Fri. Apr 18th, 2025

KSRTC driver: ಬೀಡಿ ಸೇದುತ್ತಾ ಬಸ್‌ ಚಲಾಯಿಸಿದ ಗಾಂಚಲಿ ಡ್ರೈವರ್‌…!!! – ಆಕ್ರೋಶ ವ್ಯಕ್ತಪಡಿಸಿದ್ದಕ್ಕೆ ಡ್ರೈವರ್‌ ಹೇಳಿದ್ದೇನು?

ಕೊಪ್ಪಳ (ಅ.13): ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಬಸ್​ಗಳಲ್ಲಿ ನಿತ್ಯ ಸಾವಿರಾರು ಜನರು ಪ್ರಯಾಣ ಮಾಡುತ್ತಾರೆ. ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದೊಯ್ಯುವುದು ಚಾಲಕನ ಕರ್ತವ್ಯವಾಗಿದೆ.

ಇದನ್ನೂ ಓದಿ: 🔶ಮೊಗ್ರು : ಮುಗೇರಡ್ಕದ ಶ್ರೀ ರಾಮ ಶಿಶುಮಂದಿರದಲ್ಲಿ ವೈಭವದಿಂದ ನಡೆದ ಶಾರದಾ ಪೂಜೆ ಹಾಗೂ

ಚಾಲನೆ ಸಮಯದಲ್ಲಿ ಚಾಲಕ ಮೊಬೈಲ್​ನಲ್ಲಿ ಮಾತನಾಡುವುದು, ಧೂಮಪಾನ ಮಾಡುವುದು ನಿಷೇಧಿಸಲಾಗಿದೆ. ಆದರೂ ಕೂಡ ನಿಪ್ಪಾಣಿ ಘಟಕದ ಬಸ್​​​​ ಚಾಲಕ ಧೂಮಪಾನ ಮಾಡುತ್ತ ವಾಹನ ಓಡಿಸಿದ್ದಾನೆ.

ನಿಪ್ಪಾಣಿ ಘಟಕಕ್ಕೆ ಸೇರಿದ ಕೆಎ 23, ಎಫ್ 1045 ನಂಬರ್​ನ ಕೆಎಸ್​ಆರ್​ಟಿಸಿ ಬಸ್​ ಗಂಗಾವತಿಯಿಂದ ಕೋಲ್ಹಾಪುರಕ್ಕೆ ತೆರಳುತ್ತಿತ್ತು. ಚಾಲಕ ಬೀಡಿ ಸೇದುತ್ತಾ ಬಸ್ ಚಲಾಯಿಸಿದ್ದಾನೆ.

ಚಾಲಕ ಧೂಮಪಾನ ಮಾಡುವುದನ್ನು ಪ್ರಯಾಣಿಕ ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾನೆ. ಬಸ್​ನಲ್ಲಿ ಧೂಮಪಾನ ನಿಷೇಧವಿದ್ದರೂ ಚಾಲಕ ಧೂಮಪಾನ ಮಾಡಿದ್ದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೀಡಿ ಸೇದುತ್ತಾ ಬಸ್​ ಚಾಲನೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

Leave a Reply

Your email address will not be published. Required fields are marked *