Wed. Nov 20th, 2024

ಮೇಷ ರಾಶಿ : ನಿಮ್ಮ ಜೀವನದ ಅತ್ಯಂತ ನಿರ್ಣಾಯಕ ಕ್ಷಣವನ್ನು ಎದುರಿಸುವಾಗ ಜಾಗರೂಕರಾಗಿರಿ. ಕಾನೂನಿನ ವಿಚಾರದಲ್ಲಿ ನಿಮಗೆ ಸಕಾರಾತ್ಮಕ ಬೆಳವಣಿಗೆಯು ಇರಲಿದೆ. ಮಕ್ಕಳ‌ ಜೊತೆ ವಾಗ್ವಾದ ಮಾಡುವ ಸಂದರ್ಭವು ಬರಬಹುದು. ಪ್ರಾರಬ್ಧಕರ್ಮಗಳನ್ನು ಅನುಭವಿಸಿ ತೀರುವುದೇ ದಾರಿ. ಆಗಿಹೋದ ಘಟನೆಗಳು ನಿಮ್ಮ ಸ್ಮರಣೆಗೆ ಬರಲಿದ್ದು ಅದನ್ನು ಮರೆಯುವ ಪ್ರಯತ್ನ ಮಾಡಿದರೂ ಅಸಾಧ್ಯ ಎನಿಸಬಹುದು.

ವೃಷಭ ರಾಶಿ : ವಿದ್ಯಾಭ್ಯಾಸವನ್ನು ಮುಂದುವರಿಸುವುದು ಕಷ್ಟವಾಗಬಹುದು. ನಿಮ್ಮ ಉದಾರ ಮತ್ತು ಬೆಂಬಲದ ಸ್ವಭಾವದಿಂದ, ಜನರು ನಿಮ್ಮ ಬಳಿ ಬಂದು ನಿಮ್ಮ ಕೆಲಸದಲ್ಲಿ ನೆರವಾಗುತ್ತಾರೆ. ನಿಮ್ಮ ತೊಂದರೆಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವಿರಿ. ನಿಮ್ಮ ವಿರೋಧಿಗಳು ಸಹಜವಾಗಿ ಕಡಿಮೆಯಾಗುವರು. ನೀವು ನಿಯೋಜಿತ ಕಾರ್ಯಗಳನ್ನು ಒಂದೊಂದಾಗಿ ಮಾಡಿ ಮುಗಿಸುವುದು ಉತ್ತಮ. ದಾಂಪತ್ಯದಲ್ಲಿ ಉಂಟಾದ ಕಲಹವು ಮಧ್ಯಸ್ತಿಕೆಯಿಂದ ಪರಿಹಾರವಾಗುವುದು.

ಮಿಥುನ ರಾಶಿ : ದುರಭ್ಯಾಸವು ಜಗಜ್ಜಾಹಿರಾಗಬಹುದು. ನಿಮ್ಮ ಈ ದಿನ ಚೆನ್ನಾಗಿ ಪ್ರಾರಂಭವಾಗಿರಲಿದ್ದು, ನಿಮ್ಮ ಸಾಮರ್ಥ್ಯಗಳಿಂದ ಪ್ರತಿಯೊಬ್ಬರನ್ನೂ ಅಚ್ಚರಿಗೊಳಿಸುವಿರಿ. ನಿಮ್ಮ ಆದಾಯದ ಮೂಲವನ್ನು ಎಲ್ಲರ ಜೊತೆ ಹಂಚಿಕೊಳ್ಳುವುದು ಬೇಡ. ಇದರಿಂದ ನಿಮ್ಮ ಆದಾಯಕ್ಕೆ ತೊಂದರೆ ಆಗುವ ಸಾಧ್ಯತೆ ಇದೆ. ನಿಮ್ಮ ತಮಾಷೆಗೂ ಒಂದು ಮಿತಿ ಇರಲಿ. ಉದ್ಯೋಗದ ಆರಂಭದ ದಿನಗಳು ನಿಮಗೆ ಕಷ್ಟ ಎಂದು ಅನ್ನಿಸಬಹುದು.

ಕರ್ಕಾಟಕ ರಾಶಿ : ಕರ್ತವ್ಯದಲ್ಲಿ ಲೋಪವಾಗುವ ಸಾಧ್ಯತೆ ಹೆಚ್ಚು. ನಿಮ್ಮ ಸುತ್ತಲಿನ ಮಾತುಕತೆಗಳನ್ನು ಗಮನಿಸುತ್ತಿರಿ. ದೈವಲೀಲೆಯ ಬಗ್ಗೆ ನಿಮಗೆ ನಂಬಿಕೆ ಹೆಚ್ಚಿರುವುದು. ಪರರಿಗೆ ಸಂತೋಷವನ್ನು ಕೊಡುವುದು ಪೂಜೆಯಷ್ಟೇ ಫಲ. ಹಠದ ಸ್ವಭಾವವನ್ನು ಮಕ್ಕಳೂ ಮುಂದುವರಿಸಬಹುದು. ಅವರೆದುರು ನಕಾರಾತ್ಮಕ ಗುಣಗಳು ಬೇಡ.

ಸಿಂಹ ರಾಶಿ : ನೀವು ಮಾಡಿದ ಉಪಕಾರವನ್ನು ಹೇಳಿಕೊಳ್ಳುತ್ತ ಇರುವುದು ಬೇಡ. ಪರಿಮಳವಿರುವ ಹೂವನ್ನೂ ಯಾರೂ ಪರಿಚಯಿಸಬೇಕಿಲ್ಲ. ನೀವು ಪುರಸ್ಕಾರಗಳ ಕುರಿತು ಆಲೋಚನೆ ಮಾಡದೇ ಸತತವಾಗಿ ಕಠಿಣ ಪರಿಶ್ರಮಪಡುವಿರಿ. ಸಾಮಾಜಿಕ ಕಾರ್ಯದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲು ಪ್ರಯತ್ನಿಸುವಿರಿ. ನಿಮ್ಮ ಉದ್ಯಮದ ವಿಸ್ತರಣೆಗೆ ಕೆಲವು ಕ್ರಮವನ್ನು ಕೈಗೊಳ್ಳುವಿರಿ. ಒಂದೇ ವಿಷಯದಲ್ಲಿ ನಿಮ್ಮ ಗಮನವು ಅಧಿಕವಾಗಿ ಇರಲಿದೆ.

ಕನ್ಯಾ ರಾಶಿ : ಅತಿಥಿಗಳ ಆಗಮನದಿಂದ ಮನೆಯಲ್ಲಿ ಹರ್ಷ. ನಿಮ್ಮ ಸುತ್ತಲಿನ ಎಲ್ಲರೂ ನಿಮ್ಮ ಆಲೋಚನೆಗಳಿಗೆ ಪ್ರಶಂಸಿಸುವರು. ಯಾರನ್ನೂ ಪೂರ್ತಿಯಾಗಿ ತಿಳಿಯದೇ ಒಳಗೆ ತೆಗೆದುಕೊಳ್ಳುವುದು ಬೇಡ. ಅಪರಿಚಿತರು ಕೊಟ್ಟ ವಸ್ತುಗಳಿಂದ ನಿಮಗೆ ತೊಂದರೆ ಸಂಭವಿಸಬಹುದು. ಯಾರನ್ನೋ ಮೆಚ್ಚಿಸಿ ನಿಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವಿರಿ.

ತುಲಾ ರಾಶಿ : ಇಂದಿನ ನಿಮ್ಮ ಕಾರ್ಯಗಳಿಗೆ ಜೊತೆಗಾರರು ಸಿಗಬಹುದು. ಇಬ್ಬರೂ ಸೇರಿ ಇಬ್ಬರ‌ ಕಾರ್ಯವನ್ನು ಕಛೇರಿಯಲ್ಲಿ ಮಾಡಿ ಮುಗಿಸುವಿರಿ. ವಿಶ್ವಾಸ ನಿಮಗೆ ಸುಲಭವಾಗಿ ಗೊತ್ತಿಲ್ಲದ ದಾರಿಗಳಲ್ಲಿ ಸಂಚರಿಸಲು ನೆರವಾಗುತ್ತದೆ. ಭೂಮಿಯ ವ್ಯವಹಾರಸ್ಥರು ನಷ್ಟವನ್ನು ಅನುಭವಿಸಬೇಕಾದೀತು. ದುಸ್ಸಾಧ್ಯ ಎನಿಸಿದ್ದನ್ನು ಬಿಟ್ಟುಬಿಡಿವುದು ಒಳ್ಳೆಯದು. ಚಿಂತೆಗಳೇ ಇರುವ ಮನಸ್ಸನ್ನು ದೇವರ ಭಕ್ತಿಗೆ ಮೀಸಲಿಟ್ಟು ಸಮಾಧಾನಿಗಳಾಗಿ.

ವೃಶ್ಚಿಕ ರಾಶಿ : ಯಶಸ್ಸಿಗಾಗಿಯೇ ಮಾಡುವ ಕಾರ್ಯದಿಂದ ಅಪಯಶಸ್ಸು ಸಿಗುವುದು. ನೀವು ಇಂದು ಯಾವುದೇ ಅವಕಾಶವನ್ನೂ ಬಿಡಬೇಡಿ. ಇಂದು ನಿಮ್ಮ ಆರ್ಥಿಕತೆಯ ಮಟ್ಟವು ಗೊತ್ತಾಗಲಿದೆ. ಬರುವ ಹಣವನ್ನು ನಿಮ್ಮ ಭವಿಷ್ಯದ ಸಂಪತ್ತಾಗಿ ಕೂಡಿ ಇಡುವಿರಿ. ಸಂಘ, ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಉತ್ತಮ ಅಭಿವೃದ್ಧಿಯನ್ನು ಪಡೆಯುವರು. ನಿಮ್ಮ ಮಾತುಗಳ ಮೇಲೆ ಹೆಚ್ಚು ನಿಯಂತ್ರಣದ ಅಗತ್ಯವಿದೆ.

ಧನು ರಾಶಿ : ನೀವು ಮಾಡಿದ ತಪ್ಪಿಗೆ ಸಮರ್ಥನೆಯನ್ನು ಕೊಡುವಿರಿ. ಇತರರ ಕೆಂಗಣ್ಣಿಗೆ ಬೀಳಬಹುದು. ಇಂದು ನೀವು ಸಮಯವನ್ನು ಕಳೆಯಲು ಬೇರೆ ಬೇರೆ ದಾರಿಗಳನ್ನು ಹುಡುಕುವಿರಿ. ಒಂಟಿಯಾಗಿ ಇರುವುದು ನಿಮಗೆ ಕಷ್ಟವೆನಿಸುವುದು. ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವುದು ಹೆಚ್ಚು ಒಳ್ಳೆಯದು. ಹೊಸತನ್ನು ಕಲಿಯಬೇಕು ಎನ್ನುವ ಆಸೆಯು ಬೇಡವೆನಿಸಬಹುದು. ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನೀವು ಹಿಂದೇಟು ಹಾಕುವಿರಿ.

ಮಕರ ರಾಶಿ : ನಿಮಗೆ ಇಷ್ಟವಾಗದ ಕಾರ್ಯವನ್ನು ಎಷ್ಟೇ ಒತ್ತಾಯ ಮಾಡಿದರೂ ಮಾಡಲಾರಿರಿ. ನಿಮಗೆ ಇಂದು ದಣಿವಾಗುವ ಸಾಧ್ಯತೆ ಹೆಚ್ಚಿದೆ. ಮಕ್ಕಳ ವಿಚಾರದಲ್ಲಿ ನಿಮ್ಮ ಧೋರಣೆಯು ಬದಲಾಗುವುದು. ಮನೆಯಲ್ಲಿ ಯಾರ ಮೇಲೂ ಪಕ್ಷಪಾತ ಮಾಡುವುದು ಬೇಡ. ಕೆಲಸಕ್ಕಾಗಿ ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ.

ಕುಂಭ ರಾಶಿ : ಇಂದು ನೀವು ಅತಿಯಾದ ಒತ್ತಡವನ್ನು ತಂದುಕೊಳ್ಳುವ ಅಗತ್ಯ ಇಲ್ಲ. ನೀವು ನೆಪವೊಡ್ಡಿ ಯಾವುದೇ ಕಾರ್ಯದಲ್ಲಿ ತೊಡಗಲಾರಿರಿ. ಧಾರ್ಮಿಕ ಆಚರಣೆಗಳನ್ನು ಮಾಡುತ್ತಿದ್ದರೂ ಅದು ಕೃತಕದಂತೆ ಅನ್ನಿಸಬಹುದು. ಒಂದೇ ವಿಷಯವು ಅನೇಕ ಬಾರಿ ಕೇಳಿ ಹಿಂಸೆಯಾಗುವುದು. ಶೀತಲ ಸಂಘರ್ಷವು ಸ್ಫೋಟವಾಗಬಹುದು.

ಮೀನ ರಾಶಿ : ನಿಮಗೆ ಇಂದು ವಿಶ್ರಾಂತಿಯನ್ನು ಪಡೆಯುವ ಕಾಲ. ಇಂದು ನೀವು ಅನಗತ್ಯ ಸನ್ನಿವೇಶಗಳಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸಗಳನ್ನು ಒಪ್ಪಿಕೊಳ್ಳಿ. ಕಾರ್ಯದ ಸ್ಥಳವನ್ನು ಬದಲಾಯಿಸುವ ಸಾಧ್ಯತೆ ಇದೆ.ಸಂಕಷ್ಟದ ಸನ್ನಿವೇಶಗಳನ್ನು ಬುದ್ಧಿವಂತಿಕೆಯಿಂದ ದಾಟಬೇಕಾಗುವುದು. ಅನಪೇಕ್ಷಿತ ವಿಚಾರಗಳನ್ನು ಚರ್ಚಿಸುವುದು ನಿಮಗೆ ಇಷ್ಟವಾಗದು. ಅನಿವಾರ್ಯ ಕಾರಣದಿಂದ ಆಸ್ಪತ್ರೆಗೆ ಅಲೆದಾಡಬೇಕಾಗುವುದು.

Leave a Reply

Your email address will not be published. Required fields are marked *