Wed. Nov 20th, 2024

Kokkada: ಕೊಕ್ಕಡ – ಕೆನರಾ ಬ್ಯಾಂಕಿನಲ್ಲಿ ಅವ್ಯವಹಾರ, ವಂಚನೆ – ಲೂಟಿಗಳಿಂದ ಗ್ರಾಹಕರಿಗೆ ಆಗುತ್ತಿರುವ ಸಮಸ್ಯೆಗಳ ವಿರುದ್ದ ಬೃಹತ್ ಪ್ರತಿಭಟನೆ!!! –

ಕೊಕ್ಕಡ :(ಅ.15) ಕೆನರಾ ಬ್ಯಾಂಕ್ ನ ಕೊಕ್ಕಡ ಶಾಖೆಯಲ್ಲಿ ನಡೆಯುತ್ತಿರುವ ಅವ್ಯವಹಾರ, ವಂಚನೆ, ಲೂಟಿಗಳಿಂದ ಗ್ರಾಹಕರಿಗೆ ಆಗುತ್ತಿರುವ ಸಮಸ್ಯೆ, ಅನ್ಯಾಯಗಳನ್ನು ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಹಾಗೂ ವರದಿ ಬಹಿರಂಗ ಪಡಿಸಬೇಕು. ಎಲ್ಲಾ ಅನ್ಯಾಯಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕೆಂದು ಅ.14ರಂದು ಕೊಕ್ಕಡ ಕೆನರಾ ಬ್ಯಾಂಕ್‌ ಮುಂಭಾಗದಲ್ಲಿ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಅನಿರ್ಧಿಷ್ಟ ಕಾಲ ಧರಣಿ ಸತ್ಯಾಗ್ರಹ ನಡೆಯಿತು.

ಇದನ್ನೂ ಓದಿ: 🟣ಧರ್ಮಸ್ಥಳ: ಪಿಯುಸಿ ಯಲ್ಲಿ ರಾಜ್ಯಕ್ಕೆ 5ನೇ ಸ್ಥಾನ ಪಡೆದಿದ್ದ

ಪ್ರತಿಭಟನೆ ಆಯೋಜಿಸಿದ ಕೊಕ್ಕಡ ಕೆನರಾ ಬ್ಯಾಂಕ್‌ ದೌರ್ಜನ್ಯ ವಿರೋಧಿ ಹೋರಾಟ ಸಮಿತಿಯವರು, ನೂರಾರು ಮಂದಿ ಗ್ರಾಹಕರು ಪ್ರತಿಭಟನೆಯಲ್ಲಿ ಭಾಗಿಯಾದರು. ಹಣ ಲೂಟಿ ನಡೆಸಿರುವುದರ ವರದಿ ಕೇಳಿದ್ದರು. ಇನ್ನೂ ನೀಡಿಲ್ಲ ಪ್ರತಿ ಬಾರಿ ಗ್ರಾಹಕರ ಖಾತೆಯಿಂದ ಹಣ ಕಟ್ ಆಗುತ್ತಿರುವುದು ದೊಡ್ಡ ಮಟ್ಟದ ಆತಂಕಕ್ಕೆ ಗ್ರಾಹಕರು ಒಳಗಾಗಿದ್ದಾರೆ, ಹಾಗೆಯೇ ವಿವರಣೆ ಕೇಳಿ ತಿಳಿಯಲು ಭಾಷೆಯ ಸಮಸ್ಯೆ ಆಗುತ್ತಿದ್ದು ಸ್ಥಳೀಯ ಭಾಷೆ ಗೊತ್ತಿರುವವರು ಬ್ಯಾಂಕಿನಲ್ಲಿ ಕೆಲಸ ನಿರ್ವಹಿಸಬೇಕು ಎಂದು ಗ್ರಾಹಕರು ಒತ್ತಾಯಿಸಿದರು.

ಬ್ಯಾಂಕಿನ ಸರಾಫರಾಗಿ 19ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಪದ್ಮನಾಭ ಆಚಾರ್ಯರನ್ನು ವಿನಾಕಾರಣ ಕೆಲಸದಿಂದ ವಜಾ ಮಾಡಿದ್ದು, ಕಾರಣ ಕೇಳಿದ್ದಕ್ಕೆ ನೀವು ನಿರ್ಲಕ್ಷ ಮತ್ತು ದುಷ್ಕೃತ್ಯ ಎಸಗಿದ್ದೀರಿ ಎಂದು ಆರೋಪ ಹೊರಿಸಿ ಕಳಿಸಿರುವುದರ ಬಗ್ಗೆಯು ಹೋರಾಟ ನಡೆಸಿದರು.

ಹೋರಾಟದಲ್ಲಿ ಬಿ ಎಂ ಭಟ್, ಸಂಚಾಲಕರಾದ ಶೀನ ನಾಯ್ಕ, ಡಾ. ಗಣೇಶ್ ಪ್ರಸಾದ್, ತುಕ್ರಪ್ಪ ಶೆಟ್ಟಿ ನೂಜೆ, , ಸುಬ್ರಮಣ್ಯ ಶಬರಾಯ, ಇಸ್ಮಾಯಿಲ್, ಶೀನ ನಾಯ್ಕ, ಶ್ಯಾಮರಾಜ್, ಶ್ರೀಧರ ಗೌಡ, ಜೇಸುದಾಸ್, ಸತ್ಯದಾಸ್, ಫಾರುಖ್ ಮಡೆಂಜೋಡಿ, ಪ್ರಶಾಂತ ರೈ, ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *