ಬೆಳ್ತಂಗಡಿ:(ಅ.14) ನೆರಿಯ ಗ್ರಾಮದ ತೋಟತ್ತಾಡಿ ಕುತ್ರಿಜಾಲು ನಿವಾಸಿಯಾದ ಶಿವಕುಮಾರ್ ಇವರು ಅಣಿಯೂರು ನದಿಗೆ ಮೀನು ಹಿಡಿಯಲು ಹೋಗಿ ನಾಪತ್ತೆಯಾದ ಘಟನೆ ಅ.13ರಂದು ನಡೆದಿದೆ.
ಇದನ್ನೂ ಓದಿ: ⚖Daily Horoscope: ಇಂದು ಈ ರಾಶಿಯವರಿಗೆ ಸರ್ಕಾರಿ ಉದ್ಯೋಗ ಲಭಿಸುವುದು!!!
ನಿನ್ನೆ ತಡರಾತ್ರಿ ಶಿವಕುಮಾರ್ ನ ಮೃತದೇಹವು ಅಣಿಯೂರು ನದಿಯಲ್ಲಿ ಪತ್ತೆಯಾಗಿದ್ದು, ಅಗ್ನಿಶಾಮಕ ದಳ ಹಾಗೂ ಊರವರ ಸಹಾಯದಿಂದ ಶವವನ್ನು ಹೊರತೆಗೆದಿದ್ದಾರೆ. ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ಶವವನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ಘಟನೆಯ ಬಗ್ಗೆ ಧರ್ಮಸ್ಥಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.