ಬೆಳ್ತಂಗಡಿ :(ಅ.16) ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಹಲವು ಸಮಸ್ಯೆಗಳ ಆಗರವಾಗಿದೆ. ಅದರಲ್ಲೂ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ರಸ್ತೆಗಳು ಹೊಂಡ ಗುಂಡಿಗಳಿಂದ ತುಂಬಿದ್ದು, ಗುರುವಾಯನಕೆರೆ, ಸಂತೆಕಟ್ಟೆ, ,ಬೆಳ್ತಂಗಡಿಯ ಪೇಟೆ, ಲಾಯಿಲ, ಕಾಶಿಬೆಟ್ಟು, ಉಜಿರೆ ಪೇಟೆ ಸೇರಿದಂತೆ ಹಲವು ಕಡೆಗಳಲ್ಲಿ ರಸ್ತೆಯ ಸಮಸ್ಯೆಗಳು ತಾಂಡವವಾಡುತ್ತಿದೆ.
ಇದನ್ನೂ ಓದಿ: ⭕ದೊಡ್ಮನೆಯಲ್ಲಿ ಹೊಡೆದಾಡಿಕೊಂಡ ಜಗದೀಶ್, ರಂಜಿತ್
ಈ ಕುರಿತು ಯು ಪ್ಲಸ್ ವಾಹಿನಿಗೆ ವಾಹನ ಸವಾರರು ಹಾಗೂ ಸಾರ್ವಜನಿಕರು ಪ್ರತಿಕ್ರಿಯೆ ನೀಡಿದ್ದು, ರಸ್ತೆಯ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ. ನಮಗೆ ಸಂಚಾರ ಮಾಡಲು ಸುಸಜ್ಜಿತವಾದ ರಸ್ತೆಯನ್ನು ನಿರ್ಮಾಣ ಮಾಡಿ ಕೊಡಿ.
ಮಾತ್ರವಲ್ಲ ಉತ್ತಮ ರಸ್ತೆಯನ್ನು ನಿರ್ಮಾಣ ಮಾಡಿ ಕೊಡುವ ಮೂಲಕ ಪಾದಚಾರಿಗಳ ಜೊತೆಗೆ ವಾಹನದಲ್ಲಿ ಸಂಚಾರ ಮಾಡುವ ಪ್ರಯಾಣಿಕರ ಜೀವ ಉಳಿಸಿ ಎಂದು ಮನವಿ ಮಾಡಿದ್ದಾರೆ.
ಈ ಮೊದಲು ಡಿಪಿ ಜೈನ್ ಕಂಪನಿಗೆ ರಸ್ತೆಯ ಕಾಮಗಾರಿಯ ಟೆಂಡರ್ ಅನ್ನು ವಹಿಸಿ ಕೊಡಲಾಗಿತ್ತು. ಆದ್ರೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಾ ಇದ್ದುದರಿಂದ ಮುಗ್ರೋಡಿ ಕನ್‌ಸ್ಟ್ರಕ್ಷನ್ ಕಂಪನಿಗೆ ವಹಿಸಿಕೊಡಲಾಗಿದೆ. ಇನ್ನು ಮುಗ್ರೋಡಿ ಕನ್‌ಸ್ಟ್ರಕ್ಷನ್ ರಸ್ತೆ ಕಾಮಗಾರಿಯ ಜವಾಬ್ದಾರಿ ವಹಿಸಿ 2 ತಿಂಗಳು ಆಗುತ್ತಾ ಬಂದ್ರೂ ಕಾಮಗಾರಿ ಇನ್ನೂ ಕೂಡ ಆರಂಭವಾಗಿಲ್ಲ.
ಯಾಕೆ ಅನ್ನುವುದು ಗೊತ್ತಾಗುತ್ತಿಲ್ಲ. ರಸ್ತೆಗಳು ಹೊಂಡ ಗುಂಡಿಗಳಿಂದ ತುಂಬಿರುವುದರಿಂದ ಗುತ್ತಿಗೆ ವಹಿಸಿಕೊಂಡವರಿಗೆ ಮತ್ತು ವಹಿಸಿಕೊಟ್ಟವರಿಗೆ ವಾಹನ ಸವಾರರು ಹಿಡಿ ಶಾಪ ಹಾಕುತ್ತಿದ್ದಾರೆ.
ಇನ್ನಾದ್ರೂ ಮುಗ್ರೋಡಿ ಕನ್‌ಸ್ಟ್ರಕ್ಷನ್ ಮಾಲಕರು ಯಾಕೆ??… ಕಾಮಗಾರಿ ಆರಂಭ ಮಾಡಿಲ್ಲ ಅನ್ನುವುದರ ಕುರಿತಾಗಿ ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಂಡರೆ ಕಾಮಗಾರಿ ಯಾಕೆ ಲೇಟು ಅನ್ನುವುದು ಗೊತ್ತಾಗುತ್ತೆ. ಇಲ್ಲವಾದಲ್ಲಿ ಇಲ್ಲಿಯ ಜನತೆ, ವಾಹನ ಸವಾರರು ಹಿಡಿಶಾಪ ಹಾಕುವುದು ತಪ್ಪಲ್ಲ….!!