Suicide:(ಅ.13) ಮಹಿಳೆಯೊಬ್ಬಳು ಗಂಡ ತನಗೆ ಹೊಸ ಸೀರೆ ತಂದುಕೊಟ್ಟಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಜಾರ್ಖಂಡ್ನಲ್ಲಿ ನಡೆದಿದೆ. 26 ವರ್ಷದ ಸೆಂಡೋ ದೇವಿ ಎಂಬಾಕೆಯೇ ಗಂಡನ ಮೇಲೆ ಕೋಪಗೊಂಡು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ⭕ತನ್ನ ಕಾಮ ತೀರಿಸಿಕೊಳ್ಳಲು ಹೆತ್ತ ಮಕ್ಕಳನ್ನೇ ಕೊಂದ ಪಾಪಿ ತಾಯಿ!!
ದಸರಾಕ್ಕೆ ಹೊಸ ಸೀರೆಯನ್ನು ಪತ್ನಿ ಕೇಳಿದ್ದು, ಆದರೆ ಟ್ರಾಕ್ಟರ್ ಡ್ರೈವರ್ ಆಗಿರುವ ಪತಿಗೆ ತಂದುಕೊಡಲು ಸಾಧ್ಯವಾಗಿಲ್ಲ. ಹೀಗಾಗಿ ಈಕೆ ಆತ್ಮಹತ್ಯೆ ಮಾಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ವರದಿಯಾಗಿದೆ.