Fri. Apr 11th, 2025

Wife Harassment: ರಾತ್ರಿಯಾದರೆ ಸಾಕು ಹೆಂಡತಿಯಿಂದ ಗಂಡನಿಗೆ ಲೈಂಗಿಕ ಕಿರುಕುಳ – ಬೇಸತ್ತ ಗಂಡ ಆತ್ಮಹತ್ಯೆಗೆ ಯತ್ನ!!!

Wife Harassment:(ಅ.13) ಗಂಡಂದಿರಿಂದ ಮಹಿಳೆಯರಿಗೆ, ಹೆಂಡತಿಯರಿಗೆ ಲೈಂಗಿಕ ಕಿರುಕುಳ, ದೌರ್ಜನ್ಯ ನಡೆಯುವುದು ಸಾಮಾನ್ಯ. ಆದರೆ ಇಲ್ಲೊಂದೆಡೆ ಹೆಂಡತಿಯಿಂದಲೇ ಗಂಡನಿಗೆ ಲೈಂಗಿಕ ಕಿರುಕುಳ ನಡೆಯುತ್ತಿದ್ದು, ಇದರಿಂದ ಬೇಸತ್ತ ಗಂಡ ಆತ್ಮಹತ್ಯೆಗೆ ಯತ್ನಿಸಿದಂತಹ ವಿಚಿತ್ರ ಘಟನೆ ನಡೆದಿದೆ.

ಇದನ್ನೂ ಓದಿ: ⭕Ghost Ride car : ಬೆಂಕಿ ಹೊತ್ತಿಕೊಂಡೇ ರಸ್ತೆಯಲ್ಲಿ ಸಾಗಿದ ಕಾರು

ಕೈಹಿಡಿದ ಧರ್ಮಪತ್ನಿಯ ಲೈಂಗಿಕ ಕಿರುಕುಳ ತಾಳಲಾರದೆ ಪತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಅಮರಾವತಿಯ ಕಾಕಿನಾಡದಲ್ಲಿ ನಡೆದಿದ್ದು, ಜನರನ್ನು ಆಶ್ಚರ್ಯಚಕಿತರನ್ನಾಗಿಸಿದೆ.

ಆತನ ಹೆಂಡತಿ ರಾತ್ರಿಯಾದರೆ ಸಾಕು ನಾವು ಹೇಗೆಲ್ಲ ಲೈಂಗಿಕತೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಪೀಡಿಸುತ್ತಾಳೆ. ಆಕೆಯ ಮನೆಯವರು ಕೂಡ ಕಿರುಕುಳ ನೀಡುತ್ತಾರೆ ಎಂಬುದನ್ನು ವಿವರಿಸಿ, ತಾನು ನಿತ್ಯ ಎಷ್ಟು ಮಾನಸಿಕ ಯಾತನೆ ಅನುಭವಿಸುತ್ತಿದ್ದೇನೆ ಎಂದು ಮೂರು ಪುಟಗಳ ಪತ್ರ ಬರೆದಿಟ್ಟಿದ್ದಾನೆ.

ಅಲ್ಲದೆ ಪತ್ನಿಯ ನಡತೆ ಚೆನ್ನಾಗಿಲ್ಲ, ಮದುವೆಯಾದ ಮೇಲೆ ಆಕೆ ತನ್ನ ಸೋದರ ಮಾವನ ಜೊತೆ ಅಕ್ರಮ ಸಂಬಂಧ ಮುಂದುವರಿಸಿದ್ದಾಳೆ. ನಿತ್ಯ ಅವನ ಜೊತೆ ಹೋಗಿ ಮತ್ತೆ ಮನೆಗೆ ಬಂದು ಅಕ್ಕಪಕ್ಕದವರ ಜತೆ ನನ್ನನ್ನು ಮೂದಲಿಸುತ್ತ ಹರಟೆ ಹೊಡೆಯುತ್ತಿರುತ್ತಾಳೆ. ರಾತ್ರಿ ವೇಳೆ ತನಗೆ ತಡೆದುಕೊಳ್ಳಲಾರದಷ್ಟು ಲೈಂಗಿಕ ಕಿರುಕುಳ ನೀಡುತ್ತಿದ್ದಾಳೆ ಎಂದು ಸಂತ್ರಸ್ತ ಪತ್ರದಲ್ಲಿ ಬರೆದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು