Fri. Apr 11th, 2025

Vijayapura: ಪ್ರಯಾಣಿಕರ ಜೀವದ ಜತೆ ಚೆಲ್ಲಾಟ – ಬಸ್ಸಿನ ಫ್ರಂಟ್‌ ಗ್ಲಾಸ್ ಒಡೆದರೂ ಹೆಲ್ಮೆಟ್ ಧರಿಸಿ ಚಾಲನೆಗೆ ಯತ್ನ!!! – ಕೆಂಡಾಮಂಡಲರಾದ ಪ್ರಯಾಣಿಕರು!!

ವಿಜಯಪುರ:(ಅ.15) ಬೈಕ್ ಓಡಿಸುವಾಗ ಹೆಲ್ಮೆಟ್ ಹಾಕುವುದು ಸಾಮಾನ್ಯ. ಆದರೆ, ಖಾಸಗಿ ಬಸ್ ಚಾಲಕನೊಬ್ಬ ಹೆಲ್ಮೆಟ್‌ ಹಾಕಿಕೊಂಡು ಬಸ್‌ ಚಾಲನೆ ಮಾಡುವ ಮೂಲಕ ಪ್ರಯಾಣಿಕ ಜೀವದ ಜತೆಗೆ ಚೆಲ್ಲಾಟ ಆಡಲು ಮುಂದಾದ ಪ್ರಸಂಗ ನಡೆದಿದೆ.

ಇದನ್ನೂ ಓದಿ: 🔥Chaitra Kundapur: ಬಿಗ್‌ ಬಾಸ್‌ ಮನೆಯಲ್ಲಿ ಕೆರಳಿಕೆಂಡವಾದ ಹಿಂದೂ ಫೈರ್ ಬ್ರ್ಯಾಂಡ್‌ ಚೈತ್ರಾ!!!

ವಿಜಯಪುರದಿಂದ ಬೆಂಗಳೂರಿಗೆ ಪ್ರತಿದಿನ ರಾತ್ರಿ 10ಗಂಟೆಗೆ ಪ್ರಯಾಣ ಬೆಳೆಸುವ ಖಾಸಗಿ ಬಸ್‌ ಮಾಲೀಕರು ಹಾಗೂ ಚಾಲಕರ ನಿರ್ಲಕ್ಷದಿಂದ ಅವಘಡ ಸಂಭವಿಸಿದ್ದು, ಪ್ರಯಾಣಿಕ ಮುನ್ನೆಚ್ಚರಿಕೆಯಿಂದ, ಆಗಬಹುದಾದ ಅನಾಹುತ ತಪ್ಪಿದೆ.

ಅ.12ರ ರಾತ್ರಿ ಖಾಸಗಿ ಬಸ್ ಚಾಲಕ ಏಕಾಏಕಿ ಹೆಲ್ಮೆಟ್ ಹಾಕಿ ಬಸ್ ಚಾಲನೆ ಮಾಡಲು ಮುಂದಾಗಿದ್ದ. ಇದರಿಂದ ಕಕ್ಕಾಬಿಕ್ಕಿಯಾಗಿ ಪ್ರಯಾಣಿಕರು ಪ್ರಶ್ನಿಸಿದ್ದಾರೆ.

ಈ ವೇಳೆ ಅಸಲಿ ವಿಷಯ ಬಾಯಿಬಿಟ್ಟ ಚಾಲಕ, ಬಸ್ಸಿನ ಮುಂಭಾಗದ ಗ್ಲಾಸ್ ಒಡೆದಿರುವುದಾಗಿ ತಿಳಿಸಿದ್ದಾನೆ. ಆಗ ಸಿಟ್ಟಿಗೆದ್ದ ಎಲ್ಲ ಪ್ರಯಾಣಿಕರು ಬಸ್ಸಿನಿಂದ ಕೆಳಗಿಳಿದು, “ನಮ್ಮ ಜೀವದ ಜತೆಗೆ ಚೆಲ್ಲಾಟ ಆಡಬೇಡಿ, ಬೇರೆ ಬಸ್‌ ವ್ಯವಸ್ಥೆ ಮಾಡಿಕೊಡಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು