ಪುತ್ತೂರು: (ಅ.13) ಮಾಣಿ- ಮೈಸೂರು ಗೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಹೊಸದಾಗಿ ಸಸ್ಯಹಾರಿ ಹೋಟೆಲ್ ಆರಂಭವಾಗಿದೆ. ಇದರ ಹೆಸರು ಶ್ರೀ ಮಹೇಶ್ ಪ್ರಸಾದ್. ಪ್ರಯಾಣ ಮಾಡುವಾಗ ರುಚಿಕರ ಮತ್ತು ಆರೋಗ್ಯಯುತ ಆಹಾರವನ್ನು ಸ್ವೀಕರಿಸಬೇಕು ಎಂದು ಎಲ್ಲರೂ ಯೋಚನೆ ಮಾಡುತ್ತಾರೆ.
ಇದನ್ನೂ ಓದಿ: ⭕ರಾತ್ರಿಯಾದರೆ ಸಾಕು ಹೆಂಡತಿಯಿಂದ ಗಂಡನಿಗೆ ಲೈಂಗಿಕ ಕಿರುಕುಳ
ಅಂತಹ ಆಹಾರ ಪ್ರಿಯರ ನೆಚ್ಚಿನ ತಾಣವಾಗಿ, ಹೊಸದಾಗಿ ನಿರ್ಮಾಣಗೊಂಡಿದೆ ಶ್ರೀ ಮಹೇಶ್ ಪ್ರಸಾದ್ ಹೋಟೆಲ್. ಉತ್ತಮ ಸುಸಜ್ಜಿತವಾದ ವ್ಯವಸ್ಥೆ, ನಾರ್ತ್ ಇಂಡಿಯನ್, ಸೌತ್ ಇಂಡಿಯನ್ ,ಚೈನೀಸ್ ರೆಸಿಪಿಗಳು ಕೂಡ ಇದ್ದು ಶುದ್ದ ಸಸ್ಯಹಾರಿ ಉಪಹಾರ ಗೃಹವಾಗಿ ಉತ್ತಮ ಸ್ಪಂದನೆ ದೊರೆಯುತ್ತಿದೆ.
30 ಸಿಬ್ಬಂದಿಯನ್ನು ಒಳಗೊಂಡ ಈ ಹೋಟೆಲ್ ನಲ್ಲಿ ಉತ್ತಮವಾದ ಕ್ಲೀನಿಂಗ್ ವ್ಯವಸ್ಥೆ, ಗ್ರಾಹಕರ ಜೊತೆ ಉತ್ತಮ ಬಾಂಧವ್ಯದ ಕೆಲಸಗಾರರು ಮತ್ತು ಉತ್ತಮ ವ್ಯವಸ್ಥೆಯನ್ನೂ ಹೊಂದಿದೆ.
ಉಪ್ಪಿನಂಗಡಿ ಆದಿತ್ಯ ಹೋಟೆಲ್ ನಲ್ಲಿ 16 ವರ್ಷಗಳ ಕಾಲ ಸೇವೆ ಸಲ್ಲಿಸಿದ ಮಧು ಭಟ್ ಉಪ್ಪಿನಂಗಡಿ ಅವರು ಕೂಡ ಇಲ್ಲಿ ಮೇಲ್ವಿಚಾರಕರಾಗಿ ಹೋಟೆಲ್ ನ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.
ಹಾಗಾಗಿ ಇನ್ನು ಮುಂದೆ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಪ್ರಯಾಣ ಮಾಡುವವರಿಗಂತೂ ಒಳ್ಳೆಯ ರುಚಿಕರ ಊಟ ಎಲ್ಲಿ ಸಿಗುತ್ತದೆ? ಎಂದು ಚಿಂತೆ ಮಾಡಬೇಕೆಂದಿಲ್ಲ ಯಾಕೆಂದರೆ ಎಲ್ಲರಿಗೂ ಸವಿಯಾದ, ಆರೋಗ್ಯಪೂರ್ಣ ಆಹಾರವನ್ನು ನೀಡಲು ಶ್ರೀ ಮಹೇಶ್ ಪ್ರಸಾದ್ ಹೋಟೆಲ್ ತಯಾರಾಗಿದೆ.