ್

ಪ್ರಕರಣದ ವಿವರ: ದೂರುದಾರರು ಇನ್‌ ಸ್ಟಾಗ್ರಾಂನಲ್ಲಿ ಸೆ. 28ರಂದು ಆನ್‌ಲೈನ್ ಅರ್ನಿಂಗ್ ಲಿಂಕ್ ಕ್ಲಿಕ್ ಮಾಡಿದ್ದು,
ನಂತರದಲ್ಲಿ ಅವರ ವಾಟ್ಸ್ ಅಪ್ ಗೆ 9733674701 ನಂಬರಿನ ಚಾಟ್ ಬಂದಿದ್ದು, ಅದರಲ್ಲಿ ಅಪರಿಚಿತ ವ್ಯಕ್ತಿಯು ತಾವು ಕಳಿಸಿದ ವೀಡಿಯೋಗೆ ಲೈಕ್ ಮಾಡಿದರೆ 123ರಿಂದ 5,000 ರೂ. ವರೆಗೆ ಗಳಿಸಬಹುದು ಎಂದು ತಿಳಿಸಿದ್ದ.

ಈ ವಿಚಾರವನ್ನು ನಂಬಿದ ದೂರುದಾರರು ಅವರು ಕಳಿಸಿದಂತಹ ವೀಡಿಯೊಗಳಿಗೆ ಲೈಕ್ ಕೊಟ್ಟಿದ್ದರು. ಬಳಿಕ ಆರೋಪಿಯು ಟೆಲಿಗ್ರಾಮ್ ಅಪ್ಲಿಕೇಶನ್ ಲಿಂಕ್ ಕಳಿಸಿ, ಲೈಕ್ ಮಾಡಿದ್ದಕ್ಕೆ 123 ರೂ.ಗಳನ್ನು ದೂರುದಾರರ ಖಾತೆಗೆ ಜಮಾ ಮಾಡಿದ್ದ. ಬಳಿಕ ಆರೋಪಿಗಳು ದೂರುದಾರರೊಂದಿಗೆ ಮತ್ತೆ ಚಾಟ್ ಮಾಡಿ ಇದೇ ರೀತಿ ಹೆಚ್ಚು ಗಣ ಗಳಿಸಬಹುದು ಎಂದು ನಂಬಿಸಿ ದೂರುದಾರರನ್ನು ಡಿ929ಗ್ಲೋಬಲ್ ಹೈ ಸ್ಯಾಲರಿ ಗ್ರೂಪ್ ಎಂಬ ಟೆಲಿಗ್ರಾಮ್ ಗ್ರೂಪಿಗೆ ಸೇರಿಸಿ ಲಿಂಕ್‌ವೊಂದನ್ನು ಕಳಿಸಿದ್ದರು.

ಆರೋಪಿಗಳಾದ ಅನಿಲ್ ಸಿಂಗ್, ತ್ರಿಶಾ ವರ್ಮ ಎಂಬ ಯೂಸರ್ ನೇಂನಿಂದ ಚಾಟ್ ಮಾಡಿ, 5000 ರೂ. ಜಮೆ ಮಾಡುವಂತೆ ತಿಳಿಸಿದ್ದರು. ದೂರುದಾರರು 5,000 ರೂ. ಜಮೆ ಮಾಡಿ, ಅವರು ಹೇಳಿದ ಟಾಸ್ಕ್ ಪೂರ್ಣಗೊಳಿಸಿ, ಹಣ ತೆಗೆಯಲು ಹೋದರು. ಆಗ ವಂಚಕರು 5,000 ರೂ. ನೀವು ತಪ್ಪು ಮಾಡಿದ್ದೀರಾ, 5000 ರೂ. ಬೇಕಾದರೆ 50 ಸಾವಿರ ಇರಿಸುವಂತೆ ಕೇಳಿದ್ದರು. ಇದೇ ರೀತಿ ತಪ್ಪಿರುವುದಾಗಿ ಹೇಳಿ ನಂಬಿಸಿ ಹಣ ಪಡೆಯುತ್ತಾ ಹೋಗಿದ್ದಾರೆ ಎನ್ನಲಾಗಿದೆ.


ವಿವಿಧ ಖಾತೆಗಳಿಗೆ ದೂರುದಾರರು ಒಟ್ಟು 5,09,000 ರೂ. ಮೊತ್ತವನ್ನು ವರ್ಗಾವಣೆ ಮಾಡಿದ್ದಾರೆ ಎನ್ನಲಾಗಿದೆ. ಆರೋಪಿಗಳು ಬಳಿಕ ಮೊತ್ತವನ್ನು ಮರಳಿಸದೆ ವಂಚನೆ ಮಾಡಿರುವುದಾಗಿ ದೂರಲಾಗಿದೆ. ಈ ಕುರಿತಂತೆ ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *