BBK11:(ಅ.14) ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ನಿರೂಪಕನ ಸ್ಥಾನದಿಂದ ಕೆಳಗಿಳಿಯುತ್ತಿರುವುದಾಗಿ ನಟ ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. 11 ಆವೃತ್ತಿಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದ ಕಿಚ್ಚ ಸುದೀಪ್ ಅವರು ಇದೀಗ ಕಾರ್ಯಕ್ರಮವನ್ನು ತೊರೆಯುವ ನಿರ್ಧಾರಕ್ಕೆ ಬಂದಿದ್ದು, ಈ ವಿಚಾರ ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದೆ.
ಇದನ್ನೂ ಓದಿ: 🛑ಬೆಳ್ತಂಗಡಿ: ಭಾರೀ ಮಳೆಗೆ ಕುಸಿದ ಗುಡ್ಡ
ಈ ಕುರಿತು ಸುದೀಪ್ ಟ್ವೀಟ್ ಮಾಡಿದ್ದು, #BBK11 ಗೆ ತೋರಿದ ಉತ್ತಮ ಪ್ರತಿಕ್ರಿಯೆಗಾಗಿ ಎಲ್ಲರಿಗೂ ಧನ್ಯವಾದಗಳು. ನೀವೆಲ್ಲರೂ ನನಗೆ ಮತ್ತು ಕಾರ್ಯಕ್ರಮಕ್ಕೆ ತೋರಿದ ಪ್ರೀತಿಯ ಬಗ್ಗೆ ಟಿವಿಆರ್ (ಸಂಖ್ಯೆ)ಯಲ್ಲಿ ಕಾಣುತ್ತಿದೆ. ಈ 10 ಪ್ಲಸ್ 1 ವರ್ಷ ನಿಮ್ಮೊಂದಿಗೆ ಪಯಣ ಮಾಡಿದ್ದು ಉತ್ತಮವಾಗಿತ್ತು. ನಾನು ಈಗ ಬೇರೆ ಕಡೆಗೆ ನನ್ನ ನಡೆಯನ್ನು ಮುಂದುವರಿಸಲು ಇದು ಸಮಯವಾಗಿದೆ. ಇದು BBK ಗೆ ಹೋಸ್ಟ್ ಆಗಿ ನನ್ನ ಕೊನೆಯ ಸೀಸನ್ ಆಗಿರುತ್ತದೆ ಮತ್ತು ನನ್ನ ನಿರ್ಧಾರವನ್ನು ನನ್ನ ಕಲರ್ಸ್ ಮತ್ತು ಇಷ್ಟು ವರ್ಷಗಳಿಂದ ಬಿಗ್‌ಬಾಸ್ ಅನ್ನು ಅನುಸರಿಸಿದ ಎಲ್ಲರೂ ಗೌರವಿಸುತ್ತಾರೆ ಎಂದು ನಾನು ನಂಬುತ್ತೇನೆ. ಈ ಸೀಸನ್ ಅನ್ನು ಅತ್ಯುತ್ತಮವಾಗಿ ಮಾಡೋಣ, ಮತ್ತು ನಾನು ಕೂಡ ಅತ್ಯುತ್ತಮವಾಗಿ ನಿಮ್ಮೆಲ್ಲರನ್ನು ರಂಜಿಸುತ್ತೇನೆ. ಇದಕ್ಕಾಗಿ ಎಲ್ಲರಿಗೂ ಧನ್ಯವಾದಗಳು, ಲವ್ ಮತ್ತು ಹಗ್ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
ಭರ್ಜರಿ ಟಿಆರ್ಪಿ (Target Rating Point) ಮತ್ತು ಟಿವಿಆರ್ (Television Rating Point) ಪಡೆದುಕೊಳ್ಳುವ ಮೂಲಕ ಉಳಿದ ಎಲ್ಲಾ ರಿಯಾಲಿಟಿ ಶೋ ಮತ್ತು ಸೀರಿಯಲ್ಗಳನ್ನು ಹಿಂದಿಕ್ಕಿದೆ. ಇದೇ ಪೋಸ್ಟರ್ ಅನ್ನು ಹಾಕಿ ಸುದೀಪ್ ವಿದಾಯದ ಘೋಷಣೆ ಮಾಡಿದ್ದಾರೆ. ಇದೀಗ ಬಿಗ್‌ಬಾಸ್ 9.9. ಟಿವಿಆರ್ ಪಡೆದುಕೊಳ್ಳುವ ಮೂಲಕ ಅತಿ ಹೆಚ್ಚು ರೇಟಿಂಗ್ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಸುದೀಪ್ ಅವರು ಜನರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಕೇಕ್ ಕಟ್ ಮಾಡುವ ಮೂಲಕ ಬಿಗ್‌ಬಾಸ್ ತಂಡವು ಇದನ್ನು ಸೆಲೆಬ್ರೇಟ್ ಮಾಡಿದೆ.
ಕಿಚ್ಚನ ಪೋಸ್ಟ್ ಗೆ ಎಲ್ಲರೂ ಹೃದಯ ಛಿದ್ರವಾಗಿದೆ ಎಂದು ಬರೆದುಕೊಂಡಿದ್ದಾರೆ. ನೀವಿಲ್ಲದೆ ಬಿಗ್‌ಬಾಸ್ ಇಲ್ಲ ಅಣ್ಣ… ಕಿಚ್ಚನಿಲ್ಲದೆ ಬಿಗ್‌ಬಾಸ್ ಇಲ್ಲ , ಮತ್ತೆ ಕೆಲವರು ಗೋಲ್ಡನ್ ಇರಾ ಎಂಡ್ ಆಯ್ತು ಎಂದು ಪ್ರತಿಕ್ರಿಯೆ ನೀಡಿದ್ದಾರೆ.