ಮಡಂತ್ಯಾರು :(ಅ.14) ಗೃಹೋಪಯೋಗಿ ವಸ್ತುಗಳಿಗೆ ಪ್ರಸಿದ್ದಿ ಹೊಂದಿರುವ ಮಡಂತ್ಯಾರಿನ ಭದ್ರಾ ಹೋಮ್ ಅಪ್ಲೈಯನ್ಸಸ್ ಮಳಿಗೆ ಇಂದು ವಿಶೇಷ ಆಕರ್ಷಣೆಗೆ ಸಾಕ್ಷಿಯಾಯಿತು. ಹೌದು, ಮಡಂತ್ಯಾರಿನ ಭದ್ರಾ ಹೋಮ್ ಅಪ್ಲೈಯನ್ಸಸ್ ಮಳಿಗೆಯ ಆವರಣದಲ್ಲಿ ಭರ್ಜರಿ ಹುಲಿ ಕುಣಿತವನ್ನು ಭದ್ರಾ ಸಂಸ್ಥೆಯ ಮಾಲೀಕರಾದ ಮಂಜುನಾಥ್ ಆಚಾರ್ಯ ಅವರು ಏರ್ಪಡಿಸಿದ್ದರು.
ಇದನ್ನೂ ಓದಿ: 🟣ಬೆಳ್ತಂಗಡಿ: ನವೆಂಬರ್ 10 ರಂದು ರೆಖ್ಯ ದಲ್ಲಿ ಮೊಳಗಲಿದೆ ಹಿಂದುತ್ವದ ಘರ್ಜನೆ!!
ಮಳಿಗೆ ಆವರಣದಲ್ಲಿ ಅತ್ಯದ್ಭುತ ಪ್ರದರ್ಶನವನ್ನು ಬಂಟ್ವಾಳದ ಬಡ್ಡೆ ಕಟ್ಟೆ ಹುಲಿ ತಂಡ ಮಾಡಿ ಜನರನ್ನ ಆಕರ್ಷಿಸಿತು. ಅದರಲ್ಲೂ ಕಪ್ಪು ಹುಲಿಗಳ ಕುಣಿತ ಮತ್ತು ನೆಗೆತ ಜನರನ್ನು ನಿಬ್ಬೆರಗಾಗಿಸಿತು. ಭದ್ರಾ ಸಂಸ್ಥೆ ಮಾಲೀಕರಾದ ಮಂಜುನಾಥ್ ಆಚಾರ್ಯ ಅವರು ತುಳುನಾಡಿನ ಸಂಸ್ಕೃತಿಗೆ ಆದ್ಯತೆ ನೀಡುವ ವ್ಯಕ್ತಿಯಾಗಿದ್ದಾರೆ.
ಹೀಗಾಗಿ ಪ್ರತಿ ವರ್ಷ ತಮ್ಮ ಬಂಟ್ವಾಳ ಮತ್ತು ಬಿಸಿ ರೋಡ್ ನ ಮಳಿಗೆಗಳಲ್ಲಿ ಹುಲಿ ಕುಣಿತದ ಸೇವೆಯನ್ನು ಮಾಡಿಸುತ್ತಿದ್ದರು. ಈ ಬಾರಿ ನೂತನವಾಗಿ ಆರಂಭವಾದ ಮಡಂತ್ಯಾರಿನ ಮಳಿಗೆಯಲ್ಲಿ ಹುಲಿ ಕುಣಿತ ಪ್ರದರ್ಶನ ಮಾಡಿ ಗ್ರಾಹಕರಿಗೆ ಮನರಂಜನೆ ನೀಡುವ ಕೆಲಸ ಮಾಡಿದ್ದಾರೆ. ಹುಲಿ ಕುಣಿತದ ಸಂದರ್ಭ ನೂರಾರು ಜನರು ಮಳಿಗೆಯ ಮುಂಭಾಗ ಸೇರಿದ್ದರು.
ಭದ್ರಾ ಅಂದರೆ ಭರವಸೆ ಮತ್ತು ಗುಣಮಟ್ಟ.!
ಭದ್ರಾ ಅಂದರೆ ಭರವಸೆ ಮತ್ತು ಗುಣಮಟ್ಟ ಯಾಕೆಂದರೆ, ಹುಲಿ ಕುಣಿತದ ತಂಡದ ಪ್ರದರ್ಶನದ ವೇಳೆ ಭದ್ರಾ ತನ್ನಲ್ಲಿದ್ದ ಡೈನಿಂಗ್ ಟೇಬಲ್ ಅನ್ನು ಹುಲಿ ವೇಷಧಾರಿಗಳಿಗೆ ನೀಡಿತ್ತು. ಈ ವೇಳೆ ಈ ಡೈನಿಂಗ್ ಟೇಬಲ್ ಮೇಲೆ 6 ಕಪ್ಪು ಹುಲಿಗಳು ಕುಣಿತದ ಜೊತೆಗೆ ನೆಗೆದರು ಕೂಡ ಯಾವುದೇ ಹಾನಿ ಡೈನಿಂಗ್ ಟೇಬಲ್ ಗೆ ಉಂಟಾಗಿಲ್ಲ. ಇದು ಭದ್ರಾದ ಗೃಹೋಪಯೋಗಿ ವಸ್ತುಗಳ ಗುಣಮಟ್ಟವನ್ನು ತೋರಿಸಿಕೊಡುತ್ತದೆ ಎಂದು ಮಾಲೀಕ ಮಂಜುನಾಥ್ ಆಚಾರ್ಯ ತಿಳಿಸಿದ್ದಾರೆ.
ಭದ್ರಾ ಸಂಸ್ಥೆ ಮಾಲೀಕರ ಮಗಳಿಂದ ಭರ್ಜರಿ ಹುಲಿ ಕುಣಿತ..!
ತುಳುನಾಡು ಅಂದರೆ ಹುಲಿ ಕುಣಿತಕ್ಕೆ ತುಂಬಾನೇ ಫೇಮಸ್….ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಹುಲಿ ಕುಣಿತ ಮಾಡುತ್ತಾರೆ. ಇನ್ನು ಮಡಂತ್ಯಾರಿನ ಭದ್ರಾ ಹೋಮ್ ಅಪ್ಲೈಯನ್ಸಸ್ ಮಳಿಗೆಯ ಆವರಣದಲ್ಲಿ ಭದ್ರಾ ಸಂಸ್ಥೆ ಮಾಲೀಕರ ಮಗಳಾದ ಮಾಲ್ಸಿ ಎಂ ಆಚಾರ್ಯ ಹುಲಿಗಳೊಂದಿಗೆ ಕುಣಿದರು. ಅತ್ಯದ್ಭುತವಾಗಿ ಹುಲಿ ಕುಣಿತ ಪ್ರದರ್ಶಿಸಿದರು.