Tue. Apr 8th, 2025

Sanjay Dutt : ಬಿರುವೆರ್ ಕುಡ್ಲದ ಹುಲಿಗಳ ಘರ್ಜನೆಗೆ ಕೆಜಿಎಫ್ ನ ಅಧೀರ ಫುಲ್ ಖುಷ್..! – ಕರಾವಳಿಯ ಸಂಸ್ಕೃತಿಗೆ ಮುನ್ನಾ ಭಾಯ್ ಫುಲ್ ಫಿದಾ

ಮಂಗಳೂರು:(ಅ.13) ಕನ್ನಡದ “ಕೆಜಿಎಫ್ 2” ಸಿನಿಮಾದಲ್ಲಿಯೂ ನಟಿಸಿರುವ ಬಾಲಿವುಡ್ ಸ್ಟಾರ್ ನಟ ಸಂಜಯ್ ದತ್ ನಿನ್ನೆ ಮಂಗಳೂರಿಗೆ ಆಗಮಿಸಿದ್ದರು. ಕಟೀಲು ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ್ದರು.

ಇದನ್ನೂ ಓದಿ: 🔴ವಕೀಲರ ಮನಸ್ಸನ್ನು ಗೆದ್ರಾ ಹಂಸಾ..!!

ಉದಯ ಪೂಜಾರಿ ನೇತೃತ್ವದ ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರ್ವೆರ್ ಕುಡ್ಲ (ರಿ.) ದಶಮಾನೋತ್ಸವ ಹುಲಿವೇಷದ ಊದು ಪೂಜೆಯಲ್ಲಿ ಸಂಜಯ್ ದತ್ ಭಾಗವಹಿಸಿದ್ದಾರೆ. ಹುಲಿ ಕುಣಿತ ನೋಡಿ ಖುಷಿ ಪಟ್ಟಿದ್ದಾರೆ.

ಬಾಲಿವುಡ್​ನ ಹಲವಾರು ನಟರು ಕರ್ನಾಟಕದೊಂದಿಗೆ ಆಪ್ತ ಬಂಧ ಹೊಂದಿದ್ದಾರೆ. ಕರ್ನಾಟಕದ ಜನಪ್ರಿಯ ದೇವಾಲಯಗಳಿಗೆ ಭೇಟಿ ಕೊಟ್ಟು ಆಶೀರ್ವಾದ ಪಡೆದಿದ್ದಾರೆ. ಸಂಜಯ್ ದತ್ ಅವರು ಹುಲಿ ಕುಣಿತ ಊದು ಪೂಜೆಗೆಂದು ಮಂಗಳೂರಿಗೆ ಬಂದಿದ್ದರು.

ಪೂಜೆಯಲ್ಲಿ ಭಾಗಿಯಾಗಿದ್ದ ನಟ ಸಂಜಯ್ ದತ್ ಹುಲಿ ಕುಣಿತ ನೋಡಿ ದಂಗಾದರು, ಅಲ್ಲದೆ ಹುಲಿ ಕುಣಿತದ ಹಿನ್ನೆಲೆ ಸಂಗೀತ ಕೇಳಿ ತಲೆದೂಗಿದ್ದಾರೆ. ಸಂಜಯ್ ದತ್ ಅವರು ಕಟೀಲು ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಹ ಸಲ್ಲಿಸಿದ್ದಾರೆ. ದೇವಾಲಯದವರು ಸಂಜಯ್ ದತ್ ಅವರನ್ನು ಸನ್ಮಾನ ಮಾಡಿದ್ದಾರೆ.

Leave a Reply

Your email address will not be published. Required fields are marked *